ಬಟಾಬಯಲಾಯ್ತು ಪಾಕ್ ನಿಜ ಬಣ್ಣ: ಭಾರತ ಹೊಡೆದುರುಳಿಸಿದ್ದ ಎಫ್16 ವಿಮಾನದ ಅವಶೇಷ ಪಿಓಕೆಯಲ್ಲಿ ಪತ್ತೆ!

ಭಾರತದ ಸುಖೋಯ್ ಯುದ್ಧ ವಿಮಾನ ನಡೆಸಿದ ದಾಳಿಗೆ ಉರುಳಿಬಿದ್ದಿದ್ದ ಪಾಕಿಸ್ತಾನದ ಎಫ್16 ವಿಮಾನದ ಅವಶೇಷ ಇಂದು ಪಾಕ್ ಆಕ್ರಮಿತ ...

Published: 28th February 2019 12:00 PM  |   Last Updated: 28th February 2019 12:53 PM   |  A+A-


Wreckage of downed Pakistan's F-16 seen in PoK

ಪಾಕಿಸ್ತಾನದ ಎಪ್-16 ವಿಮಾನದ ಅವಶೇಷ ಪತ್ತೆ

Posted By : SD SD
Source : ANI
ಇಸ್ಲಾಮಾಬಾದ್:  ಭಾರತದ ಸುಖೋಯ್ ಯುದ್ಧ ವಿಮಾನ ನಡೆಸಿದ ದಾಳಿಗೆ ಉರುಳಿಬಿದ್ದಿದ್ದ ಪಾಕಿಸ್ತಾನದ ಎಫ್16 ವಿಮಾನದ ಅವಶೇಷ ಇಂದು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಪತ್ತೆಯಾಗಿದೆ.

ಪಾಕ್ ಆಕ್ರಮಿತ ಕಾಶ್ಮೀರದ(ಪಿಒಕೆ) ಬಳಿ ಇರುವ ಗುಡ್ಡಗಾಡಿನ ಪ್ರದೇಶವೊಂದರಲ್ಲಿ ಎಫ್16 ವಿಮಾನದ ಅವಶೇಷಗಳು ಇಂದು ಪತ್ತೆಯಾಗಿರುವುದನ್ನು ಅಲ್ಲಿನ ಸುದ್ದಿವಾಹಿನಿಗಳು ಪತ್ತೆಹಚ್ಚಿವೆ ಎಂದು ಮೂಲಗಳು ತಿಳಿಸಿವೆ. 

ದಟ್ಟ ಅರಣ್ಯ ಪ್ರದೇಶವೊಂದರಲ್ಲಿ ಎಫ್16 ವಿಮಾನ ಬಿದ್ದಿರುವುದನ್ನು ಪಾಕಿಸ್ತಾನದ ಸೇನಾಪಡೆ ಅವಲೋಕಿಸುತ್ತಿರುವುದು ಕಂಡುಬಂದಿದೆ. 

ನಿನ್ನೆ ಮುಂಜಾನೆ 10.30ಕ್ಕೆ ಪಾಕ್ ವಾಯುಪಡೆಗೆ ಸೇರಿದ ಎಫ್16 ಮೂರು ಯುದ್ಧ ವಿಮಾನಗಳು ಜಮ್ಮುಕಾಶ್ಮೀರದ ನೌಶೇರಾ ಮತ್ತು ಕಿಶಾನ್‍ಗಂಜ್ ಎಂಬಲ್ಲಿ ದಾಳಿ ನಡೆಸಲು ಮುಂದಾಗಿದ್ದವು.

ತಕ್ಷಣವೇ ಎಚ್ಚೆತ್ತುಕೊಂಡ ಭಾರತೀಯ ವಾಯುಪಡೆ ಪಾಕಿಸ್ತಾನದ ಮೂರು ಯುದ್ಧ ವಿಮಾನಗಳನ್ನು ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾಗಿದ್ದವು. ಅದರಲ್ಲೂ ಸುಖೋಯ್ ಯುದ್ಧ ವಿಮಾನ ಪಾಕ್‍ನ ಎಫ್16 ವಿಮಾನದ ಬೆನ್ನತ್ತಿ ಪಿಒಕೆ ಬಳಿ ಹೊಡೆದುರುಳಿಸಿತ್ತು.

ಪಿಓಕೆಯಲ್ಲಿ ಎಪ್ 16 ವಿಮಾನದ ಅವಶೇಷ ಪತ್ತೆಯಾಗಿದೆ. ಆದರೆ ತನ್ನ ಗಡಿ ಪ್ರದೇಶದಲ್ಲಿ ಯಾವುದೇ ವಿಮಾನವನ್ನು ಹೊಡೆದುರುಳಿಸಿಲ್ಲ ಎಂದು ಪಾಕಿಸ್ತಾನ ಕೊಚ್ಚಿಕೊಳ್ಳುತ್ತಿತ್ತು.
Stay up to date on all the latest ರಾಷ್ಟ್ರೀಯ news
Poll
Online education learning

ಆನ್‌ಲೈನ್ ಕಲಿಕೆಯ ಪ್ರಯೋಗವು ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುತ್ತದೆ ಎಂದು ಹಾರ್ವರ್ಡ್ ಪ್ರಾಧ್ಯಾಪಕರೊಬ್ಬರು ಹೇಳಿದ್ದಾರೆ. ನೀವು ಏನಂತೀರಿ?


Result
ಸರಿ
ತಪ್ಪು
ಗೊತ್ತಿಲ್ಲ
flipboard facebook twitter whatsapp