ಭಾರತ್ ಬಂದ್ ಗೆ ಉತ್ತರ, ಈಶಾನ್ಯದ ರಾಜ್ಯಗಳು ಸ್ಥಬ್ಧ: ಪ್ರತಿಭಟನೆ ವೇಳೆ ಆರು ಮಂದಿಗೆ ಗಾಯ

ನಾಗರಿಕತ್ವದ ಮಸೂದೆ ಮತ್ತು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಾರ್ಮಿಕ ಸಂಘಟನೆಗಳು ಕರೆ ಕೊಟ್ಟಿರುವ ಭಾರತ್ ಬಂದ್ 2ನೇ ದಿನಕ್ಕೆ ಕಾಲಿಟ್ಟಿದ್ದು, ಉತ್ತರ ಭಾರತದ ಮತ್ತು ಈಶಾನ್ಯ ಭಾರತದ ಕೆಲ ರಾಜ್ಯಗಳಲ್ಲಿ ಬಂದ್ ನಿಂದಾಗಿ ನಾಗರಿಕರು ಅವಸ್ಥೆ ಪಡುವಂತಾಗಿದೆ.

Published: 09th January 2019 12:00 PM  |   Last Updated: 09th January 2019 08:08 AM   |  A+A-


Bandh against Citizenship Bill shuts down Northeast, six injured

ಸಂಗ್ರಹ ಚಿತ್ರ

Posted By : SVN SVN
Source : The New Indian Express
ನವದೆಹಲಿ: ನಾಗರಿಕತ್ವದ ಮಸೂದೆ ಮತ್ತು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಾರ್ಮಿಕ ಸಂಘಟನೆಗಳು ಕರೆ ಕೊಟ್ಟಿರುವ ಭಾರತ್ ಬಂದ್ 2ನೇ ದಿನಕ್ಕೆ ಕಾಲಿಟ್ಟಿದ್ದು, ಉತ್ತರ ಭಾರತದ ಮತ್ತು ಈಶಾನ್ಯ ಭಾರತದ ಕೆಲ ರಾಜ್ಯಗಳಲ್ಲಿ ಬಂದ್ ನಿಂದಾಗಿ ನಾಗರಿಕರು ಅವಸ್ಥೆ ಪಡುವಂತಾಗಿದೆ.

ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ ಭಾರತ್ ಬಂದ್ ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿರುವಂತೆಯೇ ಅತ್ತ ಈಶಾನ್ಯ ಭಾರತದಲ್ಲಿ ಸಿಟಿಜನ್ ಷಿಪ್ ಮಸೂದೆಯ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದ್ದು. ಇದನ್ನು ವಿರೋಧಿಸಿ ಈಶಾನ್ಯ ಭಾರತದ ವಿದ್ಯಾರ್ಥಿಗಳ ಸಂಘಟನೆ 11 ಗಂಟೆಗಳ ಈಶಾನ್ಯ ಭಾರತ ಬಂದ್ ಗೆ ಕರೆ ನೀಡಿದೆ. ಅಂತೆಯೇ ಮಸೂದೆ ವಿರೋಧಿಸಿ ನಡೆದ ವಿವಿಧ ಪ್ರತಿಭಟನೆ ಹಾಗೂ ಹಿಂಸಾಚಾರದಲ್ಲಿ ಈ ವರೆಗೂ 6 ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ತ್ರಿಪುರಾದಲ್ಲಿ ನಡೆದ ವಿದ್ಯಾರ್ಥಿಗಳ ಪ್ರತಿಭಟನೆ ಹಿಂಸಾರೂಪ ಪಡೆದಿದ್ದು, ತ್ವಿಪ್ರಾ ಸ್ಟೂಡೆಂಟ್ಸ್ ಫೆಡರೇಷನ್ ನ 6 ಮಂದಿ ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಪ್ರತಿಭಟನಾ ನಿರತರನ್ನು ನಿಯಂತ್ರಿಸಲು ಪೊಲೀಸರು ನಡೆಸಿದ ಗುಂಡಿನ ದಾಳಿಯಲ್ಲಿ ಈ ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ ಎನ್ನಲಾಗಿದೆ. ಗಾಯಾಳುಗಳನ್ನು ಕೂಡಲೇ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಇನ್ನು ಕೇವಲ ಮಣಿಪುರ ಮಾತ್ರವಲ್ಲದೇ ಅಸ್ಸಾಂ ಮತ್ತು ಮಿಜೋರಾಂ ನಲ್ಲೂ ಮಸೂದೆಯನ್ನು ವಿರೋಧಿಸಿ ಬಂದ್ ಆಚರಿಸಲಾಗುತ್ತಿದೆ. ಪ್ರಮುಖವಾಗಿ ಕೇಂದ್ರ ಸರ್ಕಾರದ ನಿರ್ಧಾರದಿಂದಾಗಿ ಮುಸ್ಲೀಮೇತರ ಸಮುದಾಯವನ್ನು ಹೊರತು ಪಡಿಸಿ ಉಳಿದ ಸಮುದಾಯಗಳು ವಿಚಾರಣೆ ಎದುರಿಸಬೇಕಿದೆ ಎಂದು ಆಕ್ರೋಶ ವ್ಯಕ್ತಪಡಿಸಲಾಗುತ್ತಿದೆ.
Stay up to date on all the latest ರಾಷ್ಟ್ರೀಯ news
Poll
Online education learning

ಆನ್‌ಲೈನ್ ಕಲಿಕೆಯ ಪ್ರಯೋಗವು ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುತ್ತದೆ ಎಂದು ಹಾರ್ವರ್ಡ್ ಪ್ರಾಧ್ಯಾಪಕರೊಬ್ಬರು ಹೇಳಿದ್ದಾರೆ. ನೀವು ಏನಂತೀರಿ?


Result
ಸರಿ
ತಪ್ಪು
ಗೊತ್ತಿಲ್ಲ
flipboard facebook twitter whatsapp