ಉದ್ಯಮಿ ವಿಜಯ್ ಮಲ್ಯ 'ದೇಶಭ್ರಷ್ಟ ಆರ್ಥಿಕ ಅಪರಾಧಿ': ಪಿಎಂಎಲ್ಎ ಕೋರ್ಟ್ ಘೋಷಣೆ

ಭಾರತೀಯ ಬ್ಯಾಂಕ್ ಗಳಲ್ಲಿ ಸಾವಿರಾರು ಕೋಟಿ ರುಪಾಯಿ ಸಾಲ ಮಾಡಿ ದೇಶ ತೊರೆದಿರುವ ಮದ್ಯದ ದೊರೆ, ಉದ್ಯಮಿ ವಿಜಯ್ ಮಲ್ಯರನ್ನು ದೇಶಭ್ರಷ್ಟ ಆರ್ಥಿಕ ಅಪರಾಧಿ...
ವಿಜಯ್ ಮಲ್ಯ
ವಿಜಯ್ ಮಲ್ಯ
ಮುಂಬೈ: ಭಾರತೀಯ ಬ್ಯಾಂಕ್ ಗಳಲ್ಲಿ ಸಾವಿರಾರು ಕೋಟಿ ರುಪಾಯಿ ಸಾಲ ಮಾಡಿ ದೇಶ ತೊರೆದಿರುವ ಮದ್ಯದ ದೊರೆ, ಉದ್ಯಮಿ ವಿಜಯ್ ಮಲ್ಯರನ್ನು ದೇಶಭ್ರಷ್ಟ ಆರ್ಥಿಕ ಅಪರಾಧಿ ಎಂದು ಪಿಎಂಎಲ್ಎ ಕೋರ್ಟ್ ಘೋಷಣೆ ಮಾಡಿದೆ.
ಕೇಂದ್ರ ಸರ್ಕಾರಕ್ಕೆ ಹಾಗೂ ಬ್ಯಾಂಕ್ ಗಳಿಗೆ ವಿಜಯ್ ಮಲ್ಯ ಆಸ್ತಿ ವಶಪಡಿಸಿಕೊಳ್ಳಲು ಇದ್ದ ಅಡ್ಡಿ ಆತಂಕಗಳೆಲ್ಲಾ ಇದೀಗ ಕೋರ್ಟ್ ನ ಈ ತೀರ್ಪಿನಿಂದಾಗಿ ನಿವಾರಣೆ ಆದಂತಾಗಿದೆ. ಈ ಸಂಬಂಧ ಇಡಿ ಮತ್ತು ಸಿಬಿಐ ವಿಶೇಷ ಪಿಎಂಎಲ್ಎ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದವು. 
ಇಡಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ್ದು ಕೋರ್ಟ್ ಇಂದಿಗೆ ತೀರ್ಪನ್ನು ಕಾಯ್ದಿರಿಸಿತ್ತು. ಅಂತೆ ತನ್ನ ತೀರ್ಪಿನಲ್ಲಿ ವಿಜಯ್ ಮಲ್ಯರನ್ನು ದೇಶಭ್ರಷ್ಟ ಆರ್ಥಿಕ ಅಪರಾಧಿ ಎಂದು ಘೋಷಿಸಿದೆ.
ಸಾಲ ತೆಗೆದುಕೊಂಡು ಪಾವತಿಸದೆ ದೇಶ ದೊರೆದಿರುವ ವಿಜಯ್ ಮಲ್ಯರನ್ನು ಆರ್ಥಿಕ ಅಪರಾಧಿ ಎಂದು ಘೋಷಿಸಬೇಕು ಎಂದು ಇಡಿ ವಾದಿಸಿತ್ತು. ಇದಕ್ಕೆ ಮಲ್ಯ ಪರ ವಕೀಲರು ಇಡಿ ಸುಳ್ಳು ಆರೋಪ ಮಾಡಿದ್ದು ಸಾಲ ಮರುಪಾವತಿಗೆ ಅವಕಾಶ ನೀಡಬೇಕು ಎಂದು ಮನವಿ ಮಾಡಿದ್ದರು.
ಇನ್ನು ಲಂಡನ್ ನ ವೆಸ್ಟ್ ಮಿನಿಸ್ಟರ್ ಕೋರ್ಟ್ ವಿಜಯ್ ಮಲ್ಯ ಹಸ್ತಾಂತರಕ್ಕೆ ಒಪ್ಪಿಗೆ ಸೂಚಿಸಿದೆ. ಈ ನಡುವೆ ಮುಂಬೈನ ವಿಶೇಷ ಪಿಎಂಎಲ್ಎ ಕೋರ್ಟ್ ಸಹ ಮಲ್ಯ ವಿರುದ್ಧ ತೀರ್ಪು ನೀಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com