ಪಿಎನ್‌ಬಿ ಬಹುಕೋಟಿ ಹಗರಣ: ಭಾರತೀಯ ಪೌರತ್ವ ಬೇಡವೆಂದ ಮೆಹುಲ್ ಚೋಕ್ಸಿ

ಬಹುಕೋಟಿ ವಂಚನೆ ಪ್ರಕರಣದಿಂದ ದೇಶ ತೊರೆದಿರುವ ವಜ್ರ ವ್ಯಾಪಾರಿ ಮೆಹುಲ್ ಚೋಕ್ಸಿ ತಮ್ಮ ಭಾರತದ ನಾಗರೀಕತ್ವವನ್ನು ತೊರೆದಿದ್ದಾರೆ, ತಮಗೆ ಭಾರತೀಯ ಪೌರತ್ವ ...
ಮೆಹುಲ್ ಚೋಕ್ಸಿ
ಮೆಹುಲ್ ಚೋಕ್ಸಿ
ದೆಹಲಿ: ಬಹುಕೋಟಿ ವಂಚನೆ ಪ್ರಕರಣದಿಂದ ದೇಶ ತೊರೆದಿರುವ  ವಜ್ರ ವ್ಯಾಪಾರಿ ಮೆಹುಲ್ ಚೋಕ್ಸಿ ತಮ್ಮ ಭಾರತದ ನಾಗರೀಕತ್ವವನ್ನು ತೊರೆದಿದ್ದಾರೆ, ತಮಗೆ ಭಾರತೀಯ ಪೌರತ್ವ ಬೇಡ ಎಂದು ತಮ್ಮ ಪಾಸ್ ಪೋರ್ಟ್ ಅನ್ನು  ಆ್ಯಂಟಿಗುವಾಗೆ ಮರಳಿಸಿದ್ದಾರೆ ಎಂದು ಎನ್ ಡಿಟಿವಿ ವರದಿ ಮಾಡಿದೆ.
ಪಂಜಾಬ್‌ ನ್ಯಾಶನಲ್‌ ಬ್ಯಾಂಕ್‌ (ಪಿಎನ್‌ಬಿ) ಗೆ 13,000 ಕೋಟಿ ರೂ. ವಂಚಿಸಿ ವಿದೇಶಕ್ಕೆ ಪರಾರಿಯಾಗಿರುನವ ಚೋಕ್ಸಿ ಭಾರತೀಯ ಪೌರತ್ವಕ್ಕೆ ತಿಲಾಂಜಲಿ ಕೊಟ್ಟಿದ್ದಾರೆ.
ಆಂಟಿಗುವಾದಲ್ಲಿನ ಭಾರತೀಯ ಹೈಕಮಿಷನ್‌ ಗೆ ಚೋಕ್ಸಿ ಅವರು ತನ್ನ ಪಾಸ್‌ ಪೋರ್ಟ್‌ ಒಪ್ಪಿಸಿ ಅದರ ಜತೆಗೆ 177 ಅಮೆರಿಕನ್‌ ಡಾಲರ್‌ ಕೊಟ್ಟಿದ್ದಾರೆ. ಇನ್ನು ಮುಂದೆ ಚೋಕ್ಸಿ ಅವರ ಹೊಸ ವಿಳಾಸ ಜಾಲಿ ಹಾರ್ಬರ್‌, ಮಾರ್ಕ್ಸ್ ಆಂಟಿಗುವಾ ಎಂದಾಗಿರುತ್ತದೆ ಎಂದು ಮೂಲಗಳು ತಿಳಿಸಿವೆ.
ಚೋಕ್ಸಿ ಒಂದು ವರ್ಷದಿಂದ ಆಂಟಿಗುವಾದಲ್ಲೇ ನೆಲೆಸಿದ್ದಾರೆ. ತನ್ನ ಅನಾರೋಗ್ಯದ ಕಾರಣ ಆಂಟಿಗುವಾದಿಂದ ಭಾರತಕ್ಕೆ 41 ತಾಸುಗಳ ಸುದೀರ್ಘ‌ ಪ್ರಯಾಣವನ್ನು ಕೈಗೊಂಡು ಭಾರತದಲ್ಲಿ ವಿಚಾರಣೆ ಎದುರಿಸಲು ಬರಲಾರೆ ಎಂದು ಚೋಕ್ಸಿ ಅವರು ಕಳೆದ ವರ್ಷ ಡಿ.25ರಂದು ಕೋರ್ಟಿಗೆ ತಿಳಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com