ಕಾರಾಗೃಹ ನಿಯಮಗಳನ್ನು ಉಲ್ಲಂಘಿಸಿಲ್ಲ- ಶಶಿಕಲಾ ಪರ ವಕೀಲರ ಹೇಳಿಕೆ

ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಿನಲ್ಲಿರುವ ಎಐಎಡಿಎಂಕೆ ಉಚ್ಚಾಟಿತ ನಾಯಕಿ ಶಶಿಕಲಾ ಕಾರಾಗೃಹ ನಿಯಮಗಳನ್ನು ಉಲ್ಲಂಘಿಸಿಲ್ಲ ಎಂದು ಶಶಿಕಲಾ ಪರ ವಕೀಲ ಎ. ಅಶೋಕನ್ ಹೇಳಿದ್ದಾರೆ.
ಶಶಿಕಲಾ
ಶಶಿಕಲಾ

ಬೆಂಗಳೂರು: ಆದಾಯಕ್ಕೂ ಮೀರಿದ ಆಸ್ತಿ ಗಳಿಕೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಿನಲ್ಲಿರುವ  ಎಐಎಡಿಎಂಕೆ ಉಚ್ಚಾಟಿತ ನಾಯಕಿ ಶಶಿಕಲಾ ಅವರಿಗೆ ವಿಶೇಷ  ಸೌಕರ್ಯ ಒದಗಿಸಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಆದರೆ, ಈ ಆರೋಪವನ್ನು ಶಶಿಕಲಾ ಪರ  ವಕೀಲರು ಅಲ್ಲಗಳೆದಿದ್ದಾರೆ. ಕಾರಾಗೃಹ ನಿಯಮಗಳನ್ನು ಉಲ್ಲಂಘಿಸಿಲ್ಲ ಎಂದು ಹೇಳಿದ್ದಾರೆ.

ಯಾವುದೇ ಸಂದರ್ಭದಲ್ಲೂ ಕರ್ನಾಟಕ ಕಾರಾಗೃಹದ ಕೈಪಿಡಿಯಲ್ಲಿರುವ ನಿಯಮಗಳನ್ನು ಉಲ್ಲಂಘಿಸಿಲ್ಲ, ಕಾರಾಗೃಹ ನಿಯಮದಂತೆಯೇ ಶಶಿಕಲಾ ತೊಡುತ್ತಿದ್ದಾರೆ. ಎಲ್ಲಾ ಆರೋಪಗಳು ಸುಳ್ಳು ಎಂದು ವಕೀಲ ಎ. ಅಶೋಕನ್ ತಿಳಿಸಿದ್ದಾರೆ.

 ಶಶಿಕಲಾ ಅವರಿಗೆ  ಜೈಲಿನಲ್ಲಿ ಪ್ರತ್ಯೇಕ ಅಡುಗೆ ಮನೆ ಮತ್ತಿತರ ವಿಶೇಷ ಸವಲತ್ತುಗಳನ್ನು  ಒದಗಿಸಲಾಗುತ್ತಿದೆ ಎಂದು 2017ರಲ್ಲಿ  ಕಾರಾಗೃಹ ಡಿಐಜಿ ಆಗಿದ್ದ ಡಿ ರೂಪಾ  ಮಾಡಿದ್ದ ಆರೋಪಗಳು ಸತ್ಯ ಎಂದು ನಿವೃತ್ತ ಎಐಎಸ್ ಅಧಿಕಾರಿ ವಿನಯ್ ಕುಮಾರ್ 295 ಪುಟಗಳ  ವರದಿ ನೀಡಿದ್ದಾರೆ ಎಂದು ಆರ್ ಟಿಐ ಹೋರಾಟಗಾರ ನರಸಿಂಹ ಮೂರ್ತಿ ಹೇಳಿಕೆ ನೀಡಿದ್ದರು.

ಆರ್ ಟಿಐ ಮೂಲಕ 295 ಪುಟಗಳ ವರದಿ ಪಡೆದಿದ್ದು, ಜೈಲಿನಲ್ಲಿ ಶಶಿಕಲಾಗೆ ವಿಶೇಷ ಸವಲತ್ತು ನೀಡುತ್ತಿರುವುದು ಸತ್ಯವೆಂದು ನರಸಿಂಹ ಮೂರ್ತಿ ನಿನ್ನೆ ತಿಳಿಸಿದ್ದರು. ಇವರಿಗೆ ವರದಿ ನೀಡಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ವಕೀಲ ಅಶೋಕನ್ ಹೇಳಿದ್ದಾರೆ.  

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com