ಆಮ್ ಆದ್ಮಿ ಪಕ್ಷಕ್ಕೆ ಅಡ್ವೊಕೇಟ್ ಹೆಚ್ಎಸ್ ಫೂಲ್ಕಾ ಗುಡ್ ಬೈ: ಕಾರಣ ತಿಳಿಯಲಿದೆ ನಾಳೆ

ಸುಪ್ರೀಂ ಕೋರ್ಟ್ ನ ಹಿರಿಯ ಅಡ್ವೊಕೇಟ್ ಹೆಚ್ ಎಸ್ ಫೂಲ್ಕಾ ಆಮ್ ಆದ್ಮಿ ಪಕ್ಷಕ್ಕೆ ಗುಡ್ ಬೈ ಹೇಳಿದ್ದಾರೆ.

Published: 04th January 2019 12:00 PM  |   Last Updated: 04th January 2019 12:53 PM   |  A+A-


Advocate H S Phookla resigns from AAP

ಆಮ್ ಆದ್ಮಿ ಪಕ್ಷಕ್ಕೆ ಅಡ್ವೊಕೇಟ್ ಹೆಚ್ಎಸ್ ಫೂಲ್ಕಾ ಗುಡ್ ಬೈ: ಕಾರಣ ತಿಳಿಯಲಿದೆ ನಾಳೆ

Posted By : SBV SBV
Source : Online Desk
ಸುಪ್ರೀಂ ಕೋರ್ಟ್ ನ ಹಿರಿಯ ಅಡ್ವೊಕೇಟ್ ಹೆಚ್ ಎಸ್ ಫೂಲ್ಕಾ ಆಮ್ ಆದ್ಮಿ ಪಕ್ಷಕ್ಕೆ ಗುಡ್ ಬೈ ಹೇಳಿದ್ದಾರೆ.
 
ರಾಜೀನಾಮೆ ಬಗ್ಗೆ ಟ್ವೀಟ್ ಮಾಡಿದ್ದು, ಪಕ್ಷದ ಮುಖ್ಯಸ್ಥ, ದೆಹಲಿ ಸಿಎಂ ಕೇಜ್ರಿವಾಲ್ ಗೆ ರಾಜೀನಾಮೆ ರವಾನೆ ಮಾಡಿರುವುದಾಗಿ ಫೂಲ್ಕಾ ಮಾಹಿತಿ ನೀಡಿದ್ದಾರೆ. "ಕೇಜ್ರಿವಾಲ್ ರಾಜೀನಾಮೆ ಹಿಂಪಡೆಯುವಂತೆ ಮನವಿ ಮಾಡಿದರು. ಜ.04 ರಂದು ಸಂಜೆ 4 ಗಂಟೆಗೆ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿ ನಡೆಸುತ್ತೇನೆ, ಈ ವೇಳೆ ಆಮ್ ಆದ್ಮಿ ಪಕ್ಷ ತೊರೆಯುವುದಕ್ಕೆ ಕಾರಣವೇನೆಂದು ಹೇಳುವುದಾಗಿ ಎಂದು ಫೂಲ್ಕಾ ಹೇಳಿದ್ದಾರೆ. 

1984 ರ ಸಿಖ್ ವಿರೋಧಿ ದಂಗೆಯ ಸಂತ್ರಸ್ತರ ಪರವಾಗಿ ಫೂಲ್ಕಾ ನಿಂತಿದ್ದರು. ಇದೇ ಪ್ರಕರಣದಲ್ಲಿ ಮಾಜಿ ಕಾಂಗ್ರೆಸ್ ನಾಯಕ ಸಜ್ಜನ್ ಕುಮಾರ್ ದೋಷಿ ಎಂಬ ತೀರ್ಪು ಬಂದಾಗ ಆಮ್ ಆದ್ಮಿ ಪಕ್ಷ ರಾಜೀವ್ ಗಾಂಧಿ ಅವರ ಭಾರತ ರತ್ನವನ್ನು ವಾಪಸ್ ಪಡೆಯಬೇಕೆಂದು ದೆಹಲಿ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕರಿಸಿತ್ತು. ಆದರೆ ನಂತರದ ದಿನಗಳಲ್ಲಿ ತನ್ನ ನಿಲುವನ್ನು ಬದಲಾವಣೆ ಮಾಡಿಕೊಂಡಿತ್ತು. ಇದೇ ಫೂಲ್ಕಾ ರಾಜೀನಾಮೆ ನೀಡಲು ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ. ಆಮ್ ಆದ್ಮಿ ಪಕ್ಷ ಕಾಂಗ್ರೆಸ್ ಜೊತೆ ಕೈ ಜೋಡಿಸುವ ಸಾಧ್ಯತೆಯನ್ನೂ ಫೂಲ್ಕಾ ವಿರೋಧಿಸುತ್ತಿದ್ದರು. 
Stay up to date on all the latest ರಾಷ್ಟ್ರೀಯ news
Poll
HD Kumaraswamy

ಹಿಂದಿ ಗೊತ್ತಿರುವುದರಿಂದ ರಾಷ್ಟ್ರ ರಾಜಕಾರಣದಲ್ಲಿ ಉತ್ತರ ಭಾರತದ ನಾಯಕರಿಗೆ ದಕ್ಷಿಣದವರಿಗಿಂತ ಹೆಚ್ಚಿನ ಪ್ರಯೋಜನ ಆಗುತ್ತದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.


Result
ಸರಿ
ತಪ್ಪು
ಗೊತ್ತಿಲ್ಲ
flipboard facebook twitter whatsapp