ಮೇಲ್ವರ್ಗದ ಬಡವರಿಗೆ ಶೇ, 10 ರಷ್ಟು ಮೀಸಲಾತಿ: ಸಂವಿಧಾನದ ಮೂಲ ರಚನೆಗೆ ಧಕ್ಕೆ ಆಗಲ್ಲ - ಅರುಣ್ ಜೇಟ್ಲಿ

ಮೇಲ್ವರ್ಗದ ಬಡವರಿಗೆ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಶೇ, 10 ರಷ್ಟು ಮೀಸಲಾತಿಯಿಂದ ಸಂವಿಧಾನದ ಮೂಲ ರಚನೆಗೆ ಧಕ್ಕೆ ಆಗಲ್ಲ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ್ದು, ಇದರಿಂದ ಸಾಮಾನ್ಯವರ್ಗದ ಬಡವರಿಗೆ ಅನುಕೂಲವಾಗಲಿದೆ ಎಂದಿದ್ದಾರೆ.
ಅರುಣ್ ಜೇಟ್ಲಿ
ಅರುಣ್ ಜೇಟ್ಲಿ

ನವದೆಹಲಿ: ಮೇಲ್ವರ್ಗದ ಬಡವರಿಗೆ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಶೇ, 10 ರಷ್ಟು ಮೀಸಲಾತಿಯಿಂದ ಸಂವಿಧಾನದ ಮೂಲ ರಚನೆಗೆ ಧಕ್ಕೆ ಆಗಲ್ಲ  ಎಂದು ವಿತ್ತ ಸಚಿವ ಅರುಣ್ ಜೇಟ್ಲಿ  ಹೇಳಿದ್ದು, ಇದರಿಂದ ಸಾಮಾನ್ಯವರ್ಗದ ಬಡವರಿಗೆ ಅನುಕೂಲವಾಗಲಿದೆ ಎಂದಿದ್ದಾರೆ.

ಸಂಸತ್ತಿನಲ್ಲಿ ಇತ್ತೀಚಿಗೆ ಅಂಗೀಕಾರಗೊಂಡ ಈ ಮಸೂದೆಗೆ ಪ್ರತಿಪಕ್ಷ ಕಾಂಗ್ರೆಸ್  ಒಲ್ಲದ ಮನಸ್ಸಿನಿಂದ ಬೆಂಬಲ ನೀಡಿದೆ ಎಂದು ಅವರು ಆರೋಪಿಸಿದ್ದಾರೆ.

ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳು ಮತ್ತು ಇತರ ಹಿಂದುಳಿದ ವರ್ಗಗಳಂತೆ ಸಾಮಾಜಿಕ ಮತ್ತು ಶೈಕ್ಷಣಿಕ ಹಿಂದುಳಿದಿರುವಿಕೆಯನ್ನು ನಿರ್ಣಯಿಸುವ ಅಂಶಗಳಲ್ಲಿ ದೇಶದಲ್ಲಿ ಜಾತಿ ಪ್ರಮುಖ ನಿರ್ಣಾಯಕ ಎಂದು ಪರಿಗಣಿಸಲ್ಪಟ್ಟಿದೆ ಎಂದು ಅವರು ತಮ್ಮ ಫೇಸ್ ಬುಕ್ ಬ್ಲಾಗ್ ನಲ್ಲಿ ಬರೆದುಕೊಂಡಿದ್ದಾರೆ.

ಆದಾಗ್ಯೂ, 'ಬಡತನವು ಜಾತ್ಯತೀತ ಮಾನದಂಡವಾಗಿದೆ  ಮತ್ತು  ಅದು ಸಮುದಾಯಗಳು ಮತ್ತು ಧರ್ಮಗಳನ್ನು ಕಡಿತಗೊಳಿಸುತ್ತದೆ' ಎಂದು ಅವರು ಹೇಳಿದ್ದಾರೆ. 'ಬಡತನವನ್ನು ಮಾನದಂಡವಾಗಿ  ರೂಪಿಸುವಂತೆ ಹೇಳುವುದು ಸಂವಿಧಾನದ ಮೂಲಭೂತ ರಚನೆಯನ್ನು  ವಿರೋಧಿಸುವುದಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಸಮಾನ ಅವಕಾಶ ಹಾಗೂ ನ್ಯಾಯದ ಬಗ್ಗೆ ಸಂವಿಧಾನದ ಪ್ರಸ್ತಾವನೆಯಲ್ಲಿಯೇ ಹೇಳಲಾಗಿದ್ದು, ಶೇ, 50% ಕ್ಕೆ ಮೀಸಲಾತಿ ನಿರ್ಬಂಧಗೊಳಿಸಿರುವ ಸುಪ್ರೀಂಕೋರ್ಟ್ , ಮೀಸಲಾತಿ ಇಲ್ಲದ ಬಡವರಿಗೆ ಶೇ, 10 ರಷ್ಟು ಮೀಸಲಾತಿ ಒದಗಿದಂತೆ ಏನನ್ನೂ ನಿಯಮ ರೂಪಿಸಿಲ್ಲ . ಇದರಿಂದಾಗಿ ಮೇಲ್ವರ್ಗದ ಬಡವರಿಗೆ ಅನುಕೂಲವಾಗಲಿದೆ ಎಂದು ಅರುಣ್ ಜೇಟ್ಲಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com