ಕುಡಿದ ಮತ್ತಿನಲ್ಲಿ ಮಗುವನ್ನೇ ಬಿಟ್ಟು ಹೋದ ತಾಯಿ: ಅನಾಥ ಮಗುವಿಗೆ ಹಾಲುಣಿಸಿ ಮಾನವೀಯತೆ ಮೆರೆದ ಪೊಲೀಸ್ ಪೇದೆ

ಕುಡಿದ ಮತ್ತಿನಲ್ಲಿ ತಾಯಿಯೊಬ್ಬಳು 2 ತಿಂಗಳ ಪುಟ್ಟ ಕಂದಮ್ಮನನ್ನು ಬಿಟ್ಟುಹೊಗಿದ್ದು, ಅನಾಥವಾಗಿದ್ದ ಹಸುಗೂಸಿಗೆ ಬಾಣಂತಿ ಪೊಲೀಸ್ ಪೇದೆಯೊಬ್ಬರು ಹಾಲುಣಿಸಿ ಮಾನವೀಯತೆ ಮೆರೆದಿರುವ ಘಟನೆ ಹೈದರಾಬಾದ್ ನಲ್ಲಿ...
ಕುಡಿದ ಮತ್ತಿನಲ್ಲಿ ಮಗುವನ್ನೇ ಬಿಟ್ಟು ಹೋದ ತಾಯಿ: ಅನಾಥ ಮಗುವಿಗೆ ಹಾಲುಣಿಸಿದ ಪೊಲೀಸ್ ಪೇದೆ
ಕುಡಿದ ಮತ್ತಿನಲ್ಲಿ ಮಗುವನ್ನೇ ಬಿಟ್ಟು ಹೋದ ತಾಯಿ: ಅನಾಥ ಮಗುವಿಗೆ ಹಾಲುಣಿಸಿದ ಪೊಲೀಸ್ ಪೇದೆ
ಹೈದರಾಬಾದ್: ಕುಡಿದ ಮತ್ತಿನಲ್ಲಿ ತಾಯಿಯೊಬ್ಬಳು 2 ತಿಂಗಳ ಪುಟ್ಟ ಕಂದಮ್ಮನನ್ನು ಬಿಟ್ಟುಹೊಗಿದ್ದು, ಅನಾಥವಾಗಿದ್ದ ಹಸುಗೂಸಿಗೆ ಬಾಣಂತಿ ಪೊಲೀಸ್ ಪೇದೆಯೊಬ್ಬರು ಹಾಲುಣಿಸಿ ಮಾನವೀಯತೆ ಮೆರೆದಿರುವ ಘಟನೆ ಹೈದರಾಬಾದ್ ನಲ್ಲಿ ಭಾನುವಾರ ನಡೆದಿದೆ. 
ಉಸ್ಮಾನಿಯಾ ಆಸ್ಪತ್ರೆ ಬಳಿ ಕುಡಿ ಮತ್ತಿನಲ್ಲಿ ಮಗುವನ್ನು ಎತ್ತಿಕೊಂಡು ಬಂದಿರುವ ಮಹಿಳೆಯೊಬ್ಬಳು, ಎರಡು ನಿಮಿಷದಲ್ಲಿ ಬರುತ್ತೇನೆಂದು ಹೇಳಿ ವ್ಯಕ್ತಿಯೊಬ್ಬರಿಗೆ ನೀಡಿದ್ದಾಳೆ. ಬಳಿಕ ಎಷ್ಟು ಹೊತ್ತಾದರೂ ಮಹಿಳೆ ಮರಳಿ ಬಂದಿಲ್ಲ. ಇದರಿಂದಾಗಿ ವ್ಯಕ್ತಿ ಮಗುವನ್ನು ತನ್ನ ಮನೆಗೆ ಕರೆದೊಯ್ದಿದ್ದಾನೆ. 
ಕೆಲ ಗಂಟೆಗಳ ಬಳಿಕ ಮಗು ಅಳಲು ಆರಂಭಿಸಿದೆ. ಈ ವೇಳೆ ವ್ಯಕ್ತಿ ಹಾಲನ್ನು ನೀಡಿದ್ದಾರೆ. ಆದರೆ, ಮಗು ಸಮಾಧಾನಗೊಂಡಿಲ್ಲ. ಬಳಿಕ ಪೊಲೀಸ್ ಠಾಣೆಗೆ ತೆರಳಿದ ವ್ಯಕ್ತಿ ಮಗುವನ್ನು ನೀಡಿದ್ದಾರೆ. 
ಠಾಣೆಯಲ್ಲಿಯೂ ಮಗು ಅಳುವುದನ್ನು ನಿಲ್ಲಿಸಿಲ್ಲ. ಬಳಿಕ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ರವೀಂದರ್ ಎಂಬುವವರು ತಮ್ಮ ಪತ್ನಿಗೆ ಈ ಕುರಿತು ಮಾಹಿತಿ ನೀಡಿದ್ದಾರೆ. 
ರವೀಂದರ್ ಅವರ ಪತ್ನಿ ಕೂಡ ಪೇದೆಯಾಗಿದ್ದು ಬೇಗುಂಪೇಟೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮಾಹಿತಿ ತಿಳಿಯುತ್ತಿದ್ದಂತೆಯೇ ಠಾಣೆಗೆ ಬಂದಿರುವ ಮಹಿಳಾ ಪೇದೆ ಮಗುವಿಗೆ ಹಾಲುಣಿಸಿ, ಮಾನವೀಯತೆ ಮೆರೆದಿದ್ದಾರೆ. 
ಬಳಿಕ ಮಹಿಳೆಯನ್ನು ಪೊಲೀಸರು ಹುಡುಕಿದ್ದಾರೆ. ಮಹಿಳೆಯನ್ನು ಶಬಾನಾ ಬೇಗಂ ಎಂದು ಗುರ್ತಿಸಲಾಗಿದೆ. ಮಗುವನ್ನು ಅನಾಮಧೇಯ ವ್ಯಕ್ತಿಗೆ ನೀಡಿದ ಸಂದರ್ಭದಲ್ಲಿ ಬೇಗಂ ಅವರು ಪಾನಮತ್ತರಾಗಿದ್ದರೆಂದು ಹೇಳಲಾಗುತ್ತಿದೆ. ಮಗುವನ್ನು ವ್ಯಕ್ತಿಗೆ ನೀಡಿದ ಬಳಿಕ ಮಹಿಳೆಗೆ ಸ್ಥಳ ಮರೆತುಹೋಗಿತ್ತೆಂದು ಹೇಳಲಾಗುತ್ತಿದೆ. ಮಾನವೀಯತೆ ಮೆರೆದ ಪೊಲೀಸರ ಈ ಕಾರ್ಯಕ್ಕೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಪ್ರಶಂಸೆಗಳು ವ್ಯಕ್ತವಾಗತೊಡಗಿವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com