ಪ್ರಧಾನಿ ಮೋದಿ
ಪ್ರಧಾನಿ ಮೋದಿ

ಶಬರಿಮಲೆ ವಿವಾದ: ಕೇರಳ ಸಂಸ್ಕೃತಿಗೆ ಎಡ ಸರ್ಕಾರದಿಂದ ಅಗೌರವ- ಪ್ರಧಾನಿ ಮೋದಿ

ಕಮ್ಯೂನಿಸ್ಟ್ ಸರ್ಕಾರ ಕೇರಳದ ಸಂಸ್ಕೃತಿಯನ್ನು ಅಗೌರವ ನೀಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ.

ತ್ರಿಶೂರ್ : ಶಬರಿಮಲೆ ವಿವಾದ ಇಡೀ ದೇಶದ ಗಮನ ಸೆಳೆದಿದ್ದು, ದೇಶದ ಜನತೆ ಮಾನವೀಯ ದೃಷ್ಟಿಯಿಂದ ನೋಡುತ್ತಿದ್ದರೆ ಕಮ್ಯೂನಿಸ್ಟ್ ಸರ್ಕಾರ  ಕೇರಳದ ಸಂಸ್ಕೃತಿಯನ್ನು ಅಗೌರವ ನೀಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ.

ತ್ರಿಶೂರಿನಲ್ಲಿ ಇಂದು ಆಯೋಜಿಸಿದ್ದ ಸಾರ್ವಜನಿಕ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್  ಪಕ್ಷವಾಗಲೀ ಅಥವಾ ಕಮ್ಯೂನಿಸ್ಟ್ ಪಕ್ಷವಾಗಲೀ  ಮಹಿಳೆಯರ ಸಬಲೀಕರಣದತ್ತ ಏನೂ ಮಾಡಿಲ್ಲ, ತ್ರಿವಳಿ ತಲಾಖ್ ನಿಷೇಧಕ್ಕೂ ಕಾಂಗ್ರೆಸ್
ಬೆಂಬಲಿಸುತ್ತಿಲ್ಲ ಎಂದರು.

 ಭಾರತದಲ್ಲಿ ಹಲವು ಮಹಿಳಾ ಮುಖ್ಯಮಂತ್ರಿಗಳು ಆಡಳಿತ ನಡೆಸಿದ್ದಾರೆ. ಆದರೆ, ಕಮ್ಯೂನಿಸ್ಟ್ ಪಕ್ಷದಲ್ಲಿ ಒಬ್ಬ ಮಹಿಳಾ ನಾಯಕಿಯೂ ಇಲ್ಲ ಎಂದರು.

 ವಿಜ್ಞಾನಿ ನಂಬಿ ನಾರಾಯಣ್  ಬಂಧಿಸಿದ ಯುಡಿಎಫ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಮೋದಿ, ಎರಡು ದಶಕಗಳಿಗೂ ಹೆಚ್ಚು  ಕಾಲ ಇಸ್ರೋದಲ್ಲಿ ಶ್ರಮಿಸಿದ್ದ ನಂಬಿ ನಾರಾಯಣ್ ವಿರುದ್ಧ ಸುಳ್ಳು ಕೇಸ್ ದಾಖಲಿಸಲಾಗಿತ್ತು.ಆದರೆ, ಎನ್ ಡಿಎ ಸರ್ಕಾರ ಅವರಿಗೆ ಪದ್ಮ ಪ್ರಶಸ್ತಿ ನೀಡಿ ಗೌರವಿಸಿದೆ ಎಂದು ಮೋದಿ ಹೇಳಿದರು.

Related Stories

No stories found.

Advertisement

X
Kannada Prabha
www.kannadaprabha.com