ಮುಂಬೈ: ಡೊಂಬಿವ್ಲಿ ರೈಲು ನಿಲ್ದಾಣದಲ್ಲಿ 1 ರೂ. ಕ್ಲಿನಿಕ್ ವೈದ್ಯರ ನೆರವಿನಿಂದ ಗಂಡು ಮಗುವಿಗೆ ಜನ್ಮ ನೀಡಿದ ಮಹಿಳೆ

ಮಹಾರಾಷ್ಟ್ರದ ಡೊಂಬಿವ್ಲಿ ರೈಲು ನಿಲ್ದಾಣದಲ್ಲಿಂದು 29 ವರ್ಷದ ಮಹಿಳೆಯೊಬ್ಬರು ಇಂದು ಬೆಳಗ್ಗೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಒಂದು ರೂಪಾಯಿ ಕ್ಲಿನಿಕ್ ನ ವೈದ್ಯರು ಹಾಗೂ ನರ್ಸ್ ಸುರಕ್ಷಿತವಾಗಿ ಹೆರಿಗೆ ಮಾಡಿಸಿದ್ದಾರೆ.
ಗರ್ಭೀಣಿ ಮಹಿಳೆಯರಿಗೆ ವೈದ್ಯರ ನೆರವಿನ ಚಿತ್ರ
ಗರ್ಭೀಣಿ ಮಹಿಳೆಯರಿಗೆ ವೈದ್ಯರ ನೆರವಿನ ಚಿತ್ರ
ಡೊಂಬಿವ್ಲಿ:  ಮಹಾರಾಷ್ಟ್ರದ ಡೊಂಬಿವ್ಲಿ ರೈಲು ನಿಲ್ದಾಣದಲ್ಲಿಂದು 29 ವರ್ಷದ ಮಹಿಳೆಯೊಬ್ಬರು ಇಂದು ಬೆಳಗ್ಗೆ  ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಒಂದು ರೂಪಾಯಿ ಕ್ಲಿನಿಕ್ ನ ವೈದ್ಯರು ಹಾಗೂ ನರ್ಸ್  ಸುರಕ್ಷಿತವಾಗಿ ಹೆರಿಗೆ ಮಾಡಿಸಿದ್ದು, ತಾಯಿ ಹಾಗೂ ಮಗು ಚೆನ್ನಾಗಿದ್ದಾರೆ ಎಂದು ತಿಳಿದುಬಂದಿದೆ. 
ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಗರ್ಭಿಣಿ ಮಹಿಳೆ ಕಾಮ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಪ್ರಯಾಣಿಸುತ್ತಿದ್ದಾಗ ಭಾರೀ ಮಳೆಯಿಂದಾಗಿ ರೈಲು ಬರುವುದು ತಡವಾಗಿದೆ. ಪ್ರತಿನಿತ್ಯ ಜನದಟ್ಟಣೆಯಿಂದ ಕೂಡಿರುವ ಈ ರೈಲು ನಿಲ್ದಾಣದಲ್ಲಿ ಇಂದು ಬೆಳಗ್ಗೆ ರೈಲು ಬರುವುದು  10-15 ನಿಮಿಷ ವಿಳಂಬವಾಗಿದೆ. 
ಜನದಟ್ಟಣೆಯ ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಒಂದು ರೂಪಾಯಿ ಕ್ಲಿನಿಕ್ ನ ವೈದ್ಯರು ಹಾಗೂ ನರ್ಸ್  ಸುರಕ್ಷಿತವಾಗಿ ಹೆರಿಗೆ ಮಾಡಿಸಿದ್ದಾರೆ.  ಒಂದು ರೂಪಾಯಿ ಕ್ಲಿನಿಕ್ ಕೇವಲ 1 ರೂಪಾಯಿಗೆ ಪ್ರಯಾಣಿಕರಿಗೆ ಸೂಕ್ತ ವೈದ್ಯಕೀಯ ನೆರವು ನೀಡುತ್ತಾ ಬಂದಿದ್ದು, ಹೆಸರು ಪಡೆದುಕೊಂಡಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com