ಭಾರತದ ಆರ್ಥಿಕತೆ ಬಗ್ಗೆ ಕೇಂದ್ರ ಸರ್ಕಾರ ನಿರಾಶಾದಾಯಕವಾಗಿದೆ: ಪಿ ಚಿದಂಬರಂ

ಗುರುವಾರ ಸಂಸತ್ತಿನಲ್ಲಿ ಕೇಂದ್ರ ಸರ್ಕಾರ ಮಂಡಿಸಿದ ಬಜೆಟ್ ಪೂರ್ವ ಆರ್ಥಿಕ ಸಮೀಕ್ಷೆಯಲ್ಲಿ ಯಾವುದೇ ವಲಯವಾರು ಬೆಳವಣಿಗೆಯ ಪ್ರಸ್ತಾಪವೇ ಇಲ್ಲ. ಸರ್ಕಾರವೇ ಆರ್ಥಿಕತೆಯ ಬಗ್ಗೆ ನಿರಾಶಾವಾದಿಯಾಗಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಪಿ ಚದಂಬರಂ ಹೇಳಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಗುರುವಾರ ಸಂಸತ್ತಿನಲ್ಲಿ ಕೇಂದ್ರ ಸರ್ಕಾರ ಮಂಡಿಸಿದ ಬಜೆಟ್ ಪೂರ್ವ ಆರ್ಥಿಕ ಸಮೀಕ್ಷೆಯಲ್ಲಿ ಯಾವುದೇ ವಲಯವಾರು ಬೆಳವಣಿಗೆಯ ಪ್ರಸ್ತಾಪವೇ ಇಲ್ಲ. ಸರ್ಕಾರವೇ ಆರ್ಥಿಕತೆಯ ಬಗ್ಗೆ ನಿರಾಶಾವಾದಿಯಾಗಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಪಿ ಚದಂಬರಂ ಹೇಳಿದ್ದಾರೆ. 
ಈ ಬಗ್ಗೆ ಟ್ವೀಟ್ ಮಾಡಿ ತಮ್ಮ ಹೇಳಿಕೆ ಬಿಡುಗಡೆ ಮಾಡಿರುವ ಪಿ ಚಿದಂಬರಂ ಅವರು, '2018-19ರ ಆರ್ಥಿಕ ಸಮೀಕ್ಷೆಯ ಆವಿಷ್ಕಾರಗಳು ಸಕಾರಾತ್ಮಕ ಅಥವಾ ಉತ್ತೇಜನಕಾರಿಯಲ್ಲ. ಸರ್ಕಾರ ಮಂಡಿಸಿರುವ ಆರ್ಥಿಕ ಸಮೀಕ್ಷೆಯನ್ನೂ ಸೂಕ್ಷ್ಮವಾಗಿ ಗಮನಿಸಿದರೆ, ಕೇಂದ್ರ ಸರ್ಕಾರವು ಆರ್ಥಿಕತೆಯ ಬಗ್ಗೆ ನಿರಾಶಾವಾದಿಯಾಗಿದೆ ಎಂದು ನನಗೆ ತೋರುತ್ತದೆ. ನಾನು 2019-20 ರ ಆರ್ಥಿಕ ಸಮೀಕ್ಷೆಯನ್ನು ನೋಡಿದೆ. 2019-20ರಲ್ಲಿ ಆರ್ಥಿಕತೆಯ ಬೆಳವಣಿಗೆಯು ಶೇಕಡಾ 7 ರಷ್ಟಾಗುತ್ತದೆ ಎಂದು ನಿರೀಕ್ಷಿಸಲಾಗಿದೆ. ಆದರೆ ಇದರ ಬಗ್ಗೆ ನಿಖರವಾಗಿ ವಲಯವಾರು ಮಾಹಿತಿ ಇಲ್ಲವೆಂದು ಅವರು ಕಿಡಿಕಾರಿದ್ದಾರೆ.
ಸರ್ಕಾರ ಮಂಡಿಸಿರುವ ಆರ್ಥಿಕ ಸಮೀಕ್ಷೆಯ ಅಂಶಗಳಾದ ನಿಧಾನಗತಿಯ ಬೆಳವಣಿಗೆ, ಆದಾಯದ ಕೊರತೆ, ಹಣಕಾಸಿನ ಕೊರತೆಯ ಗುರಿಯನ್ನು ರಾಜಿ ಮಾಡಿಕೊಳ್ಳದೆ ಸಂಪನ್ಮೂಲಗಳನ್ನು ಹುಡುಕುವುದು ಮತ್ತು ಚಾಲ್ತಿ ಖಾತೆಯ ಮೇಲೆ ತೈಲ ಬೆಲೆಗಳ ಪ್ರಭಾವ, ಹದಿನೈದನೇ ಹಣಕಾಸು ಶಿಫಾರಸುಗಳು ಇವುಗಳಲ್ಲಿ ಯಾವುದೂ ಸಕಾರಾತ್ಮಕ ಅಥವಾ ಉತ್ತೇಜನಕಾರಿಯಲ್ಲ ಎಂದೂ ಪಿ ಚಿದಂಬರಂ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com