ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ

ಇಲ್ಲಿ ಎಗ್ಗಿಲ್ಲದೆ ನಡೆಯುತ್ತಿದೆ ಅಪ್ರಾಪ್ತೆಯರ ಕಳ್ಳ ಸಾಗಣೆ; ಹರ್ಯಾಣದಲ್ಲಿ ಹೀಗೊಂದು ವ್ಯಾಪಾರ!

ಹೆಣ್ಣು ಮಕ್ಕಳು ಇಂದು ಅನೇಕ ಕ್ಷೇತ್ರಗಳಲ್ಲಿ ತಮ್ಮ ಛಾಪನ್ನು ತೋರಿಸುತ್ತಿದ್ದರೂ, ಸರ್ಕಾರಗಳು ಹೆಣ್ಣು ...

ಚಂಡೀಗಢ: ಹೆಣ್ಣು ಮಕ್ಕಳು ಇಂದು ಅನೇಕ ಕ್ಷೇತ್ರಗಳಲ್ಲಿ ತಮ್ಮ ಛಾಪನ್ನು ತೋರಿಸುತ್ತಿದ್ದರೂ, ಸರ್ಕಾರಗಳು ಹೆಣ್ಣು ಮಕ್ಕಳ ಜೀವನ ಉನ್ನತಿಗೆ ಹಲವು ಕಾರ್ಯಕ್ರಮಗಳನ್ನು ಜಾರಿಗೆ ತರುತ್ತಿದ್ದರೂ ಸಹ ಹೆಣ್ಣು ಮಗುವಿನ ಭ್ರೂಣಹತ್ಯೆ, ಹೆಣ್ಣು ಮಕ್ಕಳ ಮೇಲಿನ ಶೋಷಣೆ ಕಡಿಮೆಯಾಗಿಲ್ಲ.

ಲಿಂಗಾನುಪಾತದಲ್ಲಿ ಹೆಣ್ಣು ಮಕ್ಕಳ ಸಂಖ್ಯೆ ಕಡಿಮೆಯಿರುವ ಹರ್ಯಾಣ ರಾಜ್ಯದಲ್ಲಿ ಮದುವೆ ವಯಸ್ಸಿಗೆ ಬಂದಿರುವ ಹೆಣ್ಣು ಮಕ್ಕಳ ಕಳ್ಳಸಾಗಣೆ ಹೆಚ್ಚಾಗುತ್ತಿರುವುದು ಇತ್ತೀಚಿನ ಆತಂಕಕಾರಿ ಅಂಶವಾಗಿದೆ. ಬೇರೆ ರಾಜ್ಯಗಳ ಬಡ ಕುಟುಂಬಗಳ ಹೆಣ್ಣು ಮಕ್ಕಳನ್ನು ಹರ್ಯಾಣದಲ್ಲಿ ಮದುವೆಯಾದ ಪುರುಷರಿಗೆ ಮಾರಾಟ ಮಾಡಲಾಗುತ್ತಿದೆ. ಇದೊಂದು ರೀತಿ ವ್ಯಾಪಾರವಾಗಿಬಿಟ್ಟಿದೆ. ವಧುವಿಗೆ 1 ಲಕ್ಷದವರೆಗೆ ಹಣ ನೀಡಿ ವಸ್ತುಗಳಂತೆ ಮಾರಾಟ ಮಾಡಲಾಗುತ್ತಿದೆ. ಇದಕ್ಕೆ ಏಜೆಂಟರಂತೆ ಇರುವವರಿಗೆ ಕಮಿಷನ್ ಕೂಡ ಹೋಗುತ್ತದೆ.

ವಧುವನ್ನು ಪರೊ ಅಥವಾ ಮೊಲ್ ಕಿ ಬಹು ಎಂದು ಕರೆಯಲಾಗುತ್ತಿದ್ದು ಹೆಣ್ಣು ಮಕ್ಕಳನ್ನು ಚರಾಸ್ತಿ ಅಥವಾ ಅಕ್ಷರಶಃ ಮಾರಾಟದ ವಸ್ತುವಾಗಿ ಪರಿಗಣಿಸುತ್ತಾರೆ. ಪುರುಷರ ಮಧ್ಯೆ ಇವರ ಮಾರಾಟ ಮರುಮಾರಾಟವಾಗುತ್ತದೆ. ಮಾರಾಟವಾಗುವ ವಧುಗಳಲ್ಲಿ ಬಹುತೇಕರು ಅಪ್ರಾಪ್ತರಾಗಿದ್ದು ಉತ್ತರಾಖಂಡ, ಬಿಹಾರ, ಮಧ್ಯ ಪ್ರದೇಶ, ಪಶ್ಚಿಮ ಬಂಗಾಳ, ಜಾರ್ಖಂಡ್ ಮತ್ತು ಒಡಿಶಾ ರಾಜ್ಯಗಳ ಬಡ ಕುಟುಂಬಗಳಿಂದ ಬಂದವರಾಗಿರುತ್ತಾರೆ.

ಇತ್ತೀಚೆಗೆ ಹರ್ಯಾಣ ಪೊಲೀಸರು ಒಡಿಶಾದ 15 ವರ್ಷದ ದಲಿತ ಹುಡುಗಿಯನ್ನು ರಕ್ಷಿಸಿದ್ದರು. ಈಕೆಯನ್ನು ಅವಳಿಗಿಂತ ಎರಡು ಪಟ್ಟು ಹೆಚ್ಚಿನ ವಯಸ್ಸಿನ ಪುರುಷನಿಗೆ ಮಾರಾಟ ಮಾಡಲಾಗಿತ್ತು. ಪೊಲೀಸರು ಆತನನ್ನು ಆತನ ತಾಯಿಯ ಜೊತೆ ಬಂಧಿಸಲಾಯಿತು.
ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ಉತ್ತರಾಖಂಡ ಪೊಲೀಸರು 14 ವರ್ಷದ ಬಾಲಕಿಯನ್ನು ಕಳ್ಳಸಾಗಣೆ ಮಾಡುತ್ತಿದ್ದ ಹರ್ಯಾಣ ಮೂಲದ ಇಬ್ಬರು ಮಹಿಳೆಯರನ್ನು ಬಂಧಿಸಿದ್ದರು. ಕಳೆದ ವರ್ಷ ಫೆಬ್ರವರಿಯಲ್ಲಿ ಹರ್ಯಾಣ ಪೊಲೀಸರು ಮೂವರು ಅಪ್ರಾಪ್ತ ಬಾಲಕಿಯರನ್ನು ಕಳ್ಳಸಾಗಣೆ ಮಾಡುತ್ತಿದ್ದ ಗ್ಯಾಂಗ್ ನ್ನು ಬೇಧಿಸಿ ಇಬ್ಬರನ್ನು ಬಂಧಿಸಿದ್ದರು.

ಈ ಬಗ್ಗೆ ಹರ್ಯಾಣದ ಜಿಂಡ್ ಜಿಲ್ಲೆಯ ವ್ಯಕ್ತಿಯೊಬ್ಬರು ಪ್ರತಿಕ್ರಿಯಿಸಿದ್ದಾರೆ. ಬಡ ಅಪ್ರಾಪ್ತ ಬಾಲಕಿಯರ ಪೋಷಕರಿಗೆ ನಂಬಿಸಿ ಒಪ್ಪಿಸಿ ಏಜೆಂಟರ ಮೂಲಕ ಮದುವೆ ಮಾಡಿಕೊಳ್ಳುವುದಾಗಿ ಹಣ ನೀಡಿ ಕರೆಸಿಕೊಳ್ಳುತ್ತಾರೆ. ಇಲ್ಲಿ ಹೆಣ್ಣು ಮಕ್ಕಳು ಬಹುತೇಕರು ಅಪ್ರಾಪ್ತರು ಅನ್ನುವುದು ಮುಖ್ಯ. ವಾಟ್ಸಾಪ್ ಮೂಲಕ ವ್ಯವಹಾರ ರೀತಿಯಲ್ಲಿ ಮಾತುಕತೆ ನಡೆದು ಹೆಣ್ಣು ಮಗುವಿಗೆ ಹಣ ನಿಗದಿಪಡಿಸಲಾಗುತ್ತದೆ.

ಈ ಗಂಭೀರ ಸಮಸ್ಯೆಯನ್ನು ಇತ್ತೀಚೆಗೆ ಡೆಹ್ರಾಡೂನ್ ನಲ್ಲಿ ನಡೆದ ಸಮ್ಮೇಳನದಲ್ಲಿ ಎತ್ತಿದ್ದೇನೆ ಎನ್ನುತ್ತಾರೆ ಅವಿವಾಹಿತ ಪುರುಷ ಸಂಘಟನೆಯ ಸಂಚಾಲಕ ಸುನಿಲ್ ಜಗ್ಲನ್. ಉತ್ತರಾಖಂಡ ಸೇರಿದಂತೆ ಹಲವು ರಾಜ್ಯಗಳ ಬಡ ಪೋಷಕರು ತಮ್ಮ ಹೆಣ್ಣು ಮಕ್ಕಳನ್ನು ಒಂದೂವರೆಯಿಂದ ಎರಡು ಲಕ್ಷದವರೆಗೆ ಮಾರಾಟ ಮಾಡುತ್ತಾರೆ. ಹರ್ಯಾಣದ ಪ್ರತಿ ಗ್ರಾಮಗಳಲ್ಲಿ ಸರಾಸರಿ 10 ಮಂದು ವಧುಗಳನ್ನು ಬೇರೆ ರಾಜ್ಯಗಳಿಂದ ಕರೆತರಲಾಗುತ್ತದೆ. ಜಿಂಡ್ ಜಿಲ್ಲೆಯ ಮೊರ್ಕಿ ಗ್ರಾಮದಲ್ಲಿ ಸುಮಾರು 250 ವಧುಗಳನ್ನು ಹಣ ಕೊಟ್ಟು ಖರೀದಿಸಲಾಗಿದೆ. ಆದರೆ ಸರ್ಕಾರ ಸೇರಿದಂತೆ ಯಾರ ಬಳಿಯೂ ಸರಿಯಾದ ಮಾಹಿತಿಯಿಲ್ಲ ಎನ್ನುತ್ತಾರೆ.

Related Stories

No stories found.

Advertisement

X
Kannada Prabha
www.kannadaprabha.com