ಮಗಳನ್ನು ಅಂಗನವಾಡಿಗೆ ಸೇರಿಸಿ ಜನಮನ ಗೆದ್ದ ತಮಿಳುನಾಡು ಜಿಲ್ಲಾಧಿಕಾರಿ

ಮಕ್ಕಳ ಶೈಕ್ಷಣಿಕ ಅಡಿಪಾಯ ಚೆನ್ನಾಗಿರಲಿ ಎಂಬ ಉದ್ದೇಶದಿಂದ ನಾವು ದೊಡ್ಡ ದೊಡ್ಡ ಶಾಲೆಗಳಿಗೆ ಸೇರಿಸುವುದು ಸಾಮಾನ್ಯ, ಆದರೆ ತಮಿಳುನಾಡಿನ...
ಅಂಗನವಾಡಿ ಮಕ್ಕಳ ಜೊತೆ ಜಿಲ್ಲಾಧಿಕಾರಿ ಶಿಲ್ಪ ಪುತ್ರಿ
ಅಂಗನವಾಡಿ ಮಕ್ಕಳ ಜೊತೆ ಜಿಲ್ಲಾಧಿಕಾರಿ ಶಿಲ್ಪ ಪುತ್ರಿ
ತಿರುನೆಲ್ವೇಲಿ: ಮಕ್ಕಳ ಶೈಕ್ಷಣಿಕ ಅಡಿಪಾಯ ಚೆನ್ನಾಗಿರಲಿ ಎಂಬ ಉದ್ದೇಶದಿಂದ ನಾವು ದೊಡ್ಡ ದೊಡ್ಡ ಶಾಲೆಗಳಿಗೆ ಸೇರಿಸುವುದು ಸಾಮಾನ್ಯ, ಆದರೆ ತಮಿಳುನಾಡಿನ ತಿರುನೆಲ್ವೇಲಿ ಜಿಲ್ಲಾಧಿಕಾರಿ ಕರ್ನಾಟಕ ಮೂಲದ ಶಿಲ್ಪಾ ಪ್ರಭಾಕರ್ ಸತೀಶ್ ವಿಭಿನ್ನವಾಗಿ ನಿಂತಿದ್ದಾರೆ, ತಮ್ಮ ಮಗಳನ್ನು ಪಾಳಯಂಕೋಟೈಯಲ್ಲಿರುವ ಅಂಗನವಾಡಿಗೆ ಸೇರಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಅಂಗನವಾಡಿಗೆ ಸೇರಿಸಿದ ಮೇಲೆ ತಮ್ಮ ಮಗಳ ತಮಿಳು ಸುಧಾರಿಸಿದೆ. ಸಮಾಜದ ಎಲ್ಲಾ ರೀತಿಯ ಜನಗಳ ಜೊತೆ ನನ್ನ ಮಗಳು ಸೇರಬೇಕು, ಅವರ ಜೊತೆ ಸೇರಿ ಕಲಿಯಬೇಕು, ಹೀಗಾಗಿ ನರ್ಸರಿ ಶಾಲೆ ಬದಲು ಅಂಗನವಾಡಿಗೆ ಸೇರಿಸಿದ್ದೇನೆ ಎಂದು ಹೇಳುವ ಮೂಲಕ ಶಿಲ್ಪಾ ಎಲ್ಲರ ಮನ ಗೆದ್ದಿದ್ದಾರೆ.
ಅಂಗನವಾಡಿ ಕೇಂದ್ರವೂ ತಮ್ಮ ಜಿಲ್ಲಾಧಿಕಾರಿ ಕಚೇರಿ ಬಳಿಯೇ ಇದ್ದು ಎಲ್ಲಾ ರೀತಿಯ ಸೌಕರ್ಯಗಳನ್ನು ಹೊಂದಿದೆ, ಅಲ್ಲಿನ ಶಿಕ್ಷಕಿಯರು ತುಂಬಾ ಸಕ್ರಿಯರಾಗಿದ್ದಾರೆ., ಅಂಗನಾಡಿಯಲ್ಲಿರುವ ಎಲ್ಲಾ ಸಿಬ್ಬಂದಿ ತರಬೇತಿ ಪಡೆದು ಮೂಲಭೂತ ಸೌಕರ್ಯಗಳು ಉತ್ತಮ ಗುಣಮಟ್ಟದಿಂದ ಕೂಡಿವೆ.
ತಿರುನೆಲ್ವೇಲಿಯಲ್ಲಿರುವ ಎಲ್ಲಾ ಅಂಗನವಾಡಿ ಕೇಂದ್ರಗಳಲ್ಲೂ ಸ್ಮಾರ್ಟ್ ಫೋನ್ ಹೊಂದಿವೆ. ಮಕ್ಕಳ ಎತ್ತರ ಮತ್ತು ತೂಕವನ್ನು ಅವರು ತಿಂದ ಆಹಾರದ ಪ್ರಮಾಣ ಕೂಡ ಅಳತೆ ಮಾಡಲಾಗುತ್ತದೆ, ಈ ಅಂಗನವಾಡಿಗಳನ್ನು ಮತ್ತಷ್ಟು ಅಭಿವೃದ್ಧಿಗೊಳಿಸಲು ನಾವು ನಿರ್ಧರಿಸಿದ್ದೇವೆ, ಏಕೆಂದರೆ ಬಾಲ್ಯದಲ್ಲಿ ಮಕ್ಕಳ ಬೆಳವಣಿಗೆಗೆಯಲ್ಲಿ ಅಂಗನವಾಡಿಗಳು ಮಹತ್ವದ ಪಾತ್ರ ವಹಿಸುತ್ತವೆ ಎಂದು ಶಿಲ್ಪಾ ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com