2ನೇ ತರಗತಿ ವಿದ್ಯಾರ್ಥಿನಿ ಮೇಲೆ ಶಾಲೆಯ 42 ವರ್ಷದ ಹೆಡ್ ಮಾಸ್ಟರ್ ನಿಂದ ಅತ್ಯಾಚಾರ

42 ವರ್ಷದ ಹೆಡ್ ಮಾಸ್ಟರ್ ಒಬ್ಬ 2ನೇ ತರಗತಿಯ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ನಡೆಸಿರುವ ಘಟನೆ ಹೈದರಬಾದ್ ನ ಶಾಲೆಯಲ್ಲಿ ನಡೆದಿದೆ. ..
ಹೈದರಾಬಾದ್: 42 ವರ್ಷದ ಹೆಡ್ ಮಾಸ್ಟರ್ ಒಬ್ಬ 2ನೇ ತರಗತಿಯ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ನಡೆಸಿರುವ ಘಟನೆ ಹೈದರಬಾದ್ ನ ಶಾಲೆಯಲ್ಲಿ ನಡೆದಿದೆ. 
ಹೈದರಾಬಾದ್ ನಿಂದ 295 ಕಿಮೀ ದೂರದಲ್ಲಿರುವ ಕೃಷ್ಣಾ ಜಿಲ್ಲೆಯಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಈ ಘಟನೆ ನಡೆದಿದೆ, ಖಾಲಿ ಕೊಠಡಿಗೆ 8 ವರ್ಷದ ವಿದ್ಯಾರ್ಥಿನಿ ಕರೆದುಕೊಂಡು ಹೋಗಿ ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದಾನೆ.
ಗಾಯ ಹಾಗೂ ರಕ್ತಸ್ರಾವದೊಂದಿಗೆ ಬಾಲಕಿ ಅಳುತ್ತಾ ಮನೆಗೆ ತೆರಳಿದಳು, ತನಗೆ ಆಗುತ್ತಿರುವ ನೋವು ಹಾಗೂ ನಡೆದ ಎಲ್ಲಾ ವಿಷಯವನ್ನು ಬಾಲಕಿ ತಾಯಿ ಬಳಿ ಹೇಳಿದ್ದಾಳೆ, ಕೂಡಲೇ ತಾಯಿ ಆಕೆಯನ್ನು ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದಾರೆ. ಪರೀಕ್ಷಿಸಿದ ವೈದ್ಯರು ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದಾಗಿ ಹೇಳಿದ್ದಾರೆ,
ರಕ್ತಸ್ರಾವ ತಪ್ಪಿಸಲು ಬಾಲಕಿಗೆ ನಾಲ್ಕು ಹೊಲಿಗೆ ಹಾಕಲಾಗಿದೆ, ಮಗುವಿನ ಭವಿಷ್ಯಕ್ಕೆ ಹೆದರಿದ ಪೋಷಕರು ದೂರು ನೀಡಲು ಹಿಂಜರಿದಿದ್ದಾರೆ, ಆದರೆ ಈ ವಿಷಯ ತಿಳಿದ ಸಾಮಾಜಿಕ ಕಾರ್ಯಕರ್ತರು ಬಾಲಕಿಯ ಪೋಷಕರ ಮನವೊಲಿಸಿ ದೂರು ದಾಖಲಿಸಿದ್ದಾರೆ, 
ಹೆಡ್ ಮಾಸ್ಟರ್ ನನ್ನು ಶಾಲೆಯಿಂದ ಅಮಾನತುಗೊಳಿಸಲಾಗಿದ್ದು ಇಲಾಖಾ ತನಿಖೆಗೆ ಆದೇಶಿಸಲಾಗಿದ್ದು ಆತನನ್ನು ಬಂಧಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com