2018ರಲ್ಲಿ ಪಾಕ್ ನಿಂದ 2936 ಬಾರಿ ಕದನ ವಿರಾಮ ಉಲ್ಲಂಘನೆ, 15 ವರ್ಷಗಳಲ್ಲೇ ಗರಿಷ್ಠ!

2018ರಲ್ಲಿ ಕಿಡಿಗೇಡಿ ಪಾಕ್ ನಿಂದ ಜಮ್ಮು ಕಾಶ್ಮೀರ ರಾಜ್ಯದಲ್ಲಿ 2,936 ಬಾರಿ ಕದನ ವಿರಾಮ ಉಲ್ಲಂಘನೆಯಾಗಿದೆ.ಇದು ಕಳೆದ ಕಳೆದ 15 ವರ್ಷಗಳಲ್ಲಿ ಅತಿ ಗರಿಷ್ಠ ಪ್ರಮಾಣ....
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಶ್ರೀನಗರ: 2018ರಲ್ಲಿ ಕಿಡಿಗೇಡಿ ಪಾಕ್ ನಿಂದ ಜಮ್ಮು ಕಾಶ್ಮೀರ ರಾಜ್ಯದಲ್ಲಿ  2,936 ಬಾರಿ ಕದನ ವಿರಾಮ ಉಲ್ಲಂಘನೆಯಾಗಿದೆ.ಇದು ಕಳೆದ ಕಳೆದ 15 ವರ್ಷಗಳಲ್ಲಿ ಅತಿ ಗರಿಷ್ಠ ಪ್ರಮಾಣವೆನ್ನಲಾಗಿದ್ದು ಸರಾಸರಿ ಪ್ರತಿದಿನವೂ ಎಂಟು ಪ್ರಕರಣಗಳು ದಾಖಲಾಗಿದೆ.ಇಂತಹಾ ಘಟನೆಯಲ್ಲಿ ಒಟ್ಟು 61 ಜನ ಸಾವನ್ನಪ್ಪಿದ್ದರೆ 250ಕ್ಕೆ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
2018ರಲ್ಲಿ ಪಾಕಿಸ್ತಾನ ಪಡೆಗಳಿಂದ ಅತಿ ಹೆಚ್ಚು ಸಂಖ್ಯೆಯ  ಶೆಲ್ ದಾಳಿ ಮತ್ತು ಗುಂಡಿನ ದಾಳಿ ನಡೆದಿವೆ.ಇದು 2003ರ ಸಮಯದಲ್ಲಾದ ಗಡಿ ರೇಖೆಯ ಉಲ್ಲಂಘನೆಯನ್ನು ನೆನಪಿಸುತ್ತದೆ ಎಂದು ಅವರು ಹೇಳಿದ್ದಾರೆ.
ಪಾಕಿಸ್ತಾನದ ಪಡೆಗಳು ಪದೇ ಪದೇ ಚೆಕ್ ಪೋಸ್ಟ್ ಹಾಗೂ ನಿಯಂತ್ರಣಾ ರೇಖೆ, ಅಂತರಾಷ್ಟ್ರೀಯ ಗಡಿಯಲ್ಲ್ನ ಗ್ರಾಮಗಳ ಮೇಲೆ ದಾಳಿ ಮಾಡುತ್ತಿದೆ.ಇದರಿಂದ ಜನರು ಭಯದಿಂದಲೇ ದಿನನಿತ್ಯವೂ ಬದುಕುವಂತಾಗಿದೆ ಎಂದು  ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
"ಪಾಕಿಸ್ತಾನದ ಪಡೆಗಳು 2018 ರಲ್ಲಿ 2,936 ಬಾರಿ ಕದನ ವಿರಾಮವನ್ನು ಉಲ್ಲಂಘಿಸಿವೆ. ಇದರಲ್ಲಿ 61 ಜನರು ಮೃತಪಟ್ಟಿದ್ದಾರೆ ಮತ್ತು 250ಕ್ಕೆ ಹೆಚ್ಚು ಮಂದಿ ಗಾಯಗೊಂಡಿದ್ದಾರೆ" ಎಂದು ಹಿರಿಯ ಸೇನಾಧಿಕಾರಿಗಳು ಪಿಟಿಐಗೆ ತಿಳಿಸಿದ್ದಾರೆ.ಭಾರತೀಯ ಸೇನೆಯೊಂದಿಗೆ 20 ಕ್ಕಿಂತ ಹೆಚ್ಚು ಬ್ರಿಗೇಡ್ ಕಮಾಂಡರ್-ಮಟ್ಟದ ಸಭೆ ಹಾಗೂ  ಧ್ವಜ ಸಭೆಗಳಲ್ಲಿ ಗಡಿಗಳ ನಡುವೆ ಶಾಂತಿ ಕಾಪಾಡುವ ಭರವಸೆ ನೀಡಿದ ಬಳಿಕವೂ ಪಾಕ್ ತನ್ನ ಪುಂಡಾಟ ಮುಂದುವರಿಸಿದೆ. "ಶಾಂತಿ ಕಾಪಾಡಲು ಮತ್ತು ಪರಸ್ಪರ ಗಡ್ರಾಷ್ಟ್ರಗಳ ಸಂಬಂಧ ಬಲವರ್ಧನೆಗೆ ಪಾಕಿಸ್ತಾನ ಪ್ರತಿಜ್ಞೆ ಮಾಡಿದೆ, ಆದರೆ ಅವರು ತಮ್ಮ ವಾಗ್ದಾನಗಳನ್ನು ಅತಿ ಶೀಘ್ರವಾಗಿ ಮುರಿಯುತ್ತಿದ್ದಾರೆ "ಅಧಿಕಾರಿಗಳು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com