ಮಹಾಘಟಬಂಧನ್' ಕ್ಷಣಿಕ ರಾಜಕೀಯ ಮೈತ್ರಿ: ಪ್ರತಿಪಕ್ಷಗಳ ಒಗ್ಗಟ್ಟಿನ ವಿರುದ್ಧ ಜೇಟ್ಲಿ ವಾಗ್ದಾಳಿ

ಮಹಾಘಟಬಂಧನ್ ಕ್ಷಣಿಕ ರಾಜಕೀಯ ಮೈತ್ರಿಯಾಗಿದೆ ಎಂದು ಪ್ರತಿಪಕ್ಷಗಳ ಒಗ್ಗಟ್ಟಿನ ವಿರುದ್ಧ ವಿತ್ತ ಸಚಿವ ಅರುಣ್ ಜೇಟ್ಲಿ ವಾಗ್ದಾಳಿ ನಡೆಸಿದ್ದಾರೆ.
ಅರುಣ್ ಜೇಟ್ಲಿ
ಅರುಣ್ ಜೇಟ್ಲಿ

ನವದೆಹಲಿ: ಮಹಾಘಟಬಂಧನ್ ಕ್ಷಣಿಕ ರಾಜಕೀಯ ಮೈತ್ರಿಯಾಗಿದೆ ಎಂದು ಪ್ರತಿಪಕ್ಷಗಳ ಒಗ್ಗಟ್ಟಿನ ವಿರುದ್ಧ ವಿತ್ತ ಸಚಿವ ಅರುಣ್ ಜೇಟ್ಲಿ ವಾಗ್ದಾಳಿ ನಡೆಸಿದ್ದಾರೆ.

ಇಂತಹ ಕ್ಷಣಿಕ ರಾಜಕೀಯ ಮೈತ್ರಿಯಿಂದ ಮಹತ್ವಕಾಂಕ್ಷೆಯುಳ್ಳ ಜನರು ಸಾಮೂಹಿಕ ಆತ್ಮಹತ್ಯೆ  ಮಾಡಿಕೊಳ್ಳುವುದಿಲ್ಲ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಪ್ರಯೋಜನಕಾರಿಯಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಪ್ರತಿಪಕ್ಷಗಳ ಮಹಾಘಟಬಂಧನ್  ಅಸಹ್ಯ ಹಾಗೂ ಕಾರ್ಯಸಾಧುವಲ್ಲದದ್ದು ಎಂದು ಅವರು ಹೇಳಿದ್ದಾರೆ.

ಮುಂಬರುವ ಲೋಕಸಭಾಚುನಾವಣೆಯಲ್ಲಿ ಮೋದಿ ವಿರೋಧಿ ಅಜೆಂಡಾವನ್ನು ಅನುಸರಿಸುವುದು ಮತ್ತು  ಮತದಾರರ ಮನ ಒಲಿಸುವುದು  ಪ್ರತಿಪಕ್ಷಗಳ ಕಾರ್ಯಸೂಚಿಯಾಗಿದೆ ಎಂದು ಫೇಸ್ ಬುಕ್ ನಲ್ಲಿ ಅಜೆಂಡಾ ಪಾರ್ 2019, ಮೋದಿ ವರ್ಸಸ್  ಅಜ್ಞಾನಿಗಳು  ಎಂಬ ಅಡಿಬರಹದಲ್ಲಿ ಅರುಣ್ ಜೇಟ್ಲಿ ಬರೆದುಕೊಂಡಿದ್ದಾರೆ.

ಹಲವು ರಾಜಕೀಯ ಪಕ್ಷಗಳ ಚಿಂತನೆಗಳಿಗಿಂತಲೂ ಜನರು ಹೆಚ್ಚಿನ ಬುದ್ದಿವಂತರಾಗಿದ್ದಾರೆ. ಅವರು ಎಂದಿಗೂ ಅಜ್ಞಾನಿಗಳನ್ನು ಆಯ್ಕೆ ಮಾಡುವುದಿಲ್ಲ ಎಂದು ಅರುಣ್ ಜೇಟ್ಲಿ ಹೇಳಿದ್ದಾರೆ.

ಶೇ. 50 ರಷ್ಟು ಮತಗಳೊಂದಿಗೆ ನೇರ ಸ್ಪರ್ಧೆಯೊಂದಿಗೆ ಹೋರಾಟ  ನಡೆಸಲು ಬಿಜೆಪಿ ಸಿದ್ಧತೆ ನಡೆಸಿದೆ. ಅನೇಕ ರಾಜ್ಯಗಳಲ್ಲಿ ತ್ರಿಕೋನ ಹೋರಾಟ ಕಂಡುಬರಲಿದೆ. ಮೋದಿ ಎರಡನೇ ಬಾರಿಯೂ ಪ್ರಧಾನಿಯಾಗುವುದರಿಂದ ಬಿಜೆಪಿಗೆ ಅನುಕೂಲವಾಗಲಿದೆ. ಈ ಚುನಾವಣೆ ಅತಿ ಪ್ರಮುಖವಾಗಿದೆ ಎಂದು ಅರುಣ್ ಜೇಟ್ಲಿ ಹೇಳಿದ್ದಾರೆ.

ನರೇಂದ್ರ ಮೋದಿ ಅವರ ಕಾರ್ಯನಿರ್ವಹಣೆ ಸಂತೃಪ್ತಿಯನ್ನುಂಟುಮಾಡಿದ್ದು, ಅವರ ಪ್ರಸಿದ್ಧತೆಯಿಂದ ಭೀತಿಗೊಂಡು  ಪ್ರತಿಪಕ್ಷಗಳು ಒಗ್ಗಟ್ಟಾಗಿವೆ ಎಂದು ಅರುಣ್ ಜೇಟ್ಲಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com