ಬ್ಯಾಂಕ್ ಹಗರಣ: ಕೋಲಾರ ಸೇರಿದಂತೆ 12 ರಾಜ್ಯಗಳ 50 ಸ್ಥಳಗಳಲ್ಲಿ ಸಿಬಿಐ ದಾಳಿ

ಬ್ಯಾಂಕ್ ವಂಚನೆ ಪ್ರಕರಣಗಳಿಗೆ ಸಂಬಂಧಿಸಿದಂತೆ ದೇಶಾದ್ಯಂತ 50 ಕ್ಕೂ ಹೆಚ್ಚು ಸ್ಥಳಗಳಲ್ಲಿ ಕೇಂದ್ರೀಯ ತನಿಖಾ ಸಂಸ್ಥೆ(ಸಿಬಿಐ) ಮಂಗಳವಾರ ದಾಳಿ...

Published: 02nd July 2019 12:00 PM  |   Last Updated: 02nd July 2019 02:57 AM   |  A+A-


Banking fraud: CBI carries out raids at 50 locations in 18 cities, 14 cases registered

ಸಾಂದರ್ಭಿಕ ಚಿತ್ರ

Posted By : LSB LSB
Source : UNI
ನವದೆಹಲಿ: ಬ್ಯಾಂಕ್ ವಂಚನೆ ಪ್ರಕರಣಗಳಿಗೆ ಸಂಬಂಧಿಸಿದಂತೆ ದೇಶಾದ್ಯಂತ 50 ಕ್ಕೂ ಹೆಚ್ಚು  ಸ್ಥಳಗಳಲ್ಲಿ ಕೇಂದ್ರೀಯ ತನಿಖಾ ಸಂಸ್ಥೆ(ಸಿಬಿಐ) ಮಂಗಳವಾರ ದಾಳಿ ನಡೆಸಿದ್ದು, ಶೋಧ ಮುಂದುವರೆಸಿದೆ. 

12 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 18 ವಿವಿಧ ನಗರಗಳಲ್ಲಿ ಸಿಬಿಐ ಶೋಧ ನಡೆಯುತ್ತಿದೆ.

ದೆಹಲಿ, ಮುಂಬೈ, ಲೂಧಿಯಾನ, ಥಾಣೆ, ವಲ್ಸಾದ್, ಪುಣೆ, ಪಳನಿ, ಗಯಾ, ಗುರುಗ್ರಾಮ್, ಚಂಡೀಗಢ, ಭೋಪಾಲ್, ಸೂರತ್ ಮತ್ತು ಕರ್ನಾಟಕದ ಕೋಲಾರ ಸೇರಿದಂತೆ ವಿವಿಧ ನಗರಗಳಲ್ಲಿ ಶೋಧ  ನಡೆಸಲಾಗುತ್ತಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಬಾಂಕ್ ವಂಚನೆಗೆ ಸಂಬಂಧಿಸಿದಂತೆ ವಿವಿಧ ಸಂಸ್ಥೆಗಳು, ಪ್ರವರ್ತಕರು ಮತ್ತು ಸಹವರ್ತಿಗಳು ಮತ್ತು ಬ್ಯಾಂಕ್ ಅಧಿಕಾರಿಗಳು  ಒಳಗೊಂಡಂತೆ ಆರೋಪಿಗಳ ವಿರುದ್ಧ ಸುಮಾರು 14 ಪ್ರಕರಣಗಳು ದಾಖಲಾಗಿವೆ.
Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp