ಗೋವಾ ಬೀಚ್ ನಲ್ಲಿ ಅಡುಗೆ ಮಾಡಿ, ಕುಡಿದು, ತಿಂದು ಮಜಾ ಮಾಡಿದ್ರೆ 2 ರಿಂದ 10 ಸಾವಿರ ರೂ. ದಂಡ!

ಗೋವಾದ ಕಡಲ ತೀರಗಳು ಹಾಗೂ ಪ್ರವಾಸಿ ತಾಣಗಳಲ್ಲಿ ಇನ್ನು ಮುಂದೆ ಮದ್ಯಪಾನ , ಅಡುಗೆ ಮಾಡುವುದು ಮಾಡಿದರೆ 2,000 ದಿಂದ ರೂ 10 ಸಾವಿರದವರೆಗೆ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಪಣಜಿ: ಗೋವಾದ ಕಡಲ ತೀರಗಳು ಹಾಗೂ ಪ್ರವಾಸಿ ತಾಣಗಳಲ್ಲಿ ಇನ್ನು ಮುಂದೆ ಮದ್ಯಪಾನ , ಅಡುಗೆ ಮಾಡುವುದು ಮಾಡಿದರೆ 2,000 ದಿಂದ ರೂ 10 ಸಾವಿರದವರೆಗೆ ದಂಡ ವಿಧಿಸಲಾಗುತ್ತದೆ. ಬೀಚ್‌ಗಳಲ್ಲಿ ಅಡುಗೆ ಮಾಡುವುದನ್ನೂ ನಿಷೇಧಿಸಲಾಗಿದೆ
ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಅಥವಾ ಅಡುಗೆ ಮಾಡಿದವರಿಗೆ 2,000 ರೂ ದಂಡ ವಿಧಿಸುವ ಪ್ರಸ್ತಾವಕ್ಕೆ ಗೋವಾ ಸಚಿವ ಸಂಪುಟ ಅನುಮೋದನೆ ನೀಡಿದೆ. ದಂಡ ಕಟ್ಟಲು ವಿಫಲವಾದರೆ 3 ತಿಂಗಳ ಜೈಲು ಶಿಕ್ಷೆಯನ್ನೂ ಅನುಭವಿಸಬೇಕಾಗುತ್ತದೆ.
ವ್ಯಾಪಾರಿ ತೆರಿಗೆ ಕಾಯ್ದೆ ತಿದ್ದುಪಡಿಯಲ್ಲಿ ಈ ಪ್ರಸ್ತಾವಗಳು ಸೇರಿವೆ. ಪರಿಸರವಾದಿಗಳ ಒತ್ತಡಕ್ಕೆ ಮಣಿದಿರುವ ರಾಜ್ಯ ಸರಕಾರ ಇಂತಹ ಕಠಿಣ ಕ್ರಮಕ್ಕೆ ಮುಂದಾಗಿರುವುದಾಗಿ ಪ್ರವಾಸೋದ್ಯಮ ಸಚಿವ ಮನೋಹರ ಅಜಗಾಂವಕರ  ಮಾಹಿತಿ ನೀಡಿದ್ದಾರೆ. 
ದೊಡ್ಡ ಗುಂಪುಗಳಲ್ಲಿ ಬರುವ ಪ್ರವಾಸಿಗರು ಕಾನೂನು ಉಲ್ಲಂಘಿಸಿದರೆ 10,000 ರೂ. ದಂಡ ವಿಧಿಸಲಾಗುವುದು. ಅದೇ ತಪ್ಪಿನ ಪುನರಾವರ್ತನೆ ಮಾಡಿದರೆ ಜೈಲು ಶಿಕ್ಷೆ ವಿಧಿಸಲೂ ಅವಕಾಶವಿದೆ. ಕಡಲ ತೀರ ಹಾಗೂ ಪ್ರವಾಸಿ ತಾಣಗಳಲ್ಲಿ ಮದ್ಯಪಾನ ಮಾಡುವುದು, ಬಾಟಲಿ ಒಯ್ಯುವುದು ಹಾಗೂ ಬೀಚ್‌ಗಳು ಸೇರಿದಂತೆ ತೆರೆದ ಸ್ಥಳದಲ್ಲಿ ಅಡುಗೆ ಮಾಡುವುದನ್ನೂ ನಿಷೇಧಿಸಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com