'ಸ್ನೇಹಿತ' ಹಾರ್ದಿಕ್ ಪಾಂಡ್ಯ ಬಗ್ಗೆ ಕೇಳಿದ್ದಕ್ಕೆ ತೀವ್ರ ಆಕ್ರೋಶಗೊಂಡ ಇಶಾ ಗುಪ್ತಾ: ಕಾರಣ ಗೊತ್ತಾ?

ಕರಣ್ ಜೋಹಾರ್ ನ ಟಿವಿ ಕಾರ್ಯಕ್ರಮದಲ್ಲಿ ವಿವಾದಕ್ಕೆ ಗುರಿಯಾಗಿ ಬಿಸಿಸಿಐ ಕೆಂಗಣ್ಣಿಗೆ ಗುರಿಯಾಗಿದ್ದ ಹಾರ್ದಿಕ್ ಪಾಂಡ್ಯ ಹಾಗೂ ಕೆಎಲ್ ರಾಹುಲ್ ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ಆದರೆ ಬೇರೆಯ ಕಾರಣಕ್ಕಾಗಿ.

Published: 12th January 2019 12:00 PM  |   Last Updated: 12th January 2019 02:10 AM   |  A+A-


Isha Gupta denies being friends with Hardik Pandya, loses cool when asked about him

'ಸ್ನೇಹಿತ' ಹಾರ್ದಿಕ್ ಪಾಂಡ್ಯ ಬಗ್ಗೆ ಕೇಳಿದ್ದಕ್ಕೆ ತೀವ್ರ ಆಕ್ರೋಶಗೊಂದ ಇಶಾ ಗುಪ್ತಾ: ಕಾರಣ ಗೊತ್ತಾ?

Posted By : SBV SBV
Source : Online Desk
ನವದೆಹಲಿ: ಕರಣ್ ಜೋಹಾರ್ ನ ಟಿವಿ ಕಾರ್ಯಕ್ರಮದಲ್ಲಿ ವಿವಾದಕ್ಕೆ ಗುರಿಯಾಗಿ ಬಿಸಿಸಿಐ ಕೆಂಗಣ್ಣಿಗೆ ಗುರಿಯಾಗಿದ್ದ ಹಾರ್ದಿಕ್ ಪಾಂಡ್ಯ ಹಾಗೂ ಕೆಎಲ್ ರಾಹುಲ್ ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ಆದರೆ ಬೇರೆಯ ಕಾರಣಕ್ಕಾಗಿ. 

ಡೇಟಿಂಗ್ ಸುದ್ದಿಯಲ್ಲಿ ಹಾರ್ದಿಕ್ ಪಾಂಡ್ಯ ಜೊತೆಗೆ ತಳುಕು ಹಾಕಿಕೊಂಡಿದ್ದ ಹೆಸರು ಇಶಾ ಗುಪ್ತಾ. ಈಗ ಕರಣ್ ಜೋಹಾರ್ ಅವರ ಕಾರ್ಯಕ್ರಮದಲ್ಲಿ ಹಾರ್ದಿಕ್ ಪಾಂಡ್ಯ ಅವರ ವಿವಾದಿತ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ಕೇಳಲು ಹೋದಾಗ ಇಶಾ ಗುಪ್ತಾ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ನಿಮ್ಮ ಬೆಸ್ಟ್ ಫ್ರೆಂಡ್ ಹಾರ್ದಿಕ್ ಪಾಂಡ್ಯ ಅವರು ಮಹಿಳೆಯರ ಕುರಿತು ನೀಡಿರುವ ಅನುಚಿತ ಹೇಳಿಕೆ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು ಎಂದು ಕಾರ್ಯಕ್ರಮವೊಂದರಲ್ಲಿ ಪತ್ರಕರ್ತರು ಕೇಳಿದ ಪ್ರಶ್ನೆಗೆ "ನೀವು ನನ್ನ ಫ್ರೆಂಡ್ ಎಂದು ಹೇಳುತ್ತಿರುವ ವ್ಯಕ್ತಿ ಯಾರು? ಎಂದು ಮರು ಪ್ರಶ್ನೆ ಹಾಕಿದ್ದಾರೆ. 

"ಮೊದಲನೆಯದಾಗಿ ಮಹಿಳೆಯರು ಪುರುಷರೊಂದಿಗೆ ತಮ್ಮನ್ನು ಹೋಲಿಸಿಕೊಳ್ಳಲೇಬಾರದು, ಎಲ್ಲಾ ರೀತಿಯಲ್ಲೂ ಮಹಿಳೆಯರೇ ಬೆಸ್ಟ್, ಯಾರೂ ಬೇಸರ ಮಾಡಿಕೊಳ್ಳಬೇಡಿ, ಯಾವುದೇ ಪುರುಷರೇಕೆ ಮಕ್ಕಳಿಗೆ ಜನ್ಮ ನೀಡುವುದಿಲ್ಲ? ಪ್ರತಿ ತಿಂಗಳೂ ಋತುಸ್ರಾವವಿದ್ದರೂ ನಾವು ಕಚೇರಿಗೆ ಹೋಗಬೇಕು, ಡಾನ್ಸ್ ಮಾಡಬೇಕು, ಮಕ್ಕಳನ್ನು ನೋಡಿಕೊಳ್ಳಬೇಕು, ಪುರುಷರೂ ಇದೆಲ್ಲಾ ಮಾಡುವುದಾದರೆ ಶ್ರೇಷ್ಠ ಎಂದು ಭಾವಿಸಬಹುದು ಎಂದು ಇಶಾ ಗುಪ್ತಾ ಹೇಳಿದ್ದಾರೆ. 
Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp