ಇಬ್ಬರು ಮಹಿಳೆಯ ಬಳಿಕ ಶ್ರೀಲಂಕಾ ಮಹಿಳೆಯಿಂದ ಅಯ್ಯಪ್ಪ ದರ್ಶನ!

ಇಬ್ಬರು ಮಹಿಳೆಯರು ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲಕ್ಕೆ ತೆರಳಿ ದರ್ಶನ ಪಡೆದ ವಿಚಾರಕ್ಕೆ ಸಂಬಂಧಿಸಿದಂತೆ ಈಗಾಗಲೇ ಕೇರಳ ಕುದಿಯುತ್ತಿದ್ದು, ಇದರ ನಡುವೆಯೇ ಮತ್ತೋರ್ವ ಮಹಿಳೆ ಇಂದು ಮುಂಜಾನೆ ಅಯ್ಯಪ್ಪನ ದರ್ಶನ ಪಡೆದಿದ್ದಾರೆ ಎಂದು ತಿಳಿದುಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಕೊಚ್ಚಿ: ಇಬ್ಬರು ಮಹಿಳೆಯರು ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲಕ್ಕೆ ತೆರಳಿ ದರ್ಶನ ಪಡೆದ ವಿಚಾರಕ್ಕೆ ಸಂಬಂಧಿಸಿದಂತೆ ಈಗಾಗಲೇ ಕೇರಳ ಕುದಿಯುತ್ತಿದ್ದು, ಇದರ ನಡುವೆಯೇ ಮತ್ತೋರ್ವ ಮಹಿಳೆ ಇಂದು ಮುಂಜಾನೆ ಅಯ್ಯಪ್ಪನ ದರ್ಶನ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ.
ಮೂಲಗಳ ಪ್ರಕಾರ ಸುಮಾರು 46 ವರ್ಷದ ಮಹಿಳೆಯೊಬ್ಬರು ಇಂದು ಮುಂಜಾನೆ 4 ಗಂಟೆ ಸುಮಾರಿನಲ್ಲಿ ಶಬರಿಮಲೆ ಬೆಟ್ಟ ಏರಿ ಅಯ್ಯಪ್ಪನ ದರ್ಶನ ಪಡೆದಿದ್ದಾರೆ ಎಂದು ತಿಳಿದುಬಂದಿದೆ.
ಪ್ರಾಥಮಿಕ ವರದಿಗಳ ಅನ್ವಯ ಮಹಿಳೆಯು ಶ್ರೀಲಂಕಾ ಮೂಲದವರಾಗಿದ್ದು, ಪೊಲೀಸ್ ಭದ್ರತೆಯೊಂದಿಗೆ ಶಬರಿಮಲೆಗೆ ತೆರಳಿ ಅಯ್ಯಪ್ಪನ ದರ್ಶನ ಮಾಡಿದ್ದಾರೆ. ಇದಕ್ಕೂ ಮೊದಲು ಮಹಿಳೆ ಅಯ್ಯಪ್ಪ ಸನ್ನಿದಾನದಲ್ಲಿರುವ ಪವಿತ್ರ 18 ಮೆಟ್ಟಿಲುಗಳನ್ನು ಏರಿ ಅಯ್ಯಪ್ಪ ದರ್ಶನ ಪಡೆಯಲು ಯತ್ನಿಸಿದ್ದರು. ಆದರೆ ಅಲ್ಲಿದ್ದ ಕೆಲ ಭದ್ರತಾ ಸಿಬ್ಬಂದಿ ಅದಕ್ಕೆ ಅನುವು ಮಾಡಿಕೊಡಲಿಲ್ಲ. ಹೀಗಾಗಿ ಮಹಿಳೆ ಭದ್ರತಾ ಸಿಬ್ಬಂದಿಗಳು ಉಪಯೋಗಿಸುವ ಮೆಟ್ಟಿಲುಗಳ ಮೂಲರ ಸನ್ನಿಧಾನಕ್ಕೆ ತೆರಳಿ ಬಳಿಕ ಅಲ್ಲಿ ಅಯ್ಯಪ್ಪನ ದರ್ಶನ ಪಡೆದಿದ್ದಾರೆ ಎನ್ನಲಾಗಿದೆ.
ಇನ್ನು ಮಹಿಳೆ ಅಯ್ಯಪ್ಪನ ದರ್ಶನ ಪಡೆದ ಕುರಿತ ಅಯ್ಯಪ್ಪ ದೇಗುಲ ಆಡಳಿತ ಮಂಡಳಿ ಅಥವಾ ಕೇರಳ ಸರ್ಕಾರ ಅಥವಾ ಕೇರಳ ಪೊಲೀಸರು ಈ ವರೆಗೂ ಮಾಹಿತಿ ನೀಡಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com