ಕೇಂದ್ರದ 'ಆಯುಷ್ಮಾನ್ ಭಾರತ್'ದಿಂದ ಹೊರಬಂದ ಪಶ್ಚಿಮ ಬಂಗಾಳ

ದೆಹಲಿ, ತೆಲಂಗಾಣ, ಕೇರಳ ಹಾಗೂ ಪಂಜಾಬ್ ನಂತರ ಇದೀಗ ಪಶ್ಚಿಮ ಬಂಗಾಳ ಸಹ ಕೇಂದ್ರದ 'ಆಯುಷ್ಮಾನ್ ಭಾರತ್'....
ಮಮತಾ ಬ್ಯಾನರ್ಜಿ
ಮಮತಾ ಬ್ಯಾನರ್ಜಿ
ಕೋಲ್ಕತಾ: ದೆಹಲಿ, ತೆಲಂಗಾಣ, ಕೇರಳ ಹಾಗೂ ಪಂಜಾಬ್ ನಂತರ ಇದೀಗ ಪಶ್ಚಿಮ ಬಂಗಾಳ ಸಹ ಕೇಂದ್ರದ 'ಆಯುಷ್ಮಾನ್ ಭಾರತ್' ಯೋಜನೆಯಿಂದ ಗರುವಾರ ಹೊರಬಂದಿದೆ. 
ಇಂದು ನಡಿಯಾ ಜಿಲ್ಲೆಯಲ್ಲಿ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಪಶ್ಚಿನ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು,  ಆಯುಷ್ಮಾನ್ ಭಾರತ ಒಂದು ರಾಜಕೀಯ ಗಿಮಕ್ ಅಷ್ಟೆ. ತೆರಿಗೆದಾರರ ಹಣವನ್ನು ಈ ಯೋಜನೆ ಖರ್ಚು ಮಾಡಲು ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದಾರೆ.
ಈ ಸಂಬಂಧ ಕೇಂದ್ರ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ ಮಮತಾ ಬ್ಯಾನರ್ಜಿ, ಪ್ರಧಾನಿ ಮೋದಿಯನ್ನು ಬಿಂಬಿಸುವ "ಆಯುಷ್ಮಾನ್ ಯೋಜನೆಗೆ 40% ರಷ್ಟು ಹಣವನ್ನು ನಮ್ಮ ರಾಜ್ಯವು ಕೊಡುವುದಿಲ್ಲ. ಈ ಯೋಜನೆಗೆ ಕೇಂದ್ರ ಸರ್ಕಾರವೇ ಪೂರ್ಣ ಪ್ರಮಾಣದ ಹಣವನ್ನು ಪಾವತಿಸಬೇಕು ಎಂದಿದ್ದಾರೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಸೆಪ್ಟೆಂಬರ್ 23 ರಂದು ದೇಶದಾದ್ಯಂತ 10.74 ಕೋಟಿ ಕುಟುಂಬಗಳಿಗೆ ವಾರ್ಷಿಕ 5 ಲಕ್ಷ ಆರೋಗ್ಯ ರಕ್ಷಣೆ ಒದಗಿಸುವ ನಿಟ್ಟಿನಲ್ಲಿ ಆಯುಷ್ಮಾನ್ ಭಾರತ್ ಯೋಜನೆಗೆ ಚಾಲನೆ ನೀಡಿದ್ದರು.
ಈ ಯೋಜನೆಯನ್ನು ಘೋಷಿಸಿದಾಗ ಯೋಜನೆಯಿಂದ ಹೊರಗುಳಿಯುವುದಾಗಿ ಮಮತಾ ಸರ್ಕಾರ ಹೇಳಿತ್ತು.ಆದರೆ ನಂತರ ಕೇಂದ್ರ ಸರ್ಕಾರದೊಂದಿಗೆ ಈ ಯೋಜನೆಯ ವಿಚಾರವಾಗಿ ಒಡಂಬಡಿಕೆಯನ್ನು ಮಾಡಿಕೊಂಡಿತ್ತು. 
ಪಶ್ಚಿಮ ಬಂಗಾಳ ಸರ್ಕಾರವು ಆಯುಷ್ಮಾನ್ ಭಾರತ್ ಯೋಜನೆಯನ್ನು ರಾಜ್ಯ ಸರ್ಕಾರದ ಸ್ವಾಸ್ತ್ಯ ಸಥಿ ಯೋಜನೆಯೊಂದಿಗೆ ವಿಲೀನಗೊಳಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com