ಗಾಂಧಿ ಫೋಟೋಗೆ ಗುಂಡಿಕ್ಕಿದ ಹಿಂದೂ ಮಹಾಸಭಾದ ವೆಬ್ ಸೈಟ್ ಹ್ಯಾಕ್

ಮಹಾತ್ಮ ಗಾಂಧಿ ಅವರ ಫೋಟೋಗೆ ಗುಂಡಿಕ್ಕುವ ಮೂಲಕ ಹುತಾತ್ಮರ ದಿನವನ್ನು ಶೌರ್ಯದಿನವನ್ನಾಗಿ ಆಚರಿಸಿದ ಹಿಂದೂ ಮಹಾಸಭಾದ ವೆಬ್ ಸೈಟ್ ಅನ್ನು ಕೇರಳ ಸೈಬರ್ ವಾರಿಯರ್ಸ್ ಹ್ಯಾಕ್ ಮಾಡಿದ್ದಾರೆ.
ಹಿಂದೂ ಮಹಾಸಭಾ ವೆಬ್ ಸೈಟ್ ನಲ್ಲಿ ಪೋಸ್ಟ್ ಆದ ಚಿತ್ರ
ಹಿಂದೂ ಮಹಾಸಭಾ ವೆಬ್ ಸೈಟ್ ನಲ್ಲಿ ಪೋಸ್ಟ್ ಆದ ಚಿತ್ರ
ಬೆಂಗಳೂರು: ಮಹಾತ್ಮ ಗಾಂಧಿ ಅವರ ಫೋಟೋಗೆ ಗುಂಡಿಕ್ಕುವ ಮೂಲಕ ಹುತಾತ್ಮರ ದಿನವನ್ನು ಶೌರ್ಯದಿನವನ್ನಾಗಿ ಆಚರಿಸಿದ ಹಿಂದೂ ಮಹಾಸಭಾದ ವೆಬ್ ಸೈಟ್ ಅನ್ನು ಕೇರಳ ಸೈಬರ್ ವಾರಿಯರ್ಸ್ ಹ್ಯಾಕ್ ಮಾಡಿದ್ದಾರೆ.
ಹಿಂದೂ ಮಹಾಸಭಾ ವೆಸ್ ಸೈಟ್ ಹ್ಯಾಕ್ ಮಾಡಿದ ಎಥಿಕಲ್ ಹ್ಯಾಕರ್ ಗಳ ತಂಡ, ಹಿಂದೂ ಮಹಾಸಭಾ ಮುರ್ದಾಬಾದ್ ಎಂದು ಹಾಕಿದ್ದಾರೆ. ಅಲ್ಲದೆ ಗಾಂಧೀಜಿಯವರು ಅಹಿಂಸೆಯ ಸರಿಯಾದ ಮಾರ್ಗವನ್ನು ಅನುಸರಿಸಲು ಜನರಿಗೆ ಇಂದಿಗೂ ಸ್ಫೂರ್ತಿಯಾಗಿದ್ದಾರೆ ಎಂಬ ಸಂದೇಶ ಹಾಕಿದ್ದಾರೆ.
"ನನ್ನ ಅನುಮತಿಯಿಲ್ಲದೆ ಯಾರೂ ನನ್ನನ್ನು ನೋಯಿಸುವುದಿಲ್ಲ. ಒಂದು ಕಣ್ಣಿಗೆ ಮತ್ತೊಂದು ಕಣ್ಣು ಪಡೆಯುವುದಾದರೆ ಇಡೀ ವಿಶ್ವವೇ ಕುರುಡಾಗಲಿದೆ' ಎಂದು ಹ್ಯಾಕರ್ಸ್ ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ ದೇಶ ದ್ರೋಹದ ಆರೋಪದ ಮೇಲೆ ಸರ್ಕಾರ ಇವರನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿದ್ದಾರೆ.
ನಿನ್ನೆ ಉತ್ತರ ಪ್ರದೇಶದ ಆಲಿಗಢದಲ್ಲಿ ಮಹಾತ್ಮ ಗಾಂಧಿ ಸಾವನ್ನಪ್ಪಿದ ಈ ದಿನವನ್ನು ಹಿಂದೂ ಮಹಾಸಭಾ  ಕಾರ್ಯಕರ್ತರು ಶೌರ್ಯದಿನವನ್ನಾಗಿ ಅದ್ಧೂರಿಯಾಗಿ ಆಚರಣೆ ಮಾಡಿ, ಸಿಹಿ ಹಂಚಿ ಸಂಭ್ರಮಿಸಿದ್ದರು.  ಅಲ್ಲದೇ ಮಹಾತ್ಮ ಗಾಂಧಿಯನ್ನು ಗುಂಡಿಕ್ಕಿ ಕೊಂದ ನಾಥುರಾಮ್​ ಗೋಡ್ಸೆಗೆ ಮಾಲಾರ್ಪಣೆ ಮಾಡಿ, ಗೋಡ್ಸೆ ಅಮರ್​ ರಹೇ ಎಂದು ಘೋಷಣೆ ಕೂಗಿದ್ದರು.
ಹಿಂದೂ ಮಹಾಸಭಾದ ರಾಷ್ಟ್ರೀಯ ಕಾರ್ಯದರ್ಶಿ  ಪೂಜಾ ಶಕುನ್​ ಪಾಂಡೆ ಮಹಾತ್ಮ ಗಾಂಧೀಜಿ ಚಿತ್ರಣಕ್ಕೆ ನಕಲಿ ಗನ್​ ನಿಂದ ಶೂಟ್​ ಮಾಡುವ ಮೂಲಕ  ಅವಮಾನ ಮಾಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com