ಪಬ್‌ಜಿ ಗೇಮ್‌ನಿಂದ ಜೀವಕ್ಕೆ ಕುತ್ತು ತಂದುಕೊಂಡ ಜಿಮ್ ಟ್ರೈನರ್, ಕಣಿವೆ ರಾಜ್ಯದಲ್ಲೇ 6 ಪ್ರಕರಣ ಬೆಳಕಿಗೆ!

ವಿಶ್ವದೆಲ್ಲಡೆ ಯುವ ಜನತೆಯನ್ನು ಸಾವಿನ ದವಡೆಗೆ ತಳ್ಳಿದ ಬ್ಲೂ ವೇಲ್ ಗೇಮ್ ಬಗ್ಗೆ ಎಲ್ಲರಿಗೂ ತಿಳಿದಿದೆ. ಇದೀಗ ಮತ್ತೊಂದು ಡೇಂಜಸರ್ ಗೇಮ್ ಎಂಟ್ರಿ ಕೊಟ್ಟಿದ್ದು ಅದರ ಹೆಸರೇ ಪಬ್‌ಜಿ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ವಿಶ್ವದೆಲ್ಲಡೆ ಯುವ ಜನತೆಯನ್ನು ಸಾವಿನ ದವಡೆಗೆ ತಳ್ಳಿದ ಬ್ಲೂ ವೇಲ್ ಗೇಮ್ ಬಗ್ಗೆ ಎಲ್ಲರಿಗೂ ತಿಳಿದಿದೆ. ಇದೀಗ ಮತ್ತೊಂದು ಡೇಂಜಸರ್ ಗೇಮ್ ಎಂಟ್ರಿ ಕೊಟ್ಟಿದ್ದು ಅದರ ಹೆಸರೇ ಪಬ್‌ಜಿ. 
ಬ್ಲೂ ವೇಲ್ ಗೇಮ್ ಯುವ ಜನತೆಯ ಜೀವ ತೆಗೆದರೆ, ಈ ಪಬ್‌ಜಿ ಗೇಮ್‌ ಯುವಕರ ಜೀವನವನ್ನೇ ಹಾಳು ಮಾಡುತ್ತಿದೆ. ಹೌದು ಕಳೆದ 10 ದಿನಗಳಿಂದ ಪಬ್‌ಜಿ ಗೇಮ್‌ ಆಡುತ್ತಿದ್ದ ಜಿಮ್ ಟ್ರೈನರ್ ಒಬ್ಬ ಇದೀಗ ಆಸ್ಪತ್ರೆಯ ಪಾಲಾಗಿದ್ದಾನೆ. 
ಜಮ್ಮು ಮತ್ತು ಕಾಶ್ಮೀರದಲ್ಲಿ ಜಿಮ್ ಟ್ರೈನರ್ ಆಗಿರುವ ಯುವಕ ಪಬ್‌ಜಿ ಗೇಮ್‌ಗೆ ದಾಸನಾಗಿದ್ದಾನೆ. ಮೊದಲ ರೌಂಡ್ ಮುಕ್ತಾಯವಾಗುತ್ತಿದ್ದಂತೆ ಆತ ನನಗೆ ತಾನೇ ಹೊಡೆದುಕೊಳ್ಳುವ ಮೂಲಕ ತೀವ್ರವಾಗಿ ಗಾಯಗೊಂಡಿದ್ದು ಆತನನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಜಗತ್ತಿನಾದ್ಯಂತ ಪಬ್‌ಜಿ ಗೇಮ್‌ಗೆ ಯುವಕರು ಹೆಚ್ಚು ಆಕರ್ಷಿತರಾಗುತ್ತಿದ್ದು ಜಮ್ಮು ಮತ್ತು ಕಾಶ್ಮೀರದಲ್ಲೂ ಸಹ ಇದಕ್ಕೆ ಹೊರತಾಗಿಲ್ಲ. ಇನ್ನು ಪಬ್‌ಜಿ ಗೇಮ್‌ನಿಂದಾಗಿ ಕಣಿವೆ ರಾಜ್ಯದಲ್ಲೇ ಒಟ್ಟು ಆರು ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಹೇಳಲಾಗುತ್ತಿದೆ. 
ಪಬ್‌ಜಿ ಗೇಮ್‌ ನ ವಿಸ್ತೃತ ರೂಪ 'ಪ್ಲೇಯರ್ ಅನೌನ್ಸ್ ಬ್ಯಾಟಲ್ ಗ್ರಾಂಡ್'. ಇದೊಂದು ಆನ್ ಲೈನ್ ಮಲ್ಪಿ ಪ್ಲೇಯರ್ ಬ್ಯಾಟಲ್ ರಾಯಲ್ ಗೇಮ್. ಈ ಆಟಕ್ಕೆ ದಾಸನಾಗುವವರು ನಿಧನವಾಗಿ ಮಾನಸಿಕ ಖಿನ್ನತೆಗೆ ಒಳಗಾಗುತ್ತಾರೆ. ಒಂದೇ ಆಟವನ್ನು ಮೇಲಿಂದ ಮೇಲೆ ಆಡುವುದರಿಂದ ಮೆದುಳಿನಲ್ಲಿ ಬಿಡುಗಡೆಯಾಗುವ ಹಾರ್ಮೋನ್ ಗಳಲ್ಲಿ ಏರುಪೇರಾಗುವ ಸಾಧ್ಯತೆಗಳಿವೆ ಎಂದು ವೈದ್ಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com