ಎರಡಕ್ಕಿಂತ ಹೆಚ್ಚು ಮಕ್ಕಳಿದ್ದವರಿಗೆ ಮತದಾನದ ಹಕ್ಕು, ಸರ್ಕಾರಿ ನೌಕರಿ ನಿಷೇಧಿಸಿ: ಬಾಬಾ ರಾಮ್ ದೇವ್

ಎರಡಕ್ಕೂ ಹೆಚ್ಚು ಮಕ್ಕಳನ್ನು ಹೊಂದಿದವರಿಗೆ ಮತದಾನದ ಹಕ್ಕು ನೀಡಬಾರದು, ಯಾವುದೇ ಸರ್ಕಾರಿ ಯೋಜನೆ ಸೌಲಭ್ಯ ಕಲ್ಪಿಸಬಾರದು ಎಂದು ಪತಂಜಲಿ ಸಂಸ್ಥೆಯ.....
ಬಾಬಾ ರಾಮ್ ದೇವ್
ಬಾಬಾ ರಾಮ್ ದೇವ್
ನವದೆಹಲಿ: ಎರಡಕ್ಕೂ ಹೆಚ್ಚು ಮಕ್ಕಳನ್ನು ಹೊಂದಿದವರಿಗೆ ಮತದಾನದ ಹಕ್ಕು ನೀಡಬಾರದು, ಯಾವುದೇ ಸರ್ಕಾರಿ ಯೋಜನೆ ಸೌಲಭ್ಯ ಕಲ್ಪಿಸಬಾರದು ಎಂದು ಪತಂಜಲಿ ಸಂಸ್ಥೆಯ ಸಂಸ್ಥಾಪಕ ಯೋಗಗುರು ಬಾಬಾ ರಾಮ್ ದೇವ್ ಹೇಳಿದ್ದಾರೆ.
ಎರಡು ಮಕ್ಕಳಿಗಿಂತ ಹೆಚ್ಚಿನ ಮಕ್ಕಳನ್ನು ಹೊಂದಿದ್ದವರಿಗೆ ಚುನಾವಣೆಯಲ್ಲಿ ಸ್ಪರ್ಧಿಸುವುದಕ್ಕೆ ನಿಷೇಧ ಹೇರಬೇಕು.ಸರ್ಕಾರಿ ಶಾಲೆ, ಆಸ್ಪತ್ರೆಗಳ ಬಳಕೆ ಮಾಡದಂತೆ ನಿರ್ಬಂಧಿಸಬೇಕು.ಸರ್ಕಾರಿ ಉದ್ಯೋಗ ಸಹ ದೊರಕಬಾರದ್ದು ಹೀಗೇನಾದರೂ ಮಾಡಿದರೆ ಜನಸಂಖ್ಯೆ ತಾನೇ ತಾನಾಗಿ ನಿಯಂತ್ರಣಕ್ಕೆ ಬರಲಿದೆ. ಎಂದು ಅವರು ಹೇಳಿದ್ದರೆ.
ಅಲಿಘಡದಲ್ಲಿ ಪತಂಜಲಿ ಗಾರ್ಮೆಂಟ್ ಉದ್ಘಾಟಿಸಿ ಅವರು ಮಾತನಾಡಿದ್ದಾರೆ.
ಇನ್ನು ರಾಮ್ ದೇವ್ ಇಂತಹಾ ಹೇಳಿಕೆ ನೀಡುವುದೇನೂ ಇದೇ ಮೊದಲಲ್ಲ.ಕಳೆದ ವರ್ಷ ನವೆಂಬರ್ ನಲ್ಲಿ "ನನ್ನಂತೆ ವಿವಾಹವಾಗದವರಿಗೆ ಈ ದೇಶದಲ್ಲಿ ವಿಶೇಷ ಗೌರವ ಸಲ್ಲುವಂತಾಗಬೇಕು.ಇಬ್ಬರು ಮಕ್ಕಳಿಗಿಂತ ಹೆಚ್ಚು ಮಕ್ಕಳನ್ನು ಹೊಂದಿದವರಿಗೆ ಮತದಾನದ ಹಕ್ಕು ನಿರಾಕರಿಸಬೇಕು ಎಂದು ಹೇಳಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com