ಎಲ್ಒಸಿ ಬಳಿ ಪಾಕ್ ನಿಂದ ನಿರಂತರ ಗುಂಡಿನ ದಾಳಿ, ಓರ್ವ ಮಹಿಳೆ ಸಾವು

ಭಾರತೀಯ ವಾಯುಪಡೆ ವೈಮಾನಿಕ ದಾಳಿ ನಡೆಸಿದ ನಂತರ ಪಾಕಿಸ್ತಾನ ನಿರಂತರವಾಗಿ ಕದನ ವಿರಾಮ ಉಲ್ಲಂಘಿಸುತ್ತಿದ್ದು, ಗುರುವಾರ ಪಾಕ್ ಸೇನೆ ನಡೆಸಿದ...

Published: 28th February 2019 12:00 PM  |   Last Updated: 28th February 2019 08:24 AM   |  A+A-


Pakistan resorts to heavy shelling along LoC, woman killed

ಸಾಂದರ್ಭಿಕ ಚಿತ್ರ

Posted By : LSB LSB
Source : Online Desk
ಶ್ರೀನಗರ: ಭಾರತೀಯ ವಾಯುಪಡೆ ವೈಮಾನಿಕ ದಾಳಿ ನಡೆಸಿದ ನಂತರ ಪಾಕಿಸ್ತಾನ ನಿರಂತರವಾಗಿ ಕದನ ವಿರಾಮ ಉಲ್ಲಂಘಿಸುತ್ತಿದ್ದು, ಗುರುವಾರ ಪಾಕ್ ಸೇನೆ ನಡೆಸಿದ ಅಪ್ರಚೋದಿತ ಗುಂಡಿನ ದಾಳಿಯಲ್ಲಿ ಓರ್ವ ಮಹಿಳೆ ಮೃತಪಟ್ಟಿದ್ದಾರೆ.

ಇಂದು ಬೆಳಗ್ಗೆ 6 ಗಂಟೆಯಿಂದಲೂ ಕದನ ವಿರಾಮ ಉಲ್ಲಂಘನೆ ಮಾಡುತ್ತಿರುವ ಪಾಕಿಸ್ತಾನ, ಮಧ್ಯಾಹ್ನ 3 ಗಂಟೆಯಷ್ಟರಲ್ಲಿ ಸುಂದರ್ಬನಿ, ಮಂಕೋಟೆ, ಖರಿ ಕರ್ಮರಾ ಮತ್ತು ದಗ್ವಾರ್ ವಲಯಗಳಲ್ಲಿ ಫಿರಂಗಿಗಳ ಮೂಲಕ ಭಾರಿ ಪ್ರಮಾಣದ ಶೆಲ್​ ದಾಳಿ ನಡೆಸಿದೆ.

ಅಪ್ರಚೋದಿತ ದಾಳಿ ನಡೆಸುತ್ತಿರುವ ಪಾಕಿಸ್ತಾನಕ್ಕೆ ಭಾರತ ತಕ್ಕ ಪ್ರತ್ಯುತ್ತರ ನೀಡುತ್ತಿದೆ. 

ನಿನ್ನೆ ಸಹ ರಾಜೌರಿ ಜಿಲ್ಲೆ ಕೃಷ್ಣಘಾಟಿ ಹಾಗೂ ಮೆಂಢರ್ ಬಳಿ ಪಾಕ್ ಸೇನೆ ಗುಂಡಿನ ದಾಳಿ ನಡೆಸಿತ್ತು. ಪಾಕ್ ನ ಎಲ್ಲಾ ದಾಳಿಯನ್ನು ಭಾರತೀಯ ಪಡೆಗಳು ಸಮರ್ಥವಾಗಿ ಹಿಮ್ಮೆಟ್ಟಿಸುತ್ತಿವೆ.
Stay up to date on all the latest ರಾಷ್ಟ್ರೀಯ news
Poll
Farmers

ಕೇಂದ್ರ ಸರ್ಕರದ ಕೃಷಿ ಸುಧಾರಣಾ ಮಸೂದೆಗೆ ವಿರೋಧ ವ್ಯಕ್ತಪಡಿಸುತ್ತಿರುವುದು ಸರಿಯೇ?


Result
ಸರಿ
ತಪ್ಪು
ಗೊತ್ತಿಲ್ಲ
flipboard facebook twitter whatsapp