ರಾಮಗಢ ಉಪಚುನಾವಣೆ: ಕಾಂಗ್ರೆಸ್ ಅಭ್ಯರ್ಥಗೆ 12,228 ಅಂತರದ ಜಯ

ರಾಜಸ್ಥಾನದ ರಾಮಗಢ ವಿಧಾನಸಭೆ ಕ್ಷೇತ್ರದಲ್ಲಿ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದೆ. ಕಾಂಗ್ರೆಸ್ ನ ಶಾಫಿಯಾ ಝುಬೈರ್ 12,228 ಮತಗಳ ಅಂತರದಿಂದ ಜಯ ಗಳಿಸಿದ್ದಾರೆ.
ರಾಮಗಢ ಉಪಚುನಾವಣೆ: ಕಾಂಗ್ರೆಸ್ ಅಭ್ಯರ್ಥಗೆ 12,228 ಅಂತರದ ಜಯ
ರಾಮಗಢ ಉಪಚುನಾವಣೆ: ಕಾಂಗ್ರೆಸ್ ಅಭ್ಯರ್ಥಗೆ 12,228 ಅಂತರದ ಜಯ
 ಜೈಪುರ: ರಾಜಸ್ಥಾನದ ರಾಮಗಢ ವಿಧಾನಸಭೆ ಕ್ಷೇತ್ರದಲ್ಲಿ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದೆ. ಕಾಂಗ್ರೆಸ್ ನ ಶಾಫಿಯಾ ಝುಬೈರ್ 12,228 ಮತಗಳ ಅಂತರದಿಂದ ಜಯ ಗಳಿಸಿದ್ದಾರೆ.
ಶಾಫಿಯಾ 83,311 ಮತಗಳನ್ನು ಪಡೆದಿದ್ದರೆ ಇವರ ಎದುರಾಳಿ ಬಿಜೆಪಿಯ ಸುವಂತ್ ಸಿಂಗ್ 71,083 ಮತ ಪಡೆದು ಎರಡನೇ ಸ್ಥಾನದಲ್ಲಿದ್ದಾರೆ.
ಜನವರಿ 28ರಂದು ನಡೆದಿದ್ದ ಮತದಾನದಲ್ಲಿ ಬರೋಬ್ಬರಿ 20 ಅಭ್ಯರ್ಥಿಗಳು ಕಣದಲ್ಲಿದ್ದರು. ಇದರಲ್ಲಿ ಕಾಂಗ್ರೆಸ್, ಬಿಜೆಪಿ, ಬಿಎಸ್ಪಿ ಪಕ್ಷಗಳ ಅಭ್ಯರ್ಥಿಗಳ ನಡುವೆ ತ್ರಿಕೋಣ ಸ್ಪರ್ಧೆ ಏರ್ಪಟ್ಟಿತ್ತು.
ಇದಕ್ಕೆ ಮುನ್ನ ಡಿಸೆಂಬರ್ 7ರಂದು ನಿಗದಿಯಾಗಿದ್ದ ಚುನಾವಣೆಯ ಮುನ್ನ ಬಿಎಸ್ಸ್ಪಿ ಅಭ್ಯರ್ಥಿ ಲಕ್ಷ್ಮಣ್ ಸಿಂಗ್ ನಿಧನರಾಗಿದ್ದ ಕಾರಣ ಚುನಾವಣೆ ಮುಂದೂಡಲ್ಪಟ್ಟಿತ್ತು.
ಗೆಹ್ಲೋಟ್ ಹರ್ಷ
ಉಪ ಚುನಾವಣೆ ಫಲಿತಾಂಶ ಬರುತ್ತಲೇ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್: ಸಂತಸ ವ್ಯಕ್ತಪಡಿಸಿದ್ದು "ಜನರು ಉತ್ತಮ ನಿರ್ಧಾರವನ್ನೇ ತೆಗೆದುಕೊಂಡಿದ್ದಾರೆ.ನನಗೆ ಖುಷಿಯಾಗಿದೆ. ನಾನು ಅವರಿಗೆ ಧನ್ಯವಾದ ಹೇಳುತ್ತೇನೆ.ಈ ಫಲಿತಾಂಶ ಲೋಕಸಭೆ ಚುನಾವಣೆಗೆ ಮುನ್ನ ಕಾಂಗ್ರೆಸ್ ಪಕ್ಷಕ್ಕ್ಕೆ ಚೇತೋಹಾರಿಯಾಗಿರಲಿದೆ" ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com