ಮದ್ಯಪ್ರದೇಶ: 12 ದಿನದ ಹಸುಗೂಸು ಸೇರಿ ಒಂದೇ ಕುಟುಂಬದ ನಾಲ್ವರು ನಿಗೂಢ ಸಾವು!

ಮದ್ಯ ವಯಸ್ಸಿನ ಮಹಿಳೆ, ಆಕೆಯ 12 ದಿನಗಳ ಮೊಮ್ಮಗಳು ಸೇರಿ ಒಂದೇ ಕುಟುಂಬದ ನಾಲ್ವರು ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ಮದ್ಯಪ್ರದೇಶದ ರೈಸನ್ ಜಿಲ್ಲೆ ಮಂಡ್ದೀಪ್ ಪಟ್ಟಣದಲ್ಲಿ ನಡೆದಿದೆ.
ಮದ್ಯಪ್ರದೇಶ: 12 ದಿನದ ಹಸುಗೂಸು ಸೇರಿ ಒಂದೇ ಕುಟುಂಬದ ನಾಲ್ವರು ನಿಗೂಢ ಸಾವು!
ಮದ್ಯಪ್ರದೇಶ: 12 ದಿನದ ಹಸುಗೂಸು ಸೇರಿ ಒಂದೇ ಕುಟುಂಬದ ನಾಲ್ವರು ನಿಗೂಢ ಸಾವು!
ಭೋಪಾಲ್: ಮದ್ಯ ವಯಸ್ಸಿನ ಮಹಿಳೆ, ಆಕೆಯ 12 ದಿನಗಳ ಮೊಮ್ಮಗಳು ಸೇರಿ ಒಂದೇ ಕುಟುಂಬದ ನಾಲ್ವರು ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ಮದ್ಯಪ್ರದೇಶದ ರೈಸನ್ ಜಿಲ್ಲೆ ಮಂಡಿದೀಪ್ ಪಟ್ಟಣದಲ್ಲಿ ನಡೆದಿದೆ.
ಮಹಿಳೆ, ಆಕೆಯ 11 ವರ್ಷದ ಮಗ, 20 ವರ್ಷದ ಮಗಳು ಹಾಗೂ 12 ದಿನದ ಹಸುಳೆ ಮಹಿಳೆಯ ಅಳಿಯನ ಮನೆಯಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದಾರೆ. ಇದೇ ವೇಳೆ ಅಳಿಯ ಸಹ ಅದೇ ಮನೆಯಲ್ಲಿ ಸುಪ್ತಾವಸ್ಥೆಯಲ್ಲಿರುವುದು ಪತ್ತೆಯಾಗಿದ್ದು ಒಳಗಿನಿಂಡ ಲಾಕ್ ಮಾಡಿಕೊಳ್ಳಲಾದ ಮನೆಯಿಂದ ಆತನನ್ನು ಒಯ್ದು  ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಂಗಳವಾರ ಸಂಜೆ ಭೋಪಾಲ್ ನಿಂದ ಸುಮಾರು 25 ಕಿಮೀ ದೂರದಲ್ಲಿರುವ ಪಟ್ಟಣದಲ್ಲಿ ಈ ಘಟನೆ ಬೆಳಕಿಗೆ ಬಂದಿದೆ.ಬೆಳಗಿನಿಂದ ಮನೆಯ ಯಜಮಾನ ಸಂಜು ಭುರಿಯಾ ಸೇರಿ ಯಾರೊಬ್ಬರೂ ಮನೆಯಿಂದ ಹೊರಬರದ್ದನು ಗಮನಿಸಿದ ನೆರೆಮನೆಯ ನಿತಿನ್ ಒಳಗಿನಿಂದ ಲಾಕ್ ಮಾಡಲಾದ ಬಾಗಿಲನ್ನು ಪದೇ ಪದೇ ತಟ್ಟಿದ್ದಾನೆ. ಆದರೆ ಅತ್ತಕಡೆಯಿಂದ ಯಾವ ಪ್ರತಿಕ್ರಿಯೆ ಬಂದಿಲ್ಲ.
ಇದಾಗಿ ಆತ ಪೋಲೀಸರಿಗೆ ಮಾಹಿತಿ ಒದಗಿಸಿದ್ದು ಪೋಲೀಸರು ಮನೆ ಬಾಗಿಲು ಒಡೆದು ನೋಡಿದಾಗ ನಾಲ್ವರ ಶವ ಪತ್ತೆಯಾಗಿದೆ.ಮೃತರನ್ನು ದೀಪಲತಾ ೯40) ಆಕೆಯ ಮಗ ಆಕಾಶ್ (11), ಮಗಳು ಪೂರ್ಣಿಮಾ (20) ಮತ್ತು ಪೂರ್ಣಿಮಾಳ 12 ದಿನದ ಮಗು ಎಂದು ಗುರ್ತಿಸಲಾಗಿದೆ. ನಾಲ್ವರು ಎರಡು ಬೇರೆ ಬೇರೆ ಬೆಡ್ ಮೇಲೆ ಶವವಾಗಿದ್ದಾರೆ. ಇದೇ ವೇಳೆ ಪೂರ್ಣಿಮಾಳ ಪತಿ, ಮನೆ ಮಾಲೀಕನಾಗಿದ್ದ ಸಂಜು ಸಹ ಸಾವಿಗೆ ಸಮೀಪವಾಗಿದ್ದ. ಆಗ ಅವನನ್ನ್ಯು ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದು ಅವನ ಸ್ಥಿತಿ ಸಹ ಚಿಂತಾಜನಕವಾಗಿದೆ.
"ಚಳಿಗಾಲದಲ್ಲಿ ಬೆಚ್ಚಗಾಗುವಂತಹ ಕಲ್ಲಿದ್ದಲು-ಚಾಲಿತ ಒಲೆಯನ್ನು ಹೊತ್ತಿಸಿ ಮನೆಯನ್ನು ಪೂರ್ಣ ಬಂದ್ ಮಾಡಲಾಗಿದೆ. ನಾವು ಹೋದಾಗಲೂ ಆ ಹೊಗೆಯ ವಾಸನೆ ಬರುತ್ತಿದ್ದು ಇದೇ ಕಾರಣ ಉಸಿರುಗಟ್ಟಿ ನಾಲ್ವರು ಸಾವಿಗೀಡಾಗಿದ್ದಾರೆ ಎಂದು ಶಂಕೆ ವ್ಯಕ್ತವಾಗಿದೆ. ಅಲ್ಲದೆ, ಆಸ್ಪತ್ರೆಯಲ್ಲಿ ಸಂಜು ಭುರಿಯಾ ಅವರ ಪ್ರಾಥಮಿಕ ವೈದ್ಯಕೀಯ ಪರೀಕ್ಷೆ ನಡೆದಿದೆ. ಅಲ್ಲಿ ಸಹ ಯಾವುದೇ ರೀತಿಯ ವಿಷದ  ಕಾರಣ ಸಾವಿಗೀಡಾದ ಬಗ್ಗೆ ತಿಳಿದಿಲ್ಲ. ಕೇವಲ ಉಸಿರಾಟದ  ಸಮಸ್ಯೆಯಿಂದಷ್ತೇ ಈ ಸಾವು ಸಂಭವಿಸಿದೆ ಎನ್ನುವುದು ಸ್ಪಷ್ಟವಿದೆ. ಆದರೆ ಶವಗಳ ಮರಣೋತ್ತರ ಪರೀಕ್ಷೆ ಬಳಿಕ ಇನ್ನಷ್ಟು ಆಧಾರಗಳು ಲಭ್ಯವಾಗಲಿದ್ದು ಸಾವಿಗೆ ನಿಖರ ಕಾರಣ ಪತ್ತೆಯಾಗಲಿದೆ" ರೈಸನ್ ಜಿಲ್ಲಾ ಎಸ್.ಪಿ ಹೇಳಿದ್ದಾರೆ.
ಖಾಸಗಿ ಕಂಪನಿಯೊಂದರ ಆಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದ ಸಂಜು ಭುರಿಯಾ ಪತ್ನಿ ಪೂರ್ಣಿಮಾ ಜನವರಿ 10 ರಂದು ಭೋಪಾಲ್ ನ ಸುಲ್ತಾನಿಯಾ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು.ಒಂದು ತಿಂಗಳಿನಿಂದ ಪೂರ್ಣಿಮಾ ತಾಯಿ ದೀಪಲತಾ ಹಾಗೂ ತಮ್ಮ ಆಕಾಶ್ ಸಹ ಗರ್ಭಿಣಿ ಪೂರ್ಣಿಮಾ ಜತೆಗೇ ವಾಸವಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com