ದೇಶ ಉದ್ದೇಶಿಸಿ ರಾಷ್ಟ್ರಪತಿ ಭಾಷಣ: ನಿರ್ದಿಷ್ಟ ಗುರಿಯೊಂದಿಗೆ ಹಕ್ಕು ಚಲಾಯಿಸೋಣ - ಕೋವಿಂದ್ ಕರೆ

17ನೇ ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದು, ನಿರ್ದಿಷ್ಟ ಗುರಿಯೊಂದಿಗೆ ನಮ್ಮ ಹಕ್ಕು ಚಲಾಯಿಸೋಣ. ನಮ್ಮ ನಿರ್ಧಾರ ದೇಶದ ದಿಕ್ಕನ್ನೇ ಬದಲಾಯಿಸುತ್ತದೆ ಎಂದು....
ರಾಮನಾಥ್ ಕೋವಿಂದ್
ರಾಮನಾಥ್ ಕೋವಿಂದ್
ನವದೆಹಲಿ: 17ನೇ ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದು, ನಿರ್ದಿಷ್ಟ ಗುರಿಯೊಂದಿಗೆ ನಮ್ಮ ಹಕ್ಕು ಚಲಾಯಿಸೋಣ. ನಮ್ಮ ನಿರ್ಧಾರ ದೇಶದ ದಿಕ್ಕನ್ನೇ ಬದಲಾಯಿಸುತ್ತದೆ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಶುಕ್ರವಾರ ದೇಶದ ಜನತೆಗೆ ಕರೆ ನೀಡಿದ್ದಾರೆ.
70 ನೇ ಗಣರಾಜ್ಯೋತ್ಸವದ ಮುನ್ನಾ ದಿನವಾದ ಇಂದು ದೇಶವನ್ನು ಉದ್ದೇಶಿಸಿ ಮಾತನಾಡಿದ ರಾಷ್ಟ್ರಪತಿಗಳು, ದೇಶದ ಜನತೆಗೆ 70ನೇ ಗಣರಾಜ್ಯೋತ್ಸವದ ಶುಭಾಶಯಗಳು. ಈ ಬಾರಿಯ ಗಣರಾಜ್ಯೋತ್ಸವ ವಿಶೇಷವಾಗಿದೆ. ಈ ಮಹಾತ್ಮ ಗಾಂಧಿಜೀ 150ನೇ ಜನ್ಮ ದಿನದ ನಂತರ ಬಂದಿದೆ. ಗಾಂಧಿಜೀಯವರ ಸಿದ್ಧಾಂತವನ್ನು ಇಡೀ ವಿಶ್ವವೇ ಸ್ಮರಿಸುತ್ತಿದೆ ಎಂದರು.
ಮತ್ತೆ ಲೋಕಸಭೆ ಚುನಾವಣೆ ಬರುತ್ತಿದೆ. ನಾವು ನಿರ್ದಿಷ್ಟ ಗುರಿಯೊಂದಿಗೆ ಹಕ್ಕು ಚಲಾಯಿಸಬೇಕು. ನಾವು ಇಂದು ತೆಗೆದುಕೊಳ್ಳುವ ನಿರ್ಧಾರ ನಾಳಿನ ಹೊಸ ಭಾರತಕ್ಕೆ ನಾಂದಿಯಾಗುತ್ತದೆ ಎಂದರು. 
ಬಡತನ ನಿರ್ಮೂಲನೆಯತ್ತ ಭಾರತ ದಿಟ್ಟ ಹೆಜ್ಜೆ ಇಡುತ್ತಿದೆ. ಆದರೂ ನಾವು ಇನ್ನು ಸಾಗಬೇಕಾದ ಹಾದಿ ಬಹಳಷ್ಟಿದೆ. ನಮ್ಮಲ್ಲಿ ಹೊಸ ಮಾನದಂಡಗಳನ್ನು ರೂಪಿಸಿಕೊಳ್ಳಬೇಕಾಗಿದೆ. ಸಮಾಜದ ಎಲ್ಲಾ ವರ್ಗದ ಜನರು ಪ್ರಗತಿ ಹೊಂದಿದ ರಾಷ್ಟ್ರವನ್ನಾಗಿ ಭಾರತವನ್ನು ನಿರ್ಮಾಣ ಮಾಡಬೇಕಾಗಿದೆ ಎಂದು ಸಂದೇಶ ನೀಡಿದ್ದಾರೆ. 
ಕಲ್ಯಾಣ ಎನ್ನುವುದು ನಮ್ಮ ಸಂಸ್ಕೃತಿ ಮತ್ತು ಸಂಪ್ರದಾಯದ ಕಂಬವಾಗಿದೆ. ಧರ್ಮ ,ಜಾತಿ ಮತ್ತು ಲಿಂಗ ಬೇಧವಿಲ್ಲದೆ ದೇಶದ ಸಂಪನ್ಮೂಲಗಳ ಮೇಲೆ ಸಮಾನ ಹಕ್ಕುಗಳಿವೆ. ಬಹು ಸಂಸ್ಕೃತಿ ಭಾರತದ ಶಕ್ತಿ ಎಂದರು.
ಮಹಿಳಾ ಸಬಲೀಕರಣದ ಮೂಲಕ ಸಮಾಜ ಬದಲಾವಣೆ ಕಾಣುತ್ತಿದೆ. ಕ್ರೀಡೆ ಮತ್ತು ಇತರ ಕ್ಷೇತ್ರಗಳನ್ನು ಹೊರತು ಪಡಿಸಿ ಸೇನಾ ವಲಯದಲ್ಲೂ ಹೊಸ ಎತ್ತರಕ್ಕೆ ನಮ್ಮ ಹೆಣ್ಣು ಮಕ್ಕಳು ಏರಿದ್ದಾರೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com