'ಆಪರೇಷನ್ ಕಮಲ ಯಶಸ್ವಿಯಾಗುತ್ತದೆ, ಮುಂದೆ ಮತ್ತಷ್ಟು ಬದಲಾವಣೆ'

ಇಬ್ಬರು ಪಕ್ಷೇತರ ಶಾಸಕರು ರಾಜ್ಯ ಕಾಂಗ್ರೆಸ್- ಜೆಡಿಎಸ್ ಸರ್ಕಾರಕ್ಕೆ ನೀಡಿರುವ ಬೆಂಬಲವನ್ನು ವಾಪಸ್ ಪಡೆಯುತ್ತಿದ್ದಂತೆಯೇ ಬಿಜೆಪಿ ನಾಯಕರೊಬ್ಬರು ಪ್ರತಿಕ್ರಿಯೆ ನೀಡಿ ಆಪರೇಷನ್ ಕಮಲ ಯಶಸ್ವಿಯಾಗುತ್ತದೆ

Published: 15th January 2019 12:00 PM  |   Last Updated: 15th January 2019 07:06 AM   |  A+A-


'Operation lotus' will be successful, says BJP leader after two Independent MLAs withdraw support from Karnataka govt

'ಆಪರೇಷನ್ ಕಮಲ ಯಶಸ್ವಿಯಾಗುತ್ತದೆ, ಮುಂದೆ ಮತ್ತಷ್ಟು ಬದಲಾವಣೆ'

Posted By : SBV SBV
Source : Online Desk
ಮುಂಬೈ: ಇಬ್ಬರು ಪಕ್ಷೇತರ ಶಾಸಕರು ರಾಜ್ಯ ಕಾಂಗ್ರೆಸ್- ಜೆಡಿಎಸ್ ಸರ್ಕಾರಕ್ಕೆ ನೀಡಿರುವ ಬೆಂಬಲವನ್ನು ವಾಪಸ್ ಪಡೆಯುತ್ತಿದ್ದಂತೆಯೇ ಬಿಜೆಪಿ ನಾಯಕರೊಬ್ಬರು ಪ್ರತಿಕ್ರಿಯೆ ನೀಡಿ ಆಪರೇಷನ್ ಕಮಲ ಯಶಸ್ವಿಯಾಗುತ್ತದೆ ಎಂದು ಹೇಳಿದ್ದಾರೆ. 

ಪಕ್ಷೇತರ ಶಾಸಕರೊಂದಿಗೆ ಕಾಂಗ್ರೆಸ್ ನ ಕೆಲವರು ಶಾಸಕರೂ ಸಹ ಮುಂಬೈ ನಲ್ಲಿದ್ದು, ಸರ್ಕಾರ ಅಸ್ಥಿರವಾಗುವ ಸೂಚನೆ ಲಭಿಸಿದೆ. ಈ ಬೆನ್ನಲ್ಲೇ ಮಹಾರಾಷ್ಟ್ರದ ಬಿಜೆಪಿ ಸಚಿವ ರಾಮ್ ಶಿಂಧೆ ಪ್ರತಿಕ್ರಿಯೆ ನೀಡಿದ್ದು, ಕರ್ನಾಟಕದಲ್ಲಿ ಬಿಜೆಪಿಯ ಆಪರೇಷನ್ ಕಮಲ ಯಶಸ್ವಿಯಾಗುತ್ತದೆ ಎಂದು ಹೇಳಿದ್ದಾರೆ. 

ಮೂರನೇ ಸ್ಥಾನದಲ್ಲಿದ್ದ ಜೆಡಿಎಸ್ ಗೆ ಕಾಂಗ್ರೆಸ್ ಬೆಂಬಲ ನೀಡಿದ್ದರ ಬಗ್ಗೆ ಶಾಸಕರಿಗೆ ಕಾಂಗ್ರೆಸ್ ಮೇಲಿನ ನಂಬಿಕೆ ಹೋಗಿದೆ. ಮೈತ್ರಿ ಸರ್ಕಾರದ ಮೇಲಿದ್ದ ನಂಬಿಕೆ ಕುಸಿದಿದೆ. ಆದ್ದರಿಂದ ಆಪರೇಷನ್ ಕಮಲ ಯಶಸ್ವಿಯಾಗಲಿದೆ ಎಂದು ರಾಮ್ ಶಿಂಧೆ ಹೇಳಿದ್ದಾರೆ.
Stay up to date on all the latest ರಾಷ್ಟ್ರೀಯ news
Poll
Parliament

ಸಂಸತ್ತಿನ ಈ ಮುಂಗಾರು ಅಧಿವೇಶನವು ಪ್ರಜಾಪ್ರಭುತ್ವದ ಕಗ್ಗೊಲೆಗೆ ಸಾಕ್ಷಿಯಾಯಿತೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp