ಲೋಟಸ್ ಗ್ರೂಪ್, ಸರವಣ ಸ್ಟೋರ್ಸ್ ಮೇಲೆ ಐಟಿ ಅಧಿಕಾರಿಗಳ ದಿಢೀರ್ ದಾಳಿ, ದಾಖಲೆ ಪರಿಶೀಲನೆ

ತಮಿಳುನಾಡಿನ ಖ್ಯಾತ ರಿಯಲ್ ಎಸ್ಟೇಟ್ ಉದ್ಯಮ ಸಂಸ್ಥೆ ಲೋಟಸ್ ಗ್ರೂಪ್ ಮತ್ತು ಖ್ಯಾತ ಶಾಪಿಂಗ್ ಮಾಲ್ ಸಂಸ್ಥೆ ಸರವಣ ಸಂಸ್ಥೆಗಳ ಕಚೇರಿಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ಮಾಡಿದ್ದು ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಚೆನ್ನೈ: ತಮಿಳುನಾಡಿನ ಖ್ಯಾತ ರಿಯಲ್ ಎಸ್ಟೇಟ್ ಉದ್ಯಮ ಸಂಸ್ಥೆ ಲೋಟಸ್ ಗ್ರೂಪ್ ಮತ್ತು ಖ್ಯಾತ ಶಾಪಿಂಗ್ ಮಾಲ್ ಸಂಸ್ಥೆ ಸರವಣ ಸಂಸ್ಥೆಗಳ ಕಚೇರಿಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ಮಾಡಿದ್ದು ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ.
ತಮಿಳುನಾಡಿನ ಖ್ಯಾತ ರಿಯಲ್ ಎಸ್ಟೇಟ್ ಸಂಸ್ಥೆಗಳಾದ ಜಿ ಸ್ಕ್ವೇರ್, ಲೋಟಸ್ ಗ್ರೂಪ್ ಸಂಸ್ಥೆ, ಸರವಣ ಸ್ಟೋರ್ಸ್ ನ ಕಚೇರಿಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಚೆನ್ನೈ 72 ಪ್ರದೇಶಗಳಲ್ಲಿ ಮತ್ತು ಕೊಯಮತ್ತೂರಿನ 2 ಪ್ರದೇಶಗಳಲ್ಲಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಚೆನ್ನೈನ ಆಳ್ವಾರ್ ಪೇಟೆಯಲ್ಲಿರುವ ಟಿಟಿಕೆ ರೋಡ್ ನಲ್ಲಿನ ಕಚೇರಿಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.
ಸರವಣ ಸ್ಟೋರ್ಸ್ ಮಾಲೀಕತ್ವದ ಶಾಪಿಂಗ್ ಮಾಲ್ ಮತ್ತು ಸರವಣ ಭವನ್ ಹೊಟೆಲ್ ಗಳ ಮೇಲೂ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com