ಮುಸ್ಲಿಮರ ಧಾರ್ಮಿಕ ವಿಷಯದಲ್ಲಿ ಮಧ್ಯಪ್ರವೇಶಿಸಬೇಡಿ: ತಲಾಖ್ ಕುರಿತು ಕೇಂದ್ರಕ್ಕೆ ಮೆಹಬೂಬಾ ಮುಫ್ತಿ ಎಚ್ಚರಿಕೆ

ಮುಸ್ಲಿಮರ ಧಾರ್ಮಿಕ ವಿಷಯದಲ್ಲಿ ಹಸ್ತಕ್ಷೇಪ ಮಾಡಬೇಡಿ ಎಂದು ತ್ರಿವಳಿ ತಲಾಖ್ ಕುರಿತಾಗಿ ಮೆಹಬೂಬಾ ಮುಫ್ತಿ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ರಾಜ್ಯಸಭೆಯಲ್ಲಿ ತ್ರಿವಳಿ ತಲಾಖ್ ಮಸೂದೆ ಮಂಡನೆಯಾಗುತ್ತಿದ್ದಂತೆಯೇ ಆಕ್ರೋಶಗೊಂಡಿರುವ ಮೆಹಬೂಬಾ ಮುಫ್ತಿ, ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದು, "ಓರ್ವ ಮುಸ್ಲಿಮ್ ಆಗಿದ್ದು, ಮುರಿದು ಬಿದ್ದ ವಿವಾಹದ ಪರಿಸ್ಥಿತಿಗಳನ್ನು ಎದುರಿಸಿರುವ ಮಹಿಳೆಯಾಗಿ, ಮುಸ್ಲಿಮರ ಕುಟುಂಬದ ರಚನೆಯ ಮೇಲೆ ಪ್ರಹಾರ ನಡೆಯುತ್ತಿದ್ದಾಗ ಮಾತನಾಡಬೇಕಾಗಿರುವುದು ನನ್ನ ಕರ್ತವ್ಯವಾಗಿದೆ ಎಂದು ಮುಫ್ತಿ ಹೇಳಿದ್ದಾರೆ. 
ಮುಸ್ಲಿಮರಿಗೆ ತಮ್ಮ ಕುಟುಂಬ ರಚನೆಯಾಗಿರುವ ವಿಧಾನದ  ಬಗ್ಗೆ ಹೆಮ್ಮೆ ಇದೆ. ಆದರೆ ಕೇಂದ್ರ ಸರ್ಕಾರ ತ್ರಿವಳಿ ತಲಾಖ್ ಮಸೂದೆ ಮೂಲಕ ಸಮುದಾಯವನ್ನು ಕದಡುವುದಕ್ಕೆ ಯತ್ನಿಸುತ್ತಿದೆ, ಇದರಿಂದ ಮಹಿಳೆಯರನ್ನು ಆರ್ಥಿಕವಾಗಿ ಸಂಕಷ್ಟಕ್ಕೆ ದೂಡಿದಂತಾಗುತ್ತದೆ, ಮುಸ್ಲಿಮರ ಧಾರ್ಮಿಕ ವಿಷಯದಲ್ಲಿ ಮಧ್ಯಪ್ರವೇಶಿಸಬೇಡಿ ಎಂದು ತಲಾಖ್ ಕುರಿತು ಮೆಹಬೂಬಾ ಮುಫ್ತಿ ಎಚ್ಚರಿಕೆ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com