ಯೂಸ್ ಅಂಡ್ ಥ್ರೋ ಪ್ಲಾಸ್ಟಿಕ್ ವಸ್ತುಗಳಿಗೆ ನಿಷೇಧ ಹೇರಿದ ತಮಿಳುನಾಡು ಸರ್ಕಾರ!

ಹೊಸ ವರ್ಷದ ಮೊದಲ ದಿನವೇ ತಮಿಳುನಾಡು ಸರ್ಕಾರ ಮಹತ್ವದ ಕ್ರಮ ಕೈಗೊಂಡಿದ್ದು, ಸಿಂಗಲ್ ಯೂಸ್ ಅಥವಾ ಯೂಸ್ ಅಂಡ್ ಥ್ರೋ ಪ್ಲಾಸ್ಟಿಕ್ ವಸ್ತುಗಳಿಗೆ ನಿಷೇಧ ಹೇರಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಚೆನ್ನೈ: ಹೊಸ ವರ್ಷದ ಮೊದಲ ದಿನವೇ ತಮಿಳುನಾಡು ಸರ್ಕಾರ ಮಹತ್ವದ ಕ್ರಮ ಕೈಗೊಂಡಿದ್ದು, ಸಿಂಗಲ್ ಯೂಸ್ ಅಥವಾ ಯೂಸ್ ಅಂಡ್ ಥ್ರೋ ಪ್ಲಾಸ್ಟಿಕ್ ವಸ್ತುಗಳಿಗೆ ನಿಷೇಧ ಹೇರಿದೆ.
ಹೌದು ತಮಿಳುನಾಡು ಸರ್ಕಾರದ ಈ ನೂತನ ನಿಯಮ ಹೊಸ ವರ್ಷದ ಮೊದಲ ದಿನ ಅಂದರೆ ಇಂದಿನಿಂದಲೇ ಜಾರಿಗೆ ಬರುತ್ತಿದ್ದು, ಪ್ಲಾಸ್ಚಿಕ್ ಕಾಫಿ, ನೀರು ಮತ್ತು ಜ್ಯೂಸಿನ ಲೋಟಗಳು, ಪ್ಲಾಸ್ಟಿಕ್ ಸ್ಟ್ರಾಗಳು, ಆಹಾರ ಪದಾರ್ಥಗಳ ಪೊಟ್ಟಣ ಕಟ್ಟಲು ಬಳಕೆ ಮಾಡುವ ಪ್ಲಾಸ್ಟಿಕ್ ಶೀಟ್ ಗಳು, ಥರ್ಮಕೋಲ್ ಪ್ಲೇಟ್ ಗಳು, ಬೌಲ್ ಗಳು, ಪ್ಲಾಸ್ಟಿಕ್ ಕೋಟೆಡ್ ಪೇಪರ್ ಪ್ಲೇಟ್ ಗಳು, ಪ್ಲಾಸ್ಟಿಕ್ ಕೋಟೆಡ್ ಪೇಪರ್ ಲೋಟಗಳು, ಪ್ಲಾಸ್ಟಿಕ್ ಕವರ್ ಗಳು, ಕ್ಯಾರಿ ಬ್ಯಾಗ್ ಗಳನ್ನು ನಿಷೇಧ ಮಾಡಲಾಗಿದೆ.
ಇನ್ನು ತಮಿಳುನಾಡಿನಲ್ಲಿ ಪ್ಲಾಸ್ಟಿಕ್ ನಿಷೇಧಕ್ಕಾಗಿ ವಿಶೇಷ ತಂಡ ರಚನೆ ಮಾಡಲಾಗಿದ್ದು, ಈಗಾಗಲೇ ಈ ತಂಡ ತಮಿಳುನಾಡಿನಾದ್ಯಂತ ಕಾರ್ಯಾಚರಣೆಗಿಳಿದಿದೆ. ಇನ್ನು ಅಂತೆಯೇ 1,883 ಕೆಜಿ ಪ್ಲಾಸ್ಟಿಕ್ ವಸ್ತುಗಳನ್ನು ವಶಪಡಿಸಿಕೊಂಡಿದೆ.
ಕೇವಲ ಈ ಯೂಸ್ ಅಂಡ್ ಥ್ರೋ ಪ್ಲಾಸ್ಟಿಕ್ ವಸ್ತುಗಳಷ್ಟೇ ಅಲ್ಲದೇ ಮಲ್ಟಿ ನ್ಯಾಷನಲ್ ಸಂಸ್ಥೆಗಳು ತಮ್ಮ ಉತ್ಪಾದನೆಗಳ ಪ್ಯಾಕಿಂಗ್ ಗಾಗಿ ಬಳಕೆ ಮಾಡುತ್ತಿರುವ ಪ್ಲಾಸ್ಚಿಕ್ ಮೇಲೂ ನಿಷೇಧ ಹೇರಲು ತಮಿಳುನಾಡು ಸರ್ಕಾರ ಚಿಂತನೆ ನಡೆಸಿದೆ. ಇದಕ್ಕಾಗಿ ನಿಯಮ ತಿದ್ದುಪಡಿಗೆ ಸರ್ಕಾರ ಮುಂದಾಗಿದೆ ಎಂದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com