ಪ್ರಧಾನಿ ಮೋದಿ ಸಂದರ್ಶನ: ವಾಕ್ಚಾತುರ್ಯದ ಪ್ರದರ್ಶನ, ಸುಳ್ಳಿನ ಕಂತೆ: ಕಾಂಗ್ರೆಸ್

ಸುದ್ದಿ ಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ಪ್ರಧಾನಿ ಮೋದಿ ಒಂದೇ ಒಂದು ಸತ್ಯಾಂಶವನ್ನೂ ಹೇಳಿಲ್ಲ. ಸಂದರ್ಶನವನ್ನು ಅವರ ವಾಕ್ಚಾತುರ್ಯದ ಪ್ರದರ್ಶನಕ್ಕೆ ಬಳಸಿಕೊಂಡಿದ್ದಾರೆ ಎಂದು ಕಾಂಗ್ರೆಸ್ ಕಿಡಿಕಾರಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಸುದ್ದಿ ಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ಪ್ರಧಾನಿ ಮೋದಿ ಒಂದೇ ಒಂದು ಸತ್ಯಾಂಶವನ್ನೂ ಹೇಳಿಲ್ಲ. ಸಂದರ್ಶನವನ್ನು ಅವರ ವಾಕ್ಚಾತುರ್ಯದ ಪ್ರದರ್ಶನಕ್ಕೆ ಬಳಸಿಕೊಂಡಿದ್ದಾರೆ ಎಂದು ಕಾಂಗ್ರೆಸ್ ಕಿಡಿಕಾರಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್ ವಕ್ತಾರ ರಣ್ ದೀಪ್ ಸುರ್ಜೇವಾಲಾ ಅವರು, ಪ್ರಧಾನಿ ಮೋದಿ ಸಂದರ್ಶನ ಕೂಡ ಅವರ ಭಾಷಣದಂತೆಯೇ ಇತ್ತು. ಒಂದಂಶವೂ ಸತ್ಯವಾಗಿರಲಿಲ್ಲ. ಅವರ ಹೇಳಿಕೆಗೂ ಗ್ರೌಂಡ್ ರಿಯಾಲಿಟಿ (ವಾಸ್ತವಿಕತೆ)ಗೂ ಅಜಗಜಾಂತರ ವ್ಯತ್ಯಾಸವಿದೆ. ಜನರಿಗೆ ಅವರು ನೀಡಿದ್ದ ಭರವಸೆಗಳನ್ನು ಅವರು ಈಡೇರಿಸಿಲ್ಲ ಎಂದು ಹೇಳಿದ್ದಾರೆ.
ಪ್ರಧಾನಿ ಮೋದಿ ತಮ್ಮ ಸಂದರ್ಶನದಲ್ಲಿ ಇಡೀ ದೇಶವೇ ತತ್ತರಿಸಿ ಹೋಗಲು ಕಾರಣವಾದ ನೋಟು ನಿಷೇಧ, ಜಿಎಸ್ ಟಿ, ಬ್ಯಾಂಕ್ ವಂಚನೆ, ಕಪ್ಪು ಹಣ ರಾಷ್ಟ್ರೀಯ ಭದ್ರತೆ, ರೈತ ಸಮಸ್ಯೆಗಳ ಕುರಿತು ಮಾತನಾಡಬೇಕಿತ್ತು.  ಆದರೆ ಅದು ಆಗಿಲ್ಲ. ಪ್ರಧಾನಿ ಮೋದಿ ಅವರ ಸಂದರ್ಶನದ ಸಂಕ್ಷಿಪ್ತ ರೂಪ ಹೇಗಿದೆ ಎಂದರೆ ನಾನು, ನನ್ನ, ನನಗೋಸ್ಕರ ಎಂಬಂತಿದೆ. ಮೋದಿ ಸರ್ಕಾರ 'ಐ'ಸ್ (ನನ್ನದು ಎಂಬ ಸ್ವಾರ್ಥ) ಲೈಸ್ (ಸುಳ್ಳು)ಗಳಿಂಗ ನಲುಗು ಹೋಗುತ್ತಿದ್ದಾರೆ ಎಂದು ಸುರ್ಜೇವಾಲ ಟ್ವೀಟ್ ಮಾಡಿದ್ದಾರೆ.
ಮತ್ತೊಂದು ಟ್ವೀಟ್ ನಲ್ಲಿ ರಾಫೆಲ್ ಒಪ್ಪಂದ, ಅಗತ್ಯ ವಸ್ತುಗಳ ದರ ಏರಿಕೆ ಕುರಿತೂ ಸುರ್ಜೇವಾಲಾ ಕಿಡಿಕಾರಿದ್ದಾರೆ. ಅಂತೆಯೇ ಪ್ರಧಾನಿ ಮೋದಿಗೆ ದೇಶದ ಜನರ ಮತ್ತು ದೇಶದ ರೈತರ ಬಗ್ಗೆ ಎಳ್ಳಷ್ಟೂ ಕಾಳಜಿ ಇಲ್ಲ. ಅವರು ನೀಡಿದ್ದ ಭರವಸೆಗಳನ್ನು ಈಡೇರಿಸಬೇಕು ಎಂಬ ಕನಿಷ್ಠ ಜ್ಞಾನವೂ ಇಲ್ಲ ಎಂದು ಕಿಡಿಕಾರಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com