ಚಂದ್ರಯಾನ-2 ಉಡಾವಣೆಗೆ ಮುನ್ನವೇ 11 ಸಾವಿರ ಕೋಟಿ ಗಡಿ ದಾಟಿದ ಇಸ್ರೊ ಖರ್ಚು!

ಭಾರತದ ಅಂತರಿಕ್ಷ ಯೋಜನೆಗಳಿಗೆ ಉತ್ತೇಜನ ನೀಡಲು ಕೇಂದ್ರ ಸರ್ಕಾರ ಅಂತರಿಕ್ಷ ಇಲಾಖೆಗೆ ಹಣಕಾಸಿನ ...
ಬೆಂಗಳೂರಿನ ಇಸ್ರೊ ಕೇಂದ್ರದಲ್ಲಿ ಚಂದ್ರಯಾನ-2 ಉಡಾವಣೆಗೆ ನಡೆಯುತ್ತಿರುವ ಸಿದ್ಧತೆ
ಬೆಂಗಳೂರಿನ ಇಸ್ರೊ ಕೇಂದ್ರದಲ್ಲಿ ಚಂದ್ರಯಾನ-2 ಉಡಾವಣೆಗೆ ನಡೆಯುತ್ತಿರುವ ಸಿದ್ಧತೆ
ಚೆನ್ನೈ: ಭಾರತದ ಅಂತರಿಕ್ಷ ಯೋಜನೆಗಳಿಗೆ ಉತ್ತೇಜನ ನೀಡಲು ಕೇಂದ್ರ ಸರ್ಕಾರ ಅಂತರಿಕ್ಷ ಇಲಾಖೆಗೆ ಹಣಕಾಸಿನ ನೆರವನ್ನು 11 ಸಾವಿರದ 177.46 ಕೋಟಿ ರೂಪಾಯಿಗೆ ಏರಿಕೆ ಮಾಡಿದ್ದಾರೆ. ಇದರ ಜೊತೆಗೆ ಕೇಂದ್ರ ಸರ್ಕಾರ ನ್ಯೂ ಸ್ಪೇಸ್ ಇಂಡಿಯಾ ಲಿಮಿಟೆಡ್ (ಎನ್ಎಸ್ಐಎಲ್) ಸಾರ್ವಜನಿಕ ವಲಯವನ್ನು ರಚನೆ ಮಾಡುವುದಾಗಿ ಘೋಷಿಸಿದೆ.
ಇಸ್ರೊ ಸಂಸ್ಥೆ ಅಭಿವೃದ್ಧಿಪಡಿಸಿದ ಹಲವು ಉತ್ಪನ್ನಗಳನ್ನು ವಾಣಿಜ್ಯೀಕರಣಗೊಳಿಸಿ ಅಂತರಿಕ್ಷ ಇಲಾಖೆ ಜೊತೆಗೆ ಸೇರಿಸುವ ಕೆಲಸ ಮಾಡುತ್ತಿದೆ. ಉಡ್ಡಯನ ವಾಹಕ, ತಂತ್ರಜ್ಞಾನಗಳ ವರ್ಗಾವಣೆ ಮತ್ತು ಅಂತರಿಕ್ಷ ಉತ್ಪನ್ನಗಳ ಮಾರುಕಟ್ಟೆ ಮುಂತಾದವು ಒಳಗೊಂಡಿರುತ್ತದೆ.
ಇದೇ ತಿಂಗಳ 15ರಂದು ಚಂದ್ರಯಾನ-2 ಉಡ್ಡಯನವಾಗಲಿದ್ದು, ಅದು ಯಶಸ್ವಿಯಾದರೆ ಚಂದ್ರನ ಮೇಲ್ಮೈಯಲ್ಲಿ ಯಶಸ್ವಿಯಾಗಿ ಇಳಿದ ನಾಲ್ಕನೇ ದೇಶ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಲಿದೆ. ವಿಶ್ವದಲ್ಲಿ ಅಂತರಿಕ್ಷ ಕಾರ್ಯಕ್ರಮಗಳಲ್ಲಿ ಮುಂಚೂಣಿಯಲ್ಲಿರುವ ದೇಶಗಳ ಸಾಲಿನಲ್ಲಿ ಭಾರತ ನಿಲ್ಲಲಿದೆ. 
ಚಂದ್ರಯಾನ-2 ನಿರ್ಮಾಣ ಮತ್ತು ಅದರ ಉಡಾವಣೆಗೆ ಇದೇ ಮೊದಲ ಬಾರಿಗೆ ಇಸ್ರೊದ ಖರ್ಚುವೆಚ್ಚ 11 ಸಾವಿರ ಕೋಟಿ ರೂಪಾಯಿ ಗಡಿ ದಾಟಿದೆ. 2017-18ರಲ್ಲಿ ಇದಕ್ಕೆ ಸರ್ಕಾರ 8 ಸಾವಿರದ 053 ಕೋಟಿ ರೂಪಾಯಿ ಅನುದಾನ, 2018-19ರಲ್ಲಿ ಪರಿಷ್ಕರಿಸಿ 9 ಸಾವಿರದ 918 ಕೋಟಿ ರೂಪಾಯಿ ಅನುದಾನವೆಂದು ನೀಡಿತ್ತು. ಸರ್ಕಾರದ ಅನುದಾನ ಮೂರು ವಿಭಾಗಗಳಿಗೆ ಅಂತರಿಕ್ಷ ತಂತ್ರಜ್ಞಾನ, ಅಂತರಿಕ್ಷ ಅಪ್ಲಿಕೇಶನ್ ಮತ್ತು ಇನ್ಸಾಟ್ ಸ್ಯಾಟಲೈಟ್ ವ್ಯವಸ್ಥೆಗೆ ಎಂದು ಸರ್ಕಾರ ಅನುದಾನ ಬಿಡುಗಡೆ ಮಾಡುತ್ತದೆ.
ಇದುವರೆಗೆ ಕೇಂದ್ರಸರ್ಕಾರ ಚಂದ್ರಯಾನ-2 ಯೋಜನೆಗೆ 8 ಸಾವಿರದ 407.59 ಕೋಟಿ ರೂಪಾಯಿ ಅನುದಾನವನ್ನು ಅಂತರಿಕ್ಷ ತಂತ್ರಜ್ಞಾನಕ್ಕೆ, ಸಾವಿರದ 885.45 ಕೋಟಿ ರೂಪಾಯಿಗಳನ್ನು ಅಂತರಿಕ್ಷ ಅಪ್ಲಿಕೇಶನ್ ಗೆ ಮತ್ತು 884.42 ಕೋಟಿ ರೂಪಾಯಿಗಳನ್ನು ಇನ್ಸಾಟ್ ಸ್ಯಾಟಲೈಟ್ ವ್ಯವಸ್ಥೆಗಳಿಗೆ ನೀಡಿದೆ.
2019ನೇ ವರ್ಷ ನಮಗೆ ಅತ್ಯಂತ ಸವಾಲಿನ ಭರವಸೆಯ ವರ್ಷವೆಂದು ಅನಿಸುತ್ತಿದ್ದು ಇಸ್ರೊ 32 ಯೋಜಿತ ಕಾರ್ಯಾಚರಣೆ(14 ಉಡ್ಡಯನ ವಾಹಕ, 17 ಸ್ಯಾಟಲೈಟ್ ಮತ್ತು 1 ಟೆಕ್ ಡೆಮೊ ಮಿಷನ್)ಗಳಾಗಿವೆ ಎಂದು ಇಸ್ರೊ ಅಧ್ಯಕ್ಷ ಕೆ ಶಿವನ್ ಹೇಳಿದ್ದಾರೆ. ಇತ್ತೀಚೆಗೆ ಇಸ್ರೊ ಬೆಂಗಳೂರಿನಲ್ಲಿ ಹ್ಯೂಮನ್ ಸ್ಪೇಸ್ ಫ್ಲೈಟ್ ಸೆಂಟರ್ ನ್ನು ತೆರೆದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com