ಮುಂಬೈಯಲ್ಲಿ ಧಾರಾಕಾರ ಮಳೆ: ನೀರಿನಲ್ಲಿ ಮುಳುಗಿದ ಹಳಿ, ರೈಲು ಸಂಚಾರ ರದ್ದು, ಜನಜೀವನ ಅಸ್ತವ್ಯಸ್ತ

ರಾತ್ರಿಯಿಡೀ ಸುರಿದ ಧಾರಾಕಾರ ಮಳೆಗೆ ಮುಂಬೈ ನಗರಿಯ ಬಹುತೇಕ ಕಡೆಗಳಲ್ಲಿ ನೀರು ತುಂಬಿ ಪ್ರವಾಹ ಉಂಟಾಗಿದ್ದು ...
ಮಳೆಯಿಂದ ಪ್ರವಾಹ ಉಂಟಾದ ಮುಂಬೈ ನಗರಿಯ ರಸ್ತೆಗಳು
ಮಳೆಯಿಂದ ಪ್ರವಾಹ ಉಂಟಾದ ಮುಂಬೈ ನಗರಿಯ ರಸ್ತೆಗಳು
ಮುಂಬೈ; ರಾತ್ರಿಯಿಡೀ ಸುರಿದ ಧಾರಾಕಾರ ಮಳೆಗೆ ಮುಂಬೈ ನಗರಿಯ ಬಹುತೇಕ ಕಡೆಗಳಲ್ಲಿ ನೀರು ತುಂಬಿ ಪ್ರವಾಹ ಉಂಟಾಗಿದ್ದು ದಿನನಿತ್ಯದ ಜನಜೀವನ ಅಸ್ತವ್ಯಸ್ತವಾಗಿದೆ.

ಕಳೆದ ರಾತ್ರಿ ವಾಣಿಜ್ಯ ನಗರಿ ಮುಂಬೈಯಲ್ಲಿ 361 ಮಿಲಿ ಮೀಟರ್ ನಷ್ಟು ಧಾರಾಕಾರ ಮಳೆ ಸುರಿದಿದ್ದು ಇಂದು ನಸುಕಿನ ಜಾವ ಮುಂಬೈಯ ಪಲ್ಗರ್ ಪ್ರದೇಶದಲ್ಲಿ 4 ಗಂಟೆಯಿಂದ 5 ಗಂಟೆಯವರೆಗೆ 1 ಗಂಟೆಯಲ್ಲಿ 100 ಮಿಲಿ ಮೀಟರ್ ನಷ್ಟು ಮಳೆ ಸುರಿದಿದೆ.

ಪಶ್ಚಿಮ ರೈಲ್ವೆ ವಿಭಾಗದ 13 ರೈಲುಗಳ ಸಂಚಾರವನ್ನು ಇಂದು ಮಳೆಯ ಕಾರಣದಿಂದ ರದ್ದುಪಡಿಸಲಾಗಿದೆ. ಧಾರಾಕಾರ ಮಳೆ ನಿಂತ ನಂತರ ಪಲ್ಗರ್ ನಲ್ಲಿ ಬೆಳಗ್ಗೆ 8 ಗಂಟೆ 5 ನಿಮಿಷದ ವೇಳೆಗೆ ಗಂಟೆಗೆ 30 ಕಿಲೋ ಮೀಟರ್ ವೇಗದಲ್ಲಿ ಸುರಕ್ಷತೆ ದೃಷ್ಟಿಯಿಂದ ರೈಲು ಸಂಚಾರ ನಡೆಸಿದೆ. 

ಸಿಯೊನ್ ರೈಲ್ವೆ ನಿಲ್ದಾಣ ಮತ್ತು ಮಾತುಂಗ ರೈಲ್ವೆ ನಿಲ್ದಾಣದ ಮಧ್ಯೆ ರೈಲ್ವೆ ಹಳಿಗಳು ನೀರಿನಿಂದ ಮುಚ್ಚಲ್ಪಟ್ಟಿದೆ. ದಾದಾರ್ ಪೂರ್ವ ಪ್ರದೇಶದ ರಸ್ತೆಗಳಲ್ಲಿ ನೀರು ತುಂಬಿ ಮಕ್ಕಳು ಮಂಡಿಯವರೆಗೆ ತುಂಬಿದ ನೀರಿನಲ್ಲಿಯೇ ಸಂಚರಿಸುವ ದೃಶ್ಯ ಕಂಡುಬರುತ್ತಿದೆ.
 
ಈ ಮಧ್ಯೆ ಎರಡು ರೈಲುಗಳು ರದ್ದುಗೊಂಡಿದ್ದು ಒಂದು ರೈಲಿನ ಸಂಚಾರ ಬದಲಾವಣೆ ಮಾಡಲಾಗಿದೆ, ಇನ್ನೆರಡು ರೈಲುಗಳ ವೇಳಾಪಟ್ಟಿ ಬದಲಾವಣೆಯಾಗಿದೆ. ಜಂಬ್ರುಂಗ್ ಮತ್ತು ತಕುರ್ವಾಡಿ ಘಾಟಿ ಸೆಕ್ಷನ್ ನಲ್ಲಿ ಗೂಡ್ಸ್ ರೈಲು ಹಳಿ ತಪ್ಪಿರುವುದರಿಂದ ಸಂಚಾರಿ ರೈಲು ವೇಳಾಪಟ್ಟಿ ಬದಲಾವಣೆಯಾಗಿದೆ. 

ಮುಂಬೈ, ಥಾಣೆ, ರಾಯ್ ಗಾಢ್ ಮತ್ತು ಪಲ್ಗರ್ ಪ್ರದೇಶದಲ್ಲಿ ಇನ್ನೆರಡು ದಿನಗಳವರೆಗೆ ಧಾರಾಕಾರ ಮಳೆ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ವರದಿ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com