ಜ್ಞಾನಪೀಠ ಪುರಷ್ಕೃತ ಹಿಂದಿ ಲೇಖಕಿ ಕೃಷ್ಣಾ ಸೊಬ್ತಿ ನಿಧನ

ಖ್ಯಾತ ಹಿಂದಿ ಸಾಹಿತಿ ಕೃಷ್ಣಾ ಸೊಬ್ತಿ ನಿಧನರಾಗಿದ್ದಾರೆ ಎಂದು ಅವರು ಕುಟುಂಬ ಮೂಲಗಳಿಂದ ತಿಳಿದುಬಂದಿದೆ. ಅವರಿಗೆ 93 ವರ್ಷ ವಯಸ್ಸಾಗಿತ್ತು.
ಕೃಷ್ಣಾ ಸೊಬ್ತಿ
ಕೃಷ್ಣಾ ಸೊಬ್ತಿ

ನವದೆಹಲಿ:  ಖ್ಯಾತ ಹಿಂದಿ ಸಾಹಿತಿ ಕೃಷ್ಣಾ ಸೊಬ್ತಿ ನಿಧನರಾಗಿದ್ದಾರೆ ಎಂದು ಅವರು ಕುಟುಂಬ ಮೂಲಗಳಿಂದ ತಿಳಿದುಬಂದಿದೆ. ಅವರಿಗೆ 93 ವರ್ಷ ವಯಸ್ಸಾಗಿತ್ತು.

ಅನಾರೋಗ್ಯದಿಂದಾಗಿ ಕಳೆದ ಎರಡು ತಿಂಗಳಿನಿಂದ ದೆಹಲಿಯ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದ   ಕೃಷ್ಣಾ ಸೊಬ್ತಿ ಶುಕ್ರವಾರ ಬೆಳಗ್ಗೆ ಮೃತಪಟ್ಟಿರುವುದಾಗಿ ರಾಜ್ ಕಮಲ್ ಪ್ರಕಾಶನ್ ವ್ಯವಸ್ಥಾಪಕ ನಿರ್ದೇಶಕ ಹಾಗೂ ಅವರ ಸ್ನೇಹಿತೆ ಅಶೋಕ್ ಮಹೇಶ್ವರಿ ತಿಳಿಸಿದ್ದಾರೆ.

ಕಳೆದೊಂದು ವಾರದಿಂದ ಐಸಿಯುನಲ್ಲಿದ್ದರೂ ಸಮಾಜದಲ್ಲಿ ಏನು ನಡೆಯುತ್ತಿದೆ ಎಂಬುದರ ಬಗ್ಗೆ ಚೆನ್ನಾಗಿ ಅರಿವಿತ್ತು ಎಂಬುದಾಗಿ ಮಹೇಶ್ವರಿ ತಿಳಿಸಿದ್ದಾರೆ.

ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿರುವ ಗುಜರಾತಿನಲ್ಲಿ 1925ರಲ್ಲಿ ಜನಿಸಿದ ಕೃಷ್ಣಾ ಸೊಬ್ತಿ  ತಮ್ಮ ಹೊಸ ಶೈಲಿಯ ಬರಹದಿಂದ ಪ್ರಸಿದ್ಧಿಯಾಗಿದ್ದರು. ಹಿಂದಿ, ಉರ್ದು, ಮತ್ತು ಪಂಜಾಬಿ ಸಂಸ್ಕೃತಗಳ ಪ್ರಭಾವ ಇವರ ಕೃತಿಯಲ್ಲಿನ ಪದಗಳ ಬಳಕೆಯಲ್ಲಿ ಮೇಳೈಸಿದೆ.
ಅವರ ಹಲವಾರು ಕೃತಿಗಳನ್ನು ಇತರ ಭಾರತೀಯ ಭಾಷೆಗಳಿಗಷ್ಟೇ ಅಲ್ಲ, ಸ್ಪೀಡಿಷ್, ರಷ್ಯನ್ ಮತ್ತು ಇಂಗ್ಲೀಷ್ ಭಾಷೆಗೂ ಅನುವಾದ ಮಾಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com