ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಕಾಶ್ಮೀರಿ ಐಎಎಸ್ ಅಧಿಕಾರಿ ಷಾ ಫೈಸಲ್ ರಾಜೀನಾಮೆ!

ಕಾಶ್ಮೀರಿ ಯುವಕರ ಸ್ಪೂರ್ತಿಯಾಗಿದ್ದ ಐಎ ಎಸ್ ಅಧಿಕಾರಿ ಷಾ ಫೈಸಲ್​ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ. ತಾವು ಚುನಾವಣಾ ರಾಜಕೀಯಕ್ಕೆ ಇಳಿಸ್ಯುವುದಾಗಿ ಹೇಳಿರುವ....
ಷಾ ಫೈಸಲ್
ಷಾ ಫೈಸಲ್
ಶ್ರೀನಗರ: ಕಾಶ್ಮೀರಿ ಯುವಕರ ಸ್ಪೂರ್ತಿಯಾಗಿದ್ದ ಐಎ ಎಸ್ ಅಧಿಕಾರಿ  ಷಾ ಫೈಸಲ್​ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ. ತಾವು ಚುನಾವಣಾ ರಾಜಕೀಯಕ್ಕೆ ಇಳಿಸ್ಯುವುದಾಗಿ ಹೇಳಿರುವ ಅವರು ಕಾಶ್ಮೀರದಲ್ಲಿ ನಿರಂತರ ಅಶಾಂತಿಯ ವಾತಾವರಣದಿಂದ ಬೇಸತ್ತು ತಾವು ಈ ನಿರ್ಧಾರಕ್ಕೆ ಬಂದಿದ್ದಾಗಿ ಹೇಳಿದ್ದಾರೆ.
35 ವರ್ಷದ ಷಾ ಫೈಸಲ್ ಭಾರತೀಯ ಲೋಕಸೇವಾ ಆಯೋಗ್ದ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿ ಕಾಶ್ಮೀರ ಸೇರಿ ದೇಶದ ನಾನಾ ಯುವಕರಿಗೆ ಸ್ಪೂರ್ತಿಯಾಗಿದ್ದರು.
"ಕಾಶ್ಮೀರದಲ್ಲಿ ಅಪ್ರಚೋದಿತ ಹತ್ಯೆಗಳು ನಿರಂತರವಾಗಿದ್ದು ಕೇಂದ್ರ ಸರ್ಕಾರ ಸೂಕ್ತ ಕ್ರ್ಮ ತೆಗೆದುಕೊಳ್ಳುವುದಕ್ಕೆ ವಿಫಲವಾಗಿದೆ. ಹೀಗಾಗಿ ನಾನು ಐಎ ಎಸ್ ಹುದ್ದೆಗೆ ರಾಜೀನಾಮೆ ನೀಡಲು ನಿರ್ಧರಿಸಿದ್ದೇನೆ. ಕಾಶ್ಮೀರದ ಜನರ ಬದುಕು ಅತಿ ಮುಖ್ಯವಾಗಿದೆ." ಅವರು ತಮ್ಮ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.
ಷಾ ಫೈಸಲ್ 2010ನೇ ಸಾಲಿನ ಐಎ ಎಸ್ ಅಧಿಕಾರಿಯಾಗಿದ್ದು ತಾವು ತನ್ನ ಮಿಂದಿನ ನಡೆ ಏನು ಎನ್ನುವುದನ್ನು ಶುಕ್ರವಾರ ಘೋಷಿಸುವುದಾಗಿ ಹೇಳಿದ್ದಾರೆ. ಆದರೆ ಅವರು ನ್ಯಾಷನಲ್ ಕಾನ್ಫರೆನ್ಸ್ ಪಕ್ಷ ಸೇರಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಾರಾಮುಲ್ಲಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂದು ಮೂಲಗಳು ಹೇಳಿವೆ.
ಈ ಸಂಬಂಧ ಟ್ವೀಟ್ ಮಾಡಿರುವ ಓಮರ್ ಅಬ್ದುಲ್ಲಾ "ಫೈಸಲ್ನಿರ್ಧಾರಕ್ಕೆ ನಮ್ಮ ಸ್ವಾಗತವಿದೆ.ಅಧಿಕಾರಶಾಹಿಯ ನಷ್ಟ ರಾಜಕೀಯದ ಲಾಭ, ನಿಮಗೆ ರಾಜಕೀಯಕ್ಕೆ ಸ್ವಾಗತ" ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com