ಸ್ಕ್ರೂ ಡ್ರೈವರ್ ನಿಂದ ಪತ್ನಿ ಮೇಲೆ ಹಲ್ಲೆ, ಬಳಿಕ ತ್ರಿವಳಿ ತಲಾಖ್ ನೀಡಿದ ಪತಿ ಮಹಾಶಯ

ವ್ಯಕ್ತಿಯೊಬ್ಬ ಕೇವಲ 30 ರುಪಾಯಿಗಾಗಿ ಸ್ಕ್ರೂ ಡ್ರೈವರ್ ನಿಂದ ತನ್ನ ಪತ್ನಿ ಮೇಲೆ ಹಲ್ಲೆ ನಡೆಸಿ, ಸಾರ್ವಜನಿಕವಾಗಿಯೇ ತ್ರಿವಳಿ ತಲಾಖ್ ನೀಡಿದ ಘಟನೆ....

Published: 01st July 2019 12:00 PM  |   Last Updated: 01st July 2019 03:31 AM   |  A+A-


Man attacks wife, gives her triple talaq after she asks for Rs 30

ಸಾಂದರ್ಭಿಕ ಚಿತ್ರ

Posted By : LSB LSB
Source : The New Indian Express
ಲಖನೌ: ವ್ಯಕ್ತಿಯೊಬ್ಬ ಕೇವಲ 30 ರುಪಾಯಿಗಾಗಿ ಸ್ಕ್ರೂ ಡ್ರೈವರ್ ನಿಂದ ತನ್ನ ಪತ್ನಿ ಮೇಲೆ ಹಲ್ಲೆ ನಡೆಸಿ, ಸಾರ್ವಜನಿಕವಾಗಿಯೇ ತ್ರಿವಳಿ ತಲಾಖ್ ನೀಡಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಕಳೆದ ಶನಿವಾರ ಗ್ರೇಟರ್ ನೊಯ್ಡಾದ ರಾವ್ ಜೀ ಮಾರುಕಟ್ಟೆಯಲ್ಲಿ ಈ ಘಟನೆ ನಡೆದಿದ್ದು, ನನ್ನ ಪತಿ ಸಬೀರ್ ತನ್ನ ಮೇಲೆ ಹಲ್ಲೆ ನಡೆಸಿದ್ದಲ್ಲದೆ ತಡೆಯಲು ಬಂದನ ತನ್ನ ಅಳಿಯಂದಿರ ಮೇಲೆಯೂ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಪತ್ನಿ ಝೈನಬ್ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.

30 ವರ್ಷದ ಝೈನಬ್ ಹಾಗೂ 32 ವರ್ಷದ ಸಬೀರ್ ದಾಂಪತ್ಯ ಚೆನ್ನಾಗಿರಲಿಲ್ಲ. ಹೀಗಾಗಿ ವಿಚ್ಛೇದನಕ್ಕಾಗಿ ಸಬೀರ್ ನನ್ನ ಮಗಳ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಝೈನಬ್ ತಂದೆ ಮಾಧ್ಯಮಕ್ಕೆ ತಿಳಿಸಿದ್ದಾರೆ.

ನನ್ನ ಮಗಳು ಕೆಲವು ದಿನಗಳಿಂದ ನಮ್ಮೊಂದಿಗೆ ವಾಸಿಸುತ್ತಿದ್ದಳು. ಶುಕ್ರವಾರ ಅಳಿಯಂದಿರ ಮನೆಗೆ ಹೋದಾಗ ಸಬೀರ್ ವಿಚ್ಚೇದನ ನೀಡುವಂತೆ ಒತ್ತಾಯಿಸಿ, ಆಕೆ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ದೂರಿದ್ದಾರೆ.

ಸಬೀರ್ ನನ್ನ ಮಗಳ ಮೇಲೆ ಹಲ್ಲೆ ನಡೆಸುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಹಲವು ಬಾರಿ ಹಲ್ಲೆ ನಡೆಸಿದ್ದಾನೆ. ಆತನ ಕುಟುಂಬ ಸಹ ನನ್ನ ಮಗಳ ಮೇಲೆ ಹಲ್ಲೆ ಮಾಡಿದೆ ಎಂದು ಝೈನಬ್ ತಂದೆ ಆರೋಪಿಸಿದ್ದಾರೆ.

Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp