5 ಟ್ರಿಲಿಯಿನ್ ಡಾಲರ್ ಆರ್ಥಿಕತೆಗೆ ಮೋದಿ 2.0 ಸರ್ಕಾರದ ಮಾರ್ಗಸೂಚಿ?

ಕೆಲಹೊತ್ತಿನಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸುತ್ತಿರುವ ಮೋದಿ 2.0 ಸರ್ಕಾರದ ಮೊದಲ ಬಜೆಟ್ ಮೇಲೆ ನಿರೀಕ್ಷೆಗಳು ಗರಿಗೆದರಿವೆ.
ನವದೆಹಲಿ: ಕೆಲಹೊತ್ತಿನಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸುತ್ತಿರುವ   ಮೋದಿ 2.0 ಸರ್ಕಾರದ ಮೊದಲ ಬಜೆಟ್ ಮೇಲೆ ನಿರೀಕ್ಷೆಗಳು ಗರಿಗೆದರಿವೆ.
 ಆದರೆ ನಿರ್ಮಲಾ ಸೀತಾರಾಮನ್ ನಿನ್ನೆ ಮಂಡಿಸಿದ 2018-19ರ ಅವಧಿಯ ಆರ್ಥಿಕ ಸಮೀಕ್ಷೆಯಲ್ಲಿ 2020ರ ಆರ್ಥಿಕ ವರ್ಷದಲ್ಲಿ ಜೆಡಿಪಿ ಅಂದಾಜು ಶೇ. 7 ರಲ್ಲಿ ಮುಂದುವರೆಯಲಿದೆ ಎಂಬ ಮುನ್ಸೂಚನೆ ನೀಡಿದ್ದು, ದೊಡ್ಡ ಘೋಷಣೆಗಳು ಅಸಂಭವ ಎಂಬ ಸುಳಿವು ನೀಡಿದ್ದಾರೆ. 
ಮೂಲಸೌಕರ್ಯ ಅಭಿವೃದ್ಧಿಗಾಗಿ ಭಾರತ  ಪ್ರಸ್ತುತ 100-110 ಬಿಲಿಯನ್ ವೆಚ್ಚ ಮಾಡುತ್ತಿದ್ದು, ಇದು 200 ಬಿಲಿಯನ್ ಡಾಲರ್ ನಷ್ಟು ವೆಚ್ಚ ಮಾಡಬೇಕಾದ ಅಗತ್ಯವಿದೆ ಎಂದು ಭಾರತದ ಮುಖ್ಯ ಆರ್ಥಿಕ ಸಲಹೆಗಾರ ಕೃಷ್ಣಮೂರ್ತಿ ಸುಬ್ರಮಣಿಯನ್ ಹೇಳುತ್ತಾರೆ. ಆದರೆ, ಹಣಕಾಸು ಹೊಂದಿಸುವುದು ದೊಡ್ಡ ಸವಾಲಾಗಿದೆ. 
2020ನೇ ಸಾಲಿನ ಬಜೆಟ್ ನಲ್ಲಿ ಬಿಎಸ್ ಎನ್ ಎಲ್ ಮತ್ತು ಎಂಟಿಎನ್ ಎಲ್ ನಂತಹ ಸರ್ಕಾರಿ ಸಂಸ್ಥೆಗಳಿಗೆ ಪ್ಯಾಕೇಜ್ ನೀಡುವ ಸಾಧ್ಯತೆ ಇದೆ. ಬ್ಯಾಂಕಿಂಗ್ ಕ್ಷೇತ್ರದ ಕಾರ್ಯಕ್ಷಮತೆಯನ್ನು ಸುಧಾರಿಸುವ ಮೂಲಕ ಸೀತಾರಾಮನ್ ಎಫ್ ಡಿಐ ಕ್ಷೇತ್ರದಲ್ಲಿ ಹೂಡಿಕೆ ಹೆಚ್ಚಳವನ್ನು ಪ್ರಸ್ತಾಪಿಸುವ ಸಾಧ್ಯತೆ ಇದೆ.
ತೆರಿಗೆ ಮೂಲ ಹಾಗೂ ದರಗಳನ್ನು ಹೊಂದಿಸಲು ಸರ್ಕಾರ ಐದು ವರ್ಷ ತೆಗೆದುಕೊಂಡಿತ್ತು. ಈಗ ತೆರಿಗೆದಾರರು ಕೊಡುಗೆಗಳನ್ನು ನಿರೀಕ್ಷಿಸುತ್ತಿದ್ದಾರೆ.ಎಲ್ಲಾ ವ್ಯವಹಾರಗಳ ಮೇಲೆ ಶೇ. 25 ರಷ್ಟು ತೆರಿಗೆ ಸ್ಲಾಬ್  ಬಗ್ಗೆ ಸೀತಾರಾಮನ್ ಬಜೆಟ್ ನಲ್ಲಿ ಪ್ರಸ್ತಾಪಿಸುವ ಸಾಧ್ಯತೆ ಇದೆ ಎಂದು ಉದ್ದಿಮೆದಾರರು ಭರವಸೆ ಹೊಂದಿದ್ದಾರೆ. ಆದರೆ, ತೆರಿಗೆ ಆದಾಯ ಈಗಾಗಲೇ ಕ್ಷೀಣಿಸಿದ್ದು, ಇಂತಹ ಪ್ರಸ್ತಾಪ ಅಸಂಭವ ಎನ್ನಲಾಗುತ್ತಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com