ಪ್ರಧಾನಿ ಮೋದಿಗೆ ಧೈರ್ಯವಿದ್ದರೆ ಸಂಸತ್ತಿನಲ್ಲಿ ಸುದ್ದಿಗೋಷ್ಠಿ ನಡೆಸಿ ಉತ್ತರಿಸಲಿ : ಆನಂದ್ ಶರ್ಮಾ

ಫಿಕ್ಸಿಂಗ್' ಸಂದರ್ಶನದಿಂದ ಪ್ರಧಾನಿ ಮೋದಿ ದೇಶದ ಜನತೆಯನ್ನು ಮೂರ್ಖರನ್ನಾಗಿ ಮಾಡಲು ಸಾಧ್ಯವಿಲ್ಲ ಎಂದು ಆನಂದ್ ಶರ್ಮಾ ಹೇಳಿದ್ದಾರೆ.
ಸಂದರ್ಶನದಲ್ಲಿ ಪ್ರಧಾನಿ ಮೋದಿ
ಸಂದರ್ಶನದಲ್ಲಿ ಪ್ರಧಾನಿ ಮೋದಿ
ನವದೆಹಲಿ: 'ಫಿಕ್ಸಿಂಗ್' ಸಂದರ್ಶನದಿಂದ ಪ್ರಧಾನಿ ಮೋದಿ ದೇಶದ ಜನತೆಯನ್ನು ಮೂರ್ಖರನ್ನಾಗಿ ಮಾಡಲು ಸಾಧ್ಯವಿಲ್ಲ ಎಂದು ಆನಂದ್ ಶರ್ಮಾ ಹೇಳಿದ್ದಾರೆ.
ಸುದ್ದಿ ಸಂಸ್ಛೆಗೆ ಪ್ರಧಾನಿ ಮೋದಿ ಸಂದರ್ಶನ ನೀಡಿರುವ ಕುರಿತು ಮಾತನಾಡಿರುವ ಆನಂದ್ ಶರ್ಮಾ ಅವರು, ಪ್ರಧಾನಿ ಮೋದಿ ಅವರ ಸಂದರ್ಶನ ಪೂರ್ವ ನಿಯೋಜಿತ ಎಂದು ಹೇಳಿದ್ದಾರೆ. ಅಂತೆಯೇ ಈ ಫಿಕ್ಸಿಂಗ್ ಸಂದರ್ಶನದ ಮೂಲಕ ಮೋದಿ ದೇಶದ ಜನತೆಯನ್ನು ಮೂರ್ಖರನ್ನಾಗಿ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಇದೇ ವೇಳೆ ಸರ್ಜಿಕಲ್ ದಾಳಿ ಕುರಿತು ಪ್ರಧಾನಿ ಮೋದಿ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿರುವ ಅವರು, ಸರ್ಜಿಕಲ್ ಸ್ಟ್ರೈಕ್ ನಂತಹ ಸೇನೆಯ ರಹಸ್ಯ ಕಾರ್ಯಾಚರಣೆಯನ್ನೂ ಕೂಜ ಮೋದಿ ತಮ್ಮ ರಾಜಕೀಯ ಸ್ವಹಿತಾಸಕ್ತಿಗೆ ಬಳಿಸಿಕೊಳ್ಳುತ್ತಿರುವುದು ನಾಚಿಕೆಗೇಡಿನ ವಿಷಯ. ಸಂದರ್ಶನದಲ್ಲಿ ಅವರು  ಹೇಳಿದ ಎಲ್ಲ ಅಂಶಗಳೂ ಸತ್ಯವಾಗಿದೆ ಎಂದರೆ ಇದೇ ವಿಷಯಗಳನ್ನು ಸಂಸತ್ತಿನಲ್ಲಿ ಸುದ್ದಿಗೋಷ್ಠಿ ಕರೆದು ಹೇಳಲಿ. ಅವರಿಗೆ ಧೈರ್ಯವಿದ್ದರೆ ಸಂಸತ್ ಆವರಣದಲ್ಲಿ ಸುದ್ದಿಗೋಷ್ಛಿ ಕರೆದು ಸುದ್ದಿಗಾರರು ಕೇಳುವ ಪ್ರಶ್ನೆಗೆ ಉತ್ತರಿಸಲಿ. ಅದು ಬಿಟ್ಟು ಫಿಕ್ಸಿಂಗ್ ಸಂದರ್ಶನದಲ್ಲಿ ತಮಗೆ ಬೇಕಾದ ವಿಚಾರಗಳ ಕುರಿತು ಮಾತನಾಡುವುದಲ್ಲ ಎಂದು ಹೇಳಿದ್ದಾರೆ.
ಅಂತೆಯೇ ಪ್ರಧಾನಿ ಮೋದಿ ದೇಶವನ್ನು ಕಾಡುತ್ತಿರುವ ಬೆಲೆ ಏರಿಕೆ, ರೈತ ಸಮಸ್ಯೆಗಳು, ರಾಷ್ಟ್ರೀಯ ಭದ್ರತೆಯಂತಹ ಗಂಭೀರ ವಿಚಾರಗಳ ಕುರಿತು ಮಾತನಾಡುವುದಿಲ್ಲ. ಬದಲಿಗೆ ರಾಮ ಮಂದಿರ, ಮುಗಿದು ಹೋದ ಸರ್ಜಿಕಲ್ ದಾಳಿ ಕುರಿತು ಮಾತನಾಡುತ್ತಾರೆ. ದೇಶದ ರಕ್ಷಣೆಗಾಗಿ ಸೇನೆ ಮಾಡುವ ಕಾರ್ಯಾಚರಣೆಯ ಸಂಪೂರ್ಣ ಯಶಸ್ಸು ಸೇನೆಗೇ ದಕ್ಕಬೇಕೇ ಹೊರತು ಯಾವುದೇ ರಾಜಕೀಯ ಪಕ್ಷಕ್ಕಲ್ಲ. ಈ ಹಿಂದೆ ಕಾಂಗ್ರೆಸ್ ಅವಧಿಯಲ್ಲೂ ಸಾಕಷ್ಟು ಬಾರಿ ಸೇನೆ ಶತೃ ರಾಷ್ಟ್ರಗಳ ಗಡಿಯೊಳಗೆ ನುಗ್ಗಿ ಕಾರ್ಯಾಚರಣೆ ಮಾಡಿದೆ. ಆದರೆ ಎಂದೂ ಕಾಂಗ್ರೆಸ್ ಪಕ್ಷ ಅದನ್ನು ರಾಜಕೀಯವಾಗಿ ಬಳಸಿಕೊಂಡಿಲ್ಲ. ಅಷ್ಟೇ ಏಕೆ ಬಾಂಗ್ಲಾದೇಶ ಸ್ವತಂತ್ರಗೊಳ್ಳಲು ಇಂದಿರಾಗಾಂಧಿ ದೇಶ ಸೇನೆಯನ್ನು ಕಳುಹಿಸಿಕೊಟ್ಟಿದ್ದರು. ದೇಶದ ಸೈನಿಕರ ಶೌರ್ಯ ಮತ್ತು ಪಾರಾಕ್ರಮದ ಎದುರು ಪಾಕಿಸ್ತಾನ ಸೇನೆ ಮಂಡಿಯೂರಿ ಶರಣಾಗಿತ್ತು ಎಂಬುದನ್ನು ಮೋದಿ ಮರೆಯಬಾರದು ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com