ಪ್ರಧಾನಿ ಮೋದಿಗೆ ನನ್ನ ಐಡಿಯಾಗಳು ಬೇಕಾಗಿಲ್ಲ, ಹಾಗಾಗಿ ಚೀನಾಗೆ ತೆರಳುವೆ: ಸುಬ್ರಮಣಿಯನ್ ಸ್ವಾಮಿ

ಪ್ರಧಾನಿ ನರೇಂದ್ರ ಮೋದಿ ನನ್ನ ಮಾತುಗಳನ್ನು ಕೇಳುತ್ತಿಲ್ಲ ಹಾಗಾಗಿ ನಾನು ಚೀನಾಗೆ ತೆರಳುವೆ ಎಂದು ಹಿರಿಯ ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ.
ಸುಬ್ರಮಣಿಯನ್ ಸ್ವಾಮಿ
ಸುಬ್ರಮಣಿಯನ್ ಸ್ವಾಮಿ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನನ್ನ ಮಾತುಗಳನ್ನು ಕೇಳುತ್ತಿಲ್ಲ ಹಾಗಾಗಿ ನಾನು ಚೀನಾಗೆ ತೆರಳುವೆ ಎಂದು ಹಿರಿಯ ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ.
ಪ್ರಧಾನಿಗಳಿಗೆ ನನ್ನ ಮಾತನ್ನು ಕೇಳುವ ಆಸಕ್ತಿ ಇಲ್ಲ, ಚೀನಾದಲ್ಲಿ ನಡೆಯುವ ವಿದ್ವಾಂಸರ ಸಭೆಗೆ ನನಗೆ ಆಹ್ವಾನ ಬಂದಿದೆ, ಹಾಗಾಗಿ ನಾನು ಚೀನಾಗೆ ತೆರಳುತ್ತೇನೆ ಎಂದು ಸುಬ್ರಮಣಿಯನ್ ಸ್ವಾಮಿ ಟ್ವಿಟ್ ಮಾಡಿದ್ದಾರೆ.
ಪ್ರಧಾನಿಗಳ ವಿರುದ್ಧ ತಮ್ಮ ಅಸಮಾಧಾನ ಹೊರಹಾಕಿರುವ ಸ್ವಾಮಿ ಚೀನಾದ ಪ್ರಸಿದ್ದ ತ್ರಿಂಪುವಾ ವಿಶ್ವವಿದ್ಯಾನಿಲಯ “China’s Economic Development: A Review Of Last 70 years.”  ಎಂಬ ವಿಚಾರದ ಕುರಿತು ಮಾತನಾಡಲು ನನಗೆ ಆಹ್ವಾನ ನೀಡಿದೆ. ಈ ವರ್ಷ ಸಪ್ಟೆಂಬರ್ ನಲ್ಲಿ ಚೀನಾದ ವಿದ್ವಾಂಸರ ಸಭೆ ನಡೆಯಲಿದೆ. ಭಾರತದಲ್ಲಿ ನಮೋ ನನ್ನ ಅಭಿಪ್ರಾಯ ಕೇಳಲು ಆಸಕ್ತರಾಗಿಲ್ಲದ ಕಾರಣ ನಾನು ಚೀನಾಗೆ ತೆರಳಬಹುದು" ಎಂದು ಹೇಳಿದ್ದಾರೆ.
ಸ್ವಾಮಿ ಅವರ ಟ್ವೀಟ್ ಗೆ ವಿಭಿನ್ನ ಪ್ರತಿಕ್ರಿಯೆಗಳು ಬಂದಿದ್ದು ಸುಬ್ರಮಣಿಯನ್ ಸ್ವಾಮಿ ದೇಶ ಬಿಟ್ಟು ಹೋಗುವ ಬೆದರಿಕೆ ಹಾಕುತ್ತಿದ್ದಾರೆಯೆ? ಇದಕ್ಕೆ ಕಾರಣವೇನು? ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com