ಸರ್ಜಿಕಲ್ ಸ್ಟ್ರೈಕ್ ನಿರ್ಧಾರ 'ದೊಡ್ಡ ರಿಸ್ಕ್', ಆದರೆ ಯೋಧರ ಸುರಕ್ಷತೆ ಬಗ್ಗೆ ಕಾಳಜಿ ವಹಿಸಿದ್ದೆ: ಪ್ರಧಾನಿ ಮೋದಿ

ಎರಡು ವರ್ಷಗಳ ಹಿಂದೆ ಭಾರತೀಯ ಸೇನೆ ಯಶಸ್ವಿಯಾಗಿ ನಡೆಸಿದ್ದ ಸರ್ಜಿಕಲ್ ಸ್ಟ್ರೈಕ್ ಕುರಿತಂತೆ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ಸರ್ಜಿಕಲ್ ಸ್ಟ್ರೈಕ್...
ನರೇಂದ್ರ ಮೋದಿ
ನರೇಂದ್ರ ಮೋದಿ
ನವದೆಹಲಿ: ಎರಡು ವರ್ಷಗಳ ಹಿಂದೆ ಭಾರತೀಯ ಸೇನೆ ಯಶಸ್ವಿಯಾಗಿ ನಡೆಸಿದ್ದ ಸರ್ಜಿಕಲ್ ಸ್ಟ್ರೈಕ್ ಕುರಿತಂತೆ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ಸರ್ಜಿಕಲ್ ಸ್ಟ್ರೈಕ್ ಯಶಸ್ವಿಯಾಗಲಿ ಅಥವಾ ಸೋಲಲಿ ಸೂರ್ಯೋದಯಕ್ಕಿಂತಲೂ ಮುನ್ನವೇ ನಿಮ್ಮ ಕೆಲಸ ಮುಗಿಸಿ ವಾಪಸ್ ಆಗುವಂತೆ ಸೂಚನೆ ನೀಡಿದ್ದರು. 
ಸರ್ಜಿಕಲ್ ಸ್ಟ್ರೈಕ್ ವೇಳೆ ಭಾರತೀಯ ಯೋಧರು ಹಾಗೂ ಅವರ ಕುಟುಂಬದ ಬಗ್ಗೆ ತಮಗೆ ಆತಂಕವಿತ್ತು. ಹೀಗಾಗಿ ಸರ್ಜಿಕಲ್ ಸ್ಟ್ರೈಕ್ ಮಿಷನ್ ಕಾರ್ಯಾಚರಣೆ ಯಶಸ್ವಿ ಆಗಲಿ, ಇಲ್ಲವೇ ಫೆಲ್ಯೂವರ್ ಆದರೂ ಪರವಾಗಿಲ್ಲ ಸೂರ್ಯೋದಯಕ್ಕೆ ಮುನ್ನವೇ ವಾಪಸ್ ಗೂಡು ಸೇರಿಕೊಳ್ಳುವಂತೆ ಸೂಚನೆ ಕೊಟ್ಟಿದೆ ಎಂದು ಸಂದರ್ಶನದಲ್ಲಿ ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ. 
ಒಂದು ಸರ್ಜಿಕಲ್ ಸ್ಟ್ರೈಕ್ ಮಾಡಿದರೆ ಪಾಕಿಸ್ತಾನ ಬುದ್ಧಿ ಕಲಿಯುತ್ತದೆ ಎಂದು ನಾನು ಭಾವಿಸಿದ್ದೆ. ಆದರೆ ಅದು ತಪ್ಪು ನಿರ್ಧಾರ ಎಂಬುದು ಗೊತ್ತಾಯಿತು. ಪಾಕಿಸ್ತಾನ ಸುಧಾರಣೆ ಆಗಲು ತುಂಬಾ ಸಮಯಬೇಕು. ಅದಕ್ಕೆ ಇವೆಲ್ಲ ಅರ್ಥ ಆಗಲ್ಲ, ಬುದ್ಧಿ ಕಲಿಯಲ್ಲ ಎಂದು ಕಳವಳ ವ್ಯಕ್ತಪಡಿಸಿದರು.
2016ರ ಸೆಪ್ಟೆಂಬರ್ 29ರ ಸೂರ್ಯೋದಯಕ್ಕೆ ಮುನ್ನ ಭಾರತೀಯ ಯೋಧರು ಪಾಕ್ ಆಕ್ರಮಿತ ಕಾಶ್ಮೀರಕ್ಕೆ ನುಗ್ಗಿ ಹಲವು ಭಯೋತ್ಪಾದಕರನ್ನು ಹತ್ಯೆಗೈದು ಯಶಸ್ವಿಯಾಗಿ ವಾಪಸಾಗಿದ್ದರು.
ನೋಟ್ ಬ್ಯಾನ್ ದಿಢೀರ್ ನಿರ್ಧಾರವಲ್ಲ, ಮೊದಲೆ ಸುಳಿವು ನೀಡಲಾಗಿತ್ತು!
ನೋಟು ನಿಷೇಧ ವಿಚಾರ ಶಾಕಿಂಗ್ ನ್ಯೂಸ್ ಆಗಿರಲಿಲ್ಲ. ಇದಕ್ಕೆ ಸಂಬಂಧಿಸಿದಂತೆ ಒಂದು ವರ್ಷದ ಹಿಂದೆ ದೇಶದ ಕಪ್ಪು ಕುಳಗಳಿಗೆ ನಾವು ಎಚ್ಚರಿಕೆ ನೀಡಿದ್ದೇವು ಎಂದಿದ್ದಾರೆ. ನಿಮ್ಮ ಬಳಿ ಹಣವಿದ್ದರೆ ಬ್ಯಾಂಕ್ ಗಳಲ್ಲಿ ಜಮಾವಣೆ ಮಾಡುವಂತೆ ಮೊದಲೇ ಹೇಳಲಾಗಿತ್ತು. ಕಪ್ಪು ಹಣ ಇದ್ದರೆ ಅಗತ್ಯ ದಾಖಲೆಗಳೊಂದಿಗೆ ಆಸ್ತಿ ವಿವರ ಘೋಷಣೆ ಮಾಡುವಂತೆ ಸಾಕಷ್ಟು ಕಾಲಾವಕಾಶ ನೀಡಲಾಗಿತ್ತು. ಆದರೆ ಯಾರು ಇದಕ್ಕೆ ಮುಂದಾಗಿರಲಿಲ್ಲ. ಹೀಗಾಗಿ ದಂಡ ದಶಗುಣಂ ಅಂತ ನೋಟು ನಿಷೇಧ ಮಾಡಲಾಗಿತ್ತು ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com