ಮುಂಬೈಯಲ್ಲಿ ಮಹಾಮಳೆ: ಬೆಂಗಳೂರತ್ತ ಮುಖ ಮಾಡಿದ ವಿಮಾನಗಳು

ವಾಣಿಜ್ಯ ನಗರಿ ಮುಂಬೈಯಲ್ಲಿ ಧಾರಾಕಾರ ಮಳೆಯಿಂದಾಗಿ ವಿಮಾನಗಳ ಹಾರಾಟಕ್ಕೆ ...
ಮುಂಬೈಯ ತಿಲಕನಗರ ರೈಲು ನಿಲ್ದಾಣದ ಹತ್ತಿರ ನೀರು ತುಂಬಿರುವುದು
ಮುಂಬೈಯ ತಿಲಕನಗರ ರೈಲು ನಿಲ್ದಾಣದ ಹತ್ತಿರ ನೀರು ತುಂಬಿರುವುದು
ಬೆಂಗಳೂರು: ವಾಣಿಜ್ಯ ನಗರಿ ಮುಂಬೈಯಲ್ಲಿ ಧಾರಾಕಾರ ಮಳೆಯಿಂದಾಗಿ ವಿಮಾನಗಳ ಹಾರಾಟಕ್ಕೆ ಅಡಚಣೆಯುಂಟಾಗಿದ್ದು 12 ವಿಮಾನಗಳ ಹಾರಾಟ ಮಾರ್ಗ ಬದಲಾವಣೆಯಾಗಿದೆ. ಕೆಲವು ವಿಮಾನಗಳ ಹಾರಾಟ ರದ್ದುಗೊಂಡಿದೆ. ಅಲ್ಲದೆ ಗದಗ ಮತ್ತು ಮುಂಬೈ ನಡುವೆ ರೈಲು ಸಂಚಾರ ಕೂಡ ರದ್ದಾಗಿದೆ.
ಮುಂಬೈ ವಿಮಾನ ನಿಲ್ದಾಣದಲ್ಲಿ ಬಂದಿಳಿಯುವ ಅಂತಾರಾಷ್ಟ್ರೀಯ ವಿಮಾನಗಳಿಗೆ ತೀವ್ರ ಅಡಚಣೆಯುಂಟಾಗಿದ್ದು ವಿಮಾನಗಳನ್ನು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬದಲಾಯಿಸಲಾಗಿದೆ. ಮೂಲಗಳ ಪ್ರಕಾರ ಖತಾರ್ ಏರ್ ವೇಸ್ ಬಿ 773, ಲುಫ್ತಾಂಸ ಬಿ 747, ಜಝೀರಾ ಏರ್ ವೇಸ್ ಎ320, ಏರ್ ಇಂಡಿಯಾ ಎಐ787 ಬೆಂಗಳೂರಿಗೆ ಮಾರ್ಗ ಬದಲಾವಣೆ ಮಾಡಿದ ವಿಮಾನಗಳಾಗಿವೆ.
ಮುಂಬೈಯ ಎರಡು ರನ್ ವೇಗಳಲ್ಲಿ ಸಣ್ಣ ರನ್ ವೇ ಮಾತ್ರ ಕಾರ್ಯನಿರ್ವಹಿಸುತ್ತಿದೆ. ಕಾರ್ಯನಿರ್ವಹಣೆ ಮಾಡಲು ಸಾಧ್ಯವಿರುವ ವಿಮಾನಗಳನ್ನು ಮಾತ್ರ ಕಾರ್ಯನಿರ್ವಹಿಸುತ್ತಿದ್ದೇವೆ. ಉಳಿದವುಗಳ ಮಾರ್ಗ ಬದಲಾವಣೆ ಮಾಡಲಾಗಿದೆ. ಸ್ಪೈಸ್ ಜೆಟ್ ನ ದೊಡ್ಡ ರನ್ ವೇ ಮಳೆಯಿಂದಾಗಿ ಮುಚ್ಚಲ್ಪಟ್ಟಿದ್ದು ಇನ್ನೂ ಸಂಚಾರ ಆರಂಭಿಸಿಲ್ಲ ಎಂದು ಏರ್ ಇಂಡಿಯಾ ವಕ್ತಾರರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com