ಮೇಕ್ ಇನ್ ಇಂಡಿಯಾ ಅಡಿ 1.78 ಲಕ್ಷ ಕೋಟಿಯ 111 ಮಿಲಿಟರಿ ಯೋಜನೆಗಳಿಗೆ ಚಾಲನೆ!

ರಕ್ಷಣಾ ಇಲಾಖೆ ಕಳೆದ ಮೂರು ವರ್ಷಗಳಲ್ಲಿ ಮೇಕ್ ಇನ್ ಇಂಡಿಯಾ ಅಡಿ 1.78 ಲಕ್ಷ ಕೋಟಿ ಮೌಲ್ಯದ 111 ಮಿಲಿಟರಿ ಯೋಜನೆಗಳಿಗೆ ಅನುಮೋದನೆ ನೀಡಿದೆ
ಮೇಕ್ ಇನ್ ಇಂಡಿಯಾ ಅಡಿ 1.78 ಲಕ್ಷ ಕೋಟಿಯ 111 ಮಿಲಿಟರಿ ಯೋಜನೆಗಳಿಗೆ ಚಾಲನೆ!
ಮೇಕ್ ಇನ್ ಇಂಡಿಯಾ ಅಡಿ 1.78 ಲಕ್ಷ ಕೋಟಿಯ 111 ಮಿಲಿಟರಿ ಯೋಜನೆಗಳಿಗೆ ಚಾಲನೆ!
ನವದೆಹಲಿ: ರಕ್ಷಣಾ ಸಚಿವಾಲಯ ಕಳೆದ ಮೂರು ವರ್ಷಗಳಲ್ಲಿ ಮೇಕ್ ಇನ್ ಇಂಡಿಯಾ ಅಡಿ 1.78 ಲಕ್ಷ ಕೋಟಿ ಮೌಲ್ಯದ 111 ಮಿಲಿಟರಿ ಯೋಜನೆಗಳಿಗೆ ಅನುಮೋದನೆ ನೀಡಿದೆ.
ರಕ್ಷಣಾ ಇಲಾಖೆಯ ರಾಜ್ಯ ಸಚಿವ ಸುಭಾಶ್ ಭಾಮ್ರೆ ಈ ಬಗ್ಗೆ ಲೋಕಸಭೆಗೆ ಮಾಹಿತಿ ನೀಡಿದ್ದು, ರಕ್ಷಣಾ ಕ್ಷೇತ್ರಕ್ಕೆ ಅಗತ್ಯವಿರುವ ಹಾರ್ಡ್ ವೇರ್ ನ್ನು ಮೇಕ್ ಇನ್ ಇಂಡಿಯಾದ ಅಡಿಯಲ್ಲಿ ತಯಾರಿಸುವ ಒಟ್ಟು 111 ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ. 
2015-18 ವರೆಗೆ ಒಟ್ಟಾರೆ 1.78 ಲಕ್ಷ ಕೋಟಿ ಮೌಲ್ಯದ ಯೋಜನೆಗಳನ್ನು ಅಂಗೀಕರಿಸಲಾಗಿದೆ. ಇದೇ ಅವಧಿಯಲ್ಲಿ 65,471.28 ಕೋಟಿ ರೂಪಾಯಿ ಮೌಲ್ಯದ 99 ಗುತ್ತಿಗೆಗಳನ್ನು ಭಾರತೀಯ ಮಾರಾಟಗಾರೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದ್ದು ಹೆಲಿಕಾಫ್ಟರ್, ಫೈಟರ್ ಏರ್ ಕ್ರಾಫ್ಟ್, ಸಬ್ ಮರೀನ್ ಗಳನ್ನು ಮುಂದಿನ ವರ್ಷಗಳಲ್ಲಿ ಉತ್ಪಾದಿಸಲಾಗುತ್ತದೆ ಎಂದು ಸಚಿವರು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com