ಗಣರಾಜ್ಯೋತ್ಸವಕ್ಕೆ ಬಹಿಷ್ಕಾರ: ಖಾಲಿ ಮೈದಾನ ಉದ್ದೇಶಿಸಿ ಮಾತನಾಡಿದ ಮಿಜೋರಾಂ ರಾಜ್ಯಪಾಲ

ಪೌರತ್ವ(ತಿದ್ದುಪಡಿ) ಮಸೂದೆ ವಿರೋಧಿಸಿ ರಾಜ್ಯಾದ್ಯಂತ 70ನೇ ಗಣರಾಜ್ಯೋತ್ಸವ ಬಹಿಷ್ಕರಿಸಲಾಗಿದ್ದು, ಬಹಿಷ್ಕಾರದ ನಡುವೆಯೇ....
ಮಿಜೋರಾಂ ರಾಜ್ಯಪಾಲರು
ಮಿಜೋರಾಂ ರಾಜ್ಯಪಾಲರು
ಐಜ್ವಾಲ: ಪೌರತ್ವ(ತಿದ್ದುಪಡಿ) ಮಸೂದೆ ವಿರೋಧಿಸಿ ರಾಜ್ಯಾದ್ಯಂತ 70ನೇ ಗಣರಾಜ್ಯೋತ್ಸವ ಬಹಿಷ್ಕರಿಸಲಾಗಿದ್ದು, ಬಹಿಷ್ಕಾರದ ನಡುವೆಯೇ ಮಿಜೋರಾಂ ರಾಜ್ಯಪಾಲ ಕಮ್ಮನಮ್ ರಾಜಶೇಖರನ್ ಅವರು ಬಹುತೇಕ ಖಾಲಿ ಮೈದಾನವನ್ನು ಉದ್ದೇಶಿಸಿ ಮಾತನಾಡಿದರು.
ಗಣರಾಜ್ಯೋತ್ಸವ ಸಂಭ್ರಮದಲ್ಲಿ ಯಾವುದೇ ಸಾರ್ವಜನಿಕರು ಭಾಗವಹಿಸಿರಲಿಲ್ಲ. ಕೇವಲ ಸಚಿವರು, ಶಾಸಕರು ಮತ್ತು ಅಧಿಕಾರಿಗಳು ಮಾತ್ರ ಭಾಗವಹಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಮಿಜೋರಾಂನ ಇತರೆ ಜಿಲ್ಲೆಗಳಲ್ಲೂ ಸಾರ್ವಜನಿಕರ ಅನುಪಸ್ಥಿತಿಯಲ್ಲೇ ಜಿಲ್ಲಾಧಿಕಾರಿಗಳು ಧ್ವಜಾರೋಹಣ ಮಾಡಿದ್ದಾರೆ. 70ನೇ ಗಣರಾಜ್ಯೋತ್ಸವವನ್ನು ರಾಜ್ಯಾದ್ಯಂತ ಶಾಂತಿಯುತವಾಗಿ ಆಚರಿಸಲಾಗಿದೆ. ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಪೌರತ್ವ ಮಸೂದೆ ವಿರೋಧಿಸಿ ಮಿಜೋರಾಂನ ಹಲವು ಸಂಘಟನೆಗಳು ಹಾಗೂ ವಿದ್ಯಾರ್ಥಿ ಸಂಘಟನೆಗಳು ಗಣರಾಜ್ಯೋತ್ಸವ ದಿನಾಚರಣೆ ಬಹಿಷ್ಕಾರಕ್ಕೆ ಕರೆ ನೀಡಿದ್ದವು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com