ಶಾರದಾ ಚಿಟ್ ಫಂಡ್ ಹಗರಣ: ಚಿದಂಬರಂ ಪತ್ನಿ ನಳಿನಿ ವಿರುದ್ಧ ಸಿಬಿಐ ಚಾರ್ಜ್ ಶೀಟ್ ದಾಖಲು

ಶಾರದಾ ಚಿಟ್ ಫಂಡ್ ಹಗರಣಕ್ಕೆ ಸಂಬಂಧಿಸಿದಂತೆ ಕೇಂದ್ರದ ಮಾಜಿ ಸಚಿವ ಪಿ. ಚಿದಂಬರಂ ಅವರ ಪತ್ನಿ ನಳಿನಿ ಚಿದಂಬರಂ ವಿರುದ್ಧ ಸಿಬಿಐ ಇಂದು ಚಾರ್ಜ್ ಶೀಟ್ ದಾಖಲಿಸಿದೆ.

Published: 11th January 2019 12:00 PM  |   Last Updated: 11th January 2019 06:51 AM   |  A+A-


Nalini Chidambaram

ನಳಿನಿ ಚಿದಂಬರಂ

Posted By : ABN ABN
Source : The New Indian Express
ನವದೆಹಲಿ: ಶಾರದಾ ಚಿಟ್ ಫಂಡ್  ಹಗರಣಕ್ಕೆ ಸಂಬಂಧಿಸಿದಂತೆ ಕೇಂದ್ರದ ಮಾಜಿ ಸಚಿವ ಪಿ. ಚಿದಂಬರಂ ಅವರ ಪತ್ನಿ ನಳಿನಿ ಚಿದಂಬರಂ ವಿರುದ್ಧ ಸಿಬಿಐ ಇಂದು ಚಾರ್ಜ್ ಶೀಟ್ ದಾಖಲಿಸಿದೆ.

ಈ ಹಗರಣದಲ್ಲಿ  ಶಾರದಾ ಸಮೂಹದ ಕಂಪನಿಗಳಿಂದ ನಳಿನಿ ಚಿದಂಬರಂ  1.4 ಕೋಟಿ ರೂಪಾಯಿ ಪಡೆದಿದ್ದಾರೆ ಎಂದು ಆರೋಪಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಶಾರದಾ  ಗ್ರೂಪ್  ಕಂಪನಿಗಳ ನಿಧಿ ದುರಪಯೋಗ ಹಾಗೂ ವಂಚನೆಯ ದುರುದ್ದೇಶದಿಂದ  ಶಾರದ ಗ್ರೂಪ್ ನ ಮಾಲೀಕ ಸುದೀಪ್ತಾ ಸೇನ್ ಹಾಗೂ ಇತರ ಆರೋಪಿಗಳೊಂದಿಗೆ ನಳಿನಿ ಚಿದಂಬರಂ ಸೇರಿ ಅಪರಾಧ ಪಿತೂರಿ ನಡೆಸಿದ್ದಾರೆ ಎಂದು ಸಿಬಿಐ ವಕ್ತಾರ ಅಭಿಷೇಕ್ ದಯಾಳ್ ಆರೋಪಿಸಿದ್ದಾರೆ.

ಮಾಜಿ ಕೇಂದ್ರ ಸಚಿವ ಮಾತಂಗ್ ಸಿನ್ ಅವರ ಪತ್ನಿ ಮನೊರಾಂಜನಾ ಸಿನ್ ಅವರು  ಸೆಬಿ, ಆರ್ ಓಸಿ ಮತ್ತಿತರ ತನಿಖೆಗಳ ನಿರ್ವಹಣೆಗಾಗಿ ನಳಿನಿ ಚಿದಂಬರಂ ಅವರನ್ನು  ಸೇನ್ ಅವರಿಗೆ   ಪರಿಚಯಿಸಿದ್ದರು.

2010-12ರ ಅವಧಿಯಲ್ಲಿ ಶಾರದಾ ಗ್ರೂಪ್ ಆಫ್ ಕಂಪನಿಗಳಿಂದ ನಳಿನಿ ಚಿದಂಬರಂ 1.4 ಕೋಟಿ ರೂಪಾಯಿ ಪಡೆದಿದ್ದಾರೆ ಎಂದು ಸಿಬಿಐ ಆರೋಪಿಸಿದ್ದು, ಕೊಲ್ಕತ್ತಾ ವಿಶೇಷ ನ್ಯಾಯಾಲಯದಲ್ಲಿ ಜಾರ್ಜ್ ಶೀಟ್ ದಾಖಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಶಾರದಾ  ಸಮೂಹದ ಕಂಪನಿಗಳು ಅಧಿಕ ಬಡ್ಡಿದರದ ಆಮಿಷವೊಡ್ಡುವ ಮೂಲಕ ಜನರಿಂದ 2.500 ಕೋಟಿ ರೂ ಸಂಗ್ರಹಿಸಿವೆ. ಆದರೆ,  ಮರುಪಾವತಿಸಿಲ್ಲ.  ಇದರಿಂದಾಗಿ  2013ರಲ್ಲಿ ಸೇನ್ ಕಂಪನಿಯನ್ನು ಮುಚ್ಚಿದ್ದಾರೆ.

ಈ ಹಗರಣದ ತನಿಖೆಯನ್ನು ಸುಪ್ರೀಂಕೋರ್ಟ್ 2014ರಲ್ಲಿ ಸಿಬಿಐಗೆ ವಹಿಸಿದ ನಂತರ ಈವರೆಗೂ ಆರು ಚಾರ್ಜ್ ಶೀಟ್ ದಾಖಲಿಸಲಾಗಿದೆ ಎಂದು ಅವರು ಹೇಳಿದ್ದಾರೆ
Stay up to date on all the latest ರಾಷ್ಟ್ರೀಯ news with The Kannadaprabha App. Download now
Poll
Priyanka gandhi

ಪ್ರಿಯಾಂಕಾ ಗಾಂಧಿಯನ್ನು ಉತ್ತರ ಪ್ರದೇಶದಲ್ಲಿ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಕಾಂಗ್ರೆಸ್ ಘೋಷಿಸಬೇಕೇ?


Result
ಹೌದು
ಬೇಡ
ಗೊತ್ತಿಲ್ಲ
facebook twitter whatsapp