ಅಸ್ಸಾಂ ಸರ್ಕಾರದಿಂದ ಎಜಿಪಿ ಹೊರಕ್ಕೆ, ಯಾವುದೇ ಪರಿಣಾಮ ಬೀರಲ್ಲ ಎಂದ ಬಿಜೆಪಿ

ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಅಸ್ಸಾಂನಲ್ಲಿ ಅತಿ ಹೆಚ್ಚು ಕ್ಷೇತ್ರಗಳನ್ನು ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ...
ಪೌರತ್ವ ಮಸೂದೆ ವಿರೋಧಿಸಿ ಹಿಂಸಾತ್ಮಕ ಪ್ರತಿಭಟನೆ
ಪೌರತ್ವ ಮಸೂದೆ ವಿರೋಧಿಸಿ ಹಿಂಸಾತ್ಮಕ ಪ್ರತಿಭಟನೆ
ಗುವಾಹತಿ: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಅಸ್ಸಾಂನಲ್ಲಿ ಅತಿ ಹೆಚ್ಚು ಕ್ಷೇತ್ರಗಳನ್ನು ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ ಬಿಜೆಪಿ, ಮಿತ್ರ ಪಕ್ಷ ಅಸ್ಸಾಂ ಗಣ ಪರಿಷತ್(ಎಜಿಪಿ) ಅಸ್ಸಾಂ ಸರ್ಕಾರದಿಂದ ಹೊರನಡೆದಿರುವುದರಿಂದ ಯಾವುದೇ ಪರಿಣಾಮ ಬೀರಲ್ಲ ಎಂದು ಮಂಗಳವಾರ ಹೇಳಿದೆ.
2014ರಲ್ಲಿ ನಾವು ಏಕಾಂಗಿಯಾಗಿ ಏಳು ಲೋಕಸಭಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದೇವೆ. ಈಗ ಬಿಪಿಎಫ್ ಜತೆ ಮೈತ್ರಿ ಮಾಡಿಕೊಂಡಿದ್ದೇವೆ. ಅಲ್ಲದೆ ರಭಾ, ಟಿಡಬ್ಲ್ಯೂಎ ಹಾಗೂ ಇತರೆ ಪಕ್ಷಗಳು ನಮ್ಮ ಜತೆ ಇದ್ದು, ಎಜಿಪಿ ಮೈತ್ರಿ ಕಡಿದುಕೊಂಡಿರುವುದರಿಂದ ಯಾವುದೇ ಪರಿಣಾಮ ಬೀರಲ್ಲ. ಈ ಬಾರಿ ನಾವು 11 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುತ್ತೇವೆ ಎಂದು ಅಸ್ಸಾಂ ಬಿಜೆಪಿ ರಾಜ್ಯಾಧ್ಯಕ್ಷ ರಂಜೀತ್ ಕುಮಾರ್ ದಾಸ್ ಅವರು ಹೇಳಿದ್ದಾರೆ.
ಇದೇ ವೇಳೆ, ರಾಜ್ಯದಲ್ಲಿ ನಮ್ಮ ಪಕ್ಷ 27 ಲಕ್ಷ ಕಾರ್ಯಕರ್ತರನ್ನು ಹೊಂದಿದ್ದು, ಯಾರೂ ಪ್ರೇರೇಪಿಸಬಾರದು ಎಂದು ಕಾಂಗ್ರೆಸ್ ಹಾಗೂ ಅಖಿಲ್ ಗೋಗೊಯಿ ಅವರ ಕೃಷಿಕ್ ಮುಕ್ತಿ ಸಂಗ್ರಾಂ ಸಮಿತಿ ದಾಸ್ ಎಚ್ಚರಿಕೆ ನೀಡಿದ್ದಾರೆ.
ಅಸ್ಸಾಂ ನಲ್ಲಿ ಪೌರತ್ವ ತಿದ್ದುಪಡಿ ಮಸೂದೆ(ಸಿಟಿಜನ್ಶಿಪ್ ತಿದ್ದುಪಡಿ ಮಸೂದೆ) ಯನ್ನು ವಿರೋಧಿಸಿ ಎಜಿಪಿ ಬಿಜೆಪಿ ಮೈತ್ರಿ ಕಡಿದುಕೊಂಡಿದೆ. 
ಪೌರತ್ವ ತಿದ್ದುಪಡಿ ಮಸೂದೆಯಲ್ಲಿ ಬಾಂಗ್ಲಾದೇಶ, ಪಾಕಿಸ್ತಾನ, ಅಫ್ಘಾನಿಸ್ಥಾನದ ಮುಸ್ಲಿಮೇತರ ಜನರಿಗೆ ಭಾರತದ ಪೌರತ್ವ ನೀಡಲಾಗುವ ಅಂಶವನ್ನು ಪ್ರಸ್ತಾಪಿಸಲಾಗಿದೆ. ಇದನ್ನು ಎಜಿಪಿ ವಿರೋಧಿಸಿದೆ. ಪೌರತ್ವ ತಿದ್ದುಪಡಿ ಮಸೂದೆಯಲ್ಲಿ ತಾನು ವಿರೋಧಿಸುತ್ತಿರುವ ಅಂಶಗಳನ್ನು ಎಜಿಪಿ ನಿಯೋಗ ಗೃಹ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಿ ತಿಳಿಸಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com