ರಾಹುಲ್ ಗಾಂಧಿ
ರಾಹುಲ್ ಗಾಂಧಿ

ಕಾಂಗ್ರೆಸ್ ಪಕ್ಷದ 10 ಹೊಸ ರಾಷ್ಟ್ರೀಯ ವಕ್ತಾರರನ್ನು ನೇಮಿಸಿದ ರಾಹುಲ್ ಗಾಂಧಿ

ಕಾಂಗ್ರೆಸ್ ಪಕ್ಷದ 10 ಹೊಸ ರಾಷ್ಟ್ರೀಯ ವಕ್ತಾರರನ್ನು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ನೇಮಕ ಮಾಡಿದ್ದಾರೆ. ಈ ಪೈಕಿ ಕೆಲವರು ಈಗಾಗಲೇ ಮಾಧ್ಯಮ ಸಮಿತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು.

ನವದೆಹಲಿ: ಕಾಂಗ್ರೆಸ್ ಪಕ್ಷದ 10 ಹೊಸ ರಾಷ್ಟ್ರೀಯ ವಕ್ತಾರರನ್ನು  ಎಐಸಿಸಿ  ಅಧ್ಯಕ್ಷ ರಾಹುಲ್ ಗಾಂಧಿ ನೇಮಕ ಮಾಡಿದ್ದಾರೆ. ಈ ಪೈಕಿ ಕೆಲವರು ಈಗಾಗಲೇ ಮಾಧ್ಯಮ ಸಮಿತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು.

ರಾಜ್ಯಸಭಾ ಸಂಸದ ಸಯ್ಯದ್  ನಾಸೀರ್ ಹುಸೇನ್,  ಪವನ್ ಖೇರಾ, ಜೈವೀರ್ ಶೆರ್ಗಿಲ್,  ರಾಗಿಣಿ ನಾಯಕ್, ಗೌರವ್ ವಲ್ಲಭ್ ಮತ್ತು ರಾಜೀವ್ ತ್ಯಾಗಿ  ಹೊಸ ರಾಷ್ಟ್ರೀಯ ವಕ್ತಾರರಾಗಿ ನೇಮಕಗೊಂಡಿದ್ದಾರೆ.

ಉತ್ತರ ಪ್ರದೇಶ ಮುಖಂಡ ಅಖಿಲೇಶ್ ಪ್ರತಾಪ್ ಸಿಂಗ್, ಸುನೀಲ್ ಅಹಿರ್, ಹಿನಾ ಕಾವಾರೆ, ಮತ್ತು ಶ್ರವಣ್ ದಾಸೋಜು ಕೂಡಾ ಪಕ್ಷದ ರಾಷ್ಟ್ರೀಯ ವಕ್ತಾರರಾಗಿ ನೇಮಕವಾಗಿದ್ದಾರೆ.

ಎಐಸಿಸಿಯಲ್ಲಿ ಈಗಾಗಲೇ 9 ಉನ್ನತ ಮಟ್ಟದ ನಾಯಕರು  ಹಿರಿಯ ವಕ್ತಾರರನ್ನಾಗಿ ಹಾಗೂ 26 ಮಂದಿ ವಕ್ತಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಶಮಾ ಮೊಹಮ್ಮದ್, ಐಶ್ವರ್ಯ ಮಹಾದೇವ್, ಅದಿಲ್ ಬೊಪಾರೈ, ಅಮಾನ್ ಪವರ್, ಸಂಜಯ್ ಚೊಕರ್, ಅನಿಲ್  ಧಂತೊರಿ ಮತ್ತಿತರನ್ನು ಹೊಸ ಮಾಧ್ಯಮ ಪದಾಧಿಕಾರಿಗಳಾಗಿ ರಾಹುಲ್ ಗಾಂಧಿ ನೇಮಿಸಿದ್ದಾರೆ.

ಇವರಲ್ಲದೇ ಸಂಜಯ್ ಸಿಂಗ್ ಅವರನ್ನು  ರಾಷ್ಟ್ರೀಯ ಮಾಧ್ಯಮ ಸಮನ್ವಯಕಾರರ ಮುಖ್ಯಸ್ಥರನ್ನಾಗಿ ಮತ್ತು ಮನೋಜ್ ತ್ಯಾಗಿ, ಮೊಹಮ್ಮದ್ ಖಾನ್ ಅವರನ್ನು  ರಾಷ್ಟ್ರೀಯ ಮಾಧ್ಯಮ ಸಮನ್ವಯಕಾರರಾಗಿ  ನೇಮಕ ಮಾಡಲಾಗಿದೆ.

Related Stories

No stories found.

Advertisement

X
Kannada Prabha
www.kannadaprabha.com