ಸರ್ಕಾರದ ಅನುಮತಿ ಇಲ್ಲದೆ ಕನ್ಹಯ ವಿರುದ್ಧ ಚಾರ್ಜ್ ಶೀಟ್ ಬೇಡ: ದೆಹಲಿ ಕೋರ್ಟ್

ದೆಹಲಿ ಸರ್ಕಾರದ ಅನುಮತಿಯಿಲ್ಲದೆ ಮಾಜಿ ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ನಾಯಕ ಕನ್ಹಯ ಕುಮಾರ್ ವಿರುದ್ಧ ಚಾರ್ಜ್ ಶೀಟ್....
ಕನ್ಹಯ ಕುಮಾರ್
ಕನ್ಹಯ ಕುಮಾರ್
ನವದೆಹಲಿ: ದೆಹಲಿ ಸರ್ಕಾರದ ಅನುಮತಿಯಿಲ್ಲದೆ ಮಾಜಿ ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ನಾಯಕ ಕನ್ಹಯ ಕುಮಾರ್ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಬೇಡಿ ಎಂದು ದೆಹಲಿ ನ್ಯಾಯಾಲಯ ದೆಹಲಿ ಪೋಲೀಸರಿಗೆ ಸೂಚಿಸಿದೆ.
ಕನ್ಹಯ ವಿರುದ್ಧ ದೋಷಾರೋಪ ಪಟ್ಟಿ ದಾಖಲಿಸಲು ನೀವು ಕಾನೂನು ಇಲಾಖೆಯ ಅನುಮತಿ ಪಡೆದಿಲ್ಲ. ಕಾನೂನು ಇಲಾಖೆ ಅನುಮತಿ ಇಲ್ಲದೆ ನೀವೇಕೆ ಚಾರ್ಜ್ ಶೀಟ್ ಸಲ್ಲಿಸಿದ್ದೀರಿ ಎಂದು ನ್ಯಾಯಾಲಯ ಪೋಲೀಸರನ್ನು ಪ್ರಶ್ನಿಸಿದೆ.
ಇದಕ್ಕೆ ಉತ್ತರಿಸಿದ ದೆಹಲಿ ಪೋಲೀಸರು "ಇನ್ನು 10 ದಿನಗಳಲ್ಲಿ ಸರ್ಕಾರದಿಂದ ಅನುಮೋದನೆ ದೊರೆಯಲಿದೆ" ಎಂದಿದ್ದಾರೆ.
ಫೆಬ್ರವರಿ 9, 2016ರಂದು ಜೆಎನ್ ಯು ಕ್ಯಾಂಪಸ್ ನಲ್ಲಿ  ನಡೆದ ಸಮಾರಂಭದಲ್ಲಿ ಭಾರತ ವಿರೋಧಿ ಘೋಷಣೆಗಳನ್ನು ಕೂಗಲಾಗಿತ್ತು ಎಂದು ಆರೋಪಿಸಿ ಜೆಎನ್ ಯು ಮಾಜಿ ವಿದ್ಯಾರ್ಥಿಗಳಾದ ಉಮರ್ ಖಾಲಿದ್ ಮತ್ತು ಅನಿರ್ಬಾನ್ ಭಟ್ಟಾಚಾರ್ಯ ಹಾಗೂ ವಿದ್ಯಾರ್ಥಿ ನಾಯಕನಾಗಿದ್ದ ಕನ್ಹಯ ಕುಮಾರ್ ವಿರುದ್ಧ ಜನವರಿ 14ರಂದು ದೆಹಲಿ ಪೋಲೀಸರು 1ನ್ಯಾಯಾಲಯಕ್ಕೆ ,200-ಪುಟಗಳ ಚಾರ್ಜ್ ಶೀಟ್ ಸಲ್ಲಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com