'ಇವಿಎಂ ಹ್ಯಾಕಿಂಗ್ ಸಾಧ್ಯ' ಎಂದ ಸೈಬರ್ ತಜ್ಞ ಸೈಯದ್ ವಿರುದ್ಧ ಇಸಿ ದೂರು

2014ರ ಲೋಕಸಭೆ ಚುನಾವಣೆಯಲ್ಲಿ ವಿದ್ಯುನ್ಮಾನ ಮತಯಂತ್ರ(ಇವಿಎಂ) ದುರ್ಬಳಕೆಯಾಗಿತ್ತು ಮತ್ತು ಇವಿಎಂ ಹ್ಯಾಕ್‌ ಮಾಡಬಹುದು ಎಂದು ಹೇಳಿದ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: 2014ರ ಲೋಕಸಭೆ ಚುನಾವಣೆಯಲ್ಲಿ ವಿದ್ಯುನ್ಮಾನ ಮತಯಂತ್ರ(ಇವಿಎಂ) ದುರ್ಬಳಕೆಯಾಗಿತ್ತು ಮತ್ತು ಇವಿಎಂ ಹ್ಯಾಕ್‌ ಮಾಡಬಹುದು ಎಂದು ಹೇಳಿದ ಸ್ವಯಂ ಘೋಷಿತ ಸೈಬರ್ ತಜ್ಞ ಸೈಯದ್ ಸೂಜಾ ವಿರುದ್ಧ ಚುನಾವಣಾ ಆಯೋಗ ಪ್ರಕರಣ ದಾಖಲು ಮಾಡಿದೆ.
ಸೈಯದ್​ ಸೂಜಾ ವಿರುದ್ಧ ಎಫ್ ಐಆರ್ ದಾಖಲಿಸುವಂತೆ ದೆಹಲಿ ಪೊಲೀಸರಿಗೆ ಪತ್ರ ಬರೆದಿರುವ ಚುನಾವಣಾ ಆಯೋಗ, ಆತಂಕ ಸೃಷ್ಟಿಸುವ ವದಂತಿಗಳನ್ನು ಹರಡಲು ಯತ್ನಿಸುವ ಮೂಲಕ ಐಪಿಸಿ ಸೆಕ್ಷನ್ 505(1) ಅನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿದೆ.
ಸೈಯದ್ ಸೂಜಾ ನಿನ್ನೆ 'ಭಾರತದಲ್ಲಿ ಬಳಕೆ ಮಾಡುವ ಇವಿಎಂಗಳನ್ನು ಸುಲಭವಾಗಿ ಹ್ಯಾಕ್​ ಮಾಡಬಹುದು' ಎಂದು ಹೇಳಿದ್ದು, ಇದೊಂದು ದುರುದ್ದೇಶ ಪೂರಿತವಾದ ಆರೋಪವಾಗಿದ್ದು, ಈ ಬಗ್ಗೆ ತನಿಖೆ ನಡೆಸುವಂತೆ ಇಸಿ ದೆಹಲಿ ಪೊಲೀಸರಿಗೆ ಕೇಳಿಕೊಂಡಿದೆ.
 ಎಂದಿದ್ದ ಚುನಾವಣಾ ಆಯೋಗ, ಈ ಆರೋಪ ಮಾಡಿದವರ ವಿರುದ್ಧ ಕಾನೂನಾತ್ಮಕ ಕ್ರಮ ಕೈಗೊಳ್ಳುವ ಬಗ್ಗೆ ಚಿಂತನೆ ನಡೆಸಿತ್ತು. ಅಂತೆಯೇ ಮಂಗಳವಾರ ಸೈಯ್​ ಸೂಜಾ ವಿರುದ್ಧ ಕ್ರಿಮಿನಲ್​ ದೂರು ದಾಖಲಿಸಿದೆ.
ಇವಿಎಂ ಹ್ಯಾಕ್​ ಮಾಡಬಹುದು ಎನ್ನುವ ಆರೋಪವನ್ನು ಚುನಾವಣಾ ಆಯೋಗದ ಮುಖ್ಯ ತಾಂತ್ರಿಕ ತಜ್ಞ ರಜತ್​ ಮೂನಾ​ ಸಂಪೂರ್ಣವಾಗಿ ತಳ್ಳಿಹಾಕಿದ್ದರು. ಇವಿಎಂನಲ್ಲಿರುವ ಮಾಹಿತಿಯನ್ನು ಬೇರೆ ಕಡೆಗೆ ವರ್ಗಾವಣೆ ಮಾಡಲು ಸಾಧ್ಯವಿಲ್ಲ. ಅಲ್ಲದೆ, ಈ ಯಂತ್ರ ಹೊರಗಿನ ಯಾವುದೇ ಮಾಹಿತಿಯನ್ನು ಸ್ವೀಕರಿಸುವುದಿಲ್ಲ. ಭಾರತ್​ ಎಲೆಕ್ಟ್ರಾನಿಕ್ಸ್​ ಮಷಿನ್​ ಇವಿಎಂಗಳನ್ನು ತಯಾರಿಸುತ್ತವೆ. ಇಲ್ಲಿ ಹ್ಯಾಕ್​​ ಮಾಡುವ ಮಾತೇ ಇಲ್ಲ ಎಂದು ಹೇಳಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com